ಯಾರು 'ಸುಬ್‌ಹಾನಲ್ಲಾಹಿಲ್ ಅಝೀಮ್ ವಬಿ ಹಮ್‌ದಿಹಿ' (ಮಹೋನ್ನತನಾದ ಅಲ್ಲಾಹು ಪರಿಶುದ್ಧನು ಮತ್ತು ಅವನಿಗೆ ಸರ್ವಸ್ತುತಿಗಳು) ಎಂದು…

ಯಾರು 'ಸುಬ್‌ಹಾನಲ್ಲಾಹಿಲ್ ಅಝೀಮ್ ವಬಿ ಹಮ್‌ದಿಹಿ' (ಮಹೋನ್ನತನಾದ ಅಲ್ಲಾಹು ಪರಿಶುದ್ಧನು ಮತ್ತು ಅವನಿಗೆ ಸರ್ವಸ್ತುತಿಗಳು) ಎಂದು ಹೇಳುತ್ತಾನೋ, ಅವನಿಗಾಗಿ ಸ್ವರ್ಗದಲ್ಲಿ ಒಂದು ಖರ್ಜೂರದ ಮರವನ್ನು ನೆಡಲಾಗುತ್ತದೆ

ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು 'ಸುಬ್‌ಹಾನಲ್ಲಾಹಿಲ್ ಅಝೀಮ್ ವಬಿ ಹಮ್‌ದಿಹಿ' (ಮಹೋನ್ನತನಾದ ಅಲ್ಲಾಹು ಪರಿಶುದ್ಧನು ಮತ್ತು ಅವನಿಗೆ ಸರ್ವಸ್ತುತಿಗಳು) ಎಂದು ಹೇಳುತ್ತಾನೋ, ಅವನಿಗಾಗಿ ಸ್ವರ್ಗದಲ್ಲಿ ಒಂದು ಖರ್ಜೂರದ ಮರವನ್ನು ನೆಡಲಾಗುತ್ತದೆ".

[صحيح] [رواه الترمذي]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು '(ಸುಬ್‌ಹಾನಲ್ಲಾಹ್)' ಅಂದರೆ - ಅವನ ಅಸ್ತಿತ್ವದಲ್ಲಿ, ಗುಣಲಕ್ಷಣಗಳಲ್ಲಿ ಮತ್ತು ಕ್ರಿಯೆಗಳಲ್ಲಿ '(ಅಲ್-ಅಝೀಮ್)' ಮಹೋನ್ನತನಾದ ಅಲ್ಲಾಹುವನ್ನು ನಾನು ಪರಿಶುದ್ಧನೆಂದು ಸಾರುತ್ತೇನೆ, ಮತ್ತು '(ವಬಿ ಹಮ್‌ದಿಹಿ)' ಅವನ ಗುಣಗಳೆಲ್ಲವೂ ಪರಿಪೂರ್ಣವಾಗಿವೆಯೆಂದು ಹೇಳುವ ಮೂಲಕ ಅವನನ್ನು ಸ್ತುತಿಸುತ್ತೇನೆ ಎಂದು ಹೇಳುತ್ತಾನೋ; ಅವನು ಪ್ರತಿ ಬಾರಿ ಅದನ್ನು ಹೇಳುವಾಗ ಸ್ವರ್ಗದ ಭೂಮಿಯಲ್ಲಿ ಅವನಿಗಾಗಿ ಒಂದು ಖರ್ಜೂರದ ಮರವನ್ನು ಸ್ಥಾಪಿಸಲಾಗುತ್ತದೆ ಮತ್ತು ನೆಡಲಾಗುತ್ತದೆ.

فوائد الحديث

ಅಲ್ಲಾಹುವನ್ನು ಧಾರಾಳವಾಗಿ ಸ್ಮರಿಸಲು ಪ್ರೋತ್ಸಾಹಿಸಲಾಗಿದೆ. ಅವುಗಳ ಪೈಕಿ ಅವನನ್ನು ಸ್ತುತಿಸುವುದರೊಂದಿಗೆ ಅವನ ಪರಿಶುದ್ಧಿಯನ್ನು ಸಾರುವುದು ಸಹ ಸೇರಿದೆ.

ಸ್ವರ್ಗವು ವಿಶಾಲವಾಗಿದೆ, ಮತ್ತು ಅದರ ಮರಗಳು ತಸ್ಬೀಹ್ ಮತ್ತು ತಹ್ಮೀದ್ ಆಗಿವೆ. ಇದು ಅಲ್ಲಾಹುವಿನ ಕಡೆಯ ಔದಾರ್ಯ ಮತ್ತು ಅನುಗ್ರಹವಾಗಿದೆ.

ಇತರ ಮರಗಳನ್ನು ಬಿಟ್ಟು ಖರ್ಜೂರದ ಮರವನ್ನು ಹದೀಸ್‌ನಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಏಕೆಂದರೆ ಅದರ ಪ್ರಯೋಜನಗಳು ಸಾಕಷ್ಟಿವೆ ಮತ್ತು ಅದರ ಫಲ ಉತ್ತಮವಾಗಿದೆ. ಇದೇ ಕಾರಣಕ್ಕಾಗಿ ಅಲ್ಲಾಹು ಕುರ್‌ಆನ್‌ನಲ್ಲಿ ಸತ್ಯವಿಶ್ವಾಸಿ ಮತ್ತು ಅವನ ವಿಶ್ವಾಸಕ್ಕೆ ಅದರ (ಖರ್ಜೂರದ ಮರದ) ಉದಾಹರಣೆಯನ್ನು ನೀಡಿದ್ದಾನೆ.

التصنيفات

Benefits of Remembering Allah