ಜನರು ಉಪವಾಸವನ್ನು ಬೇಗನೆ ತೊರೆಯುವವರೆಗೆ ಅವರು ಒಳಿತಿನಲ್ಲಿರುತ್ತಾರೆ

ಜನರು ಉಪವಾಸವನ್ನು ಬೇಗನೆ ತೊರೆಯುವವರೆಗೆ ಅವರು ಒಳಿತಿನಲ್ಲಿರುತ್ತಾರೆ

ಸಹ್ಲ್ ಬಿನ್ ಸಅದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಜನರು ಉಪವಾಸವನ್ನು ಬೇಗನೆ ತೊರೆಯುವವರೆಗೆ ಅವರು ಒಳಿತಿನಲ್ಲಿರುತ್ತಾರೆ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಜನರು ಉಪವಾಸದ ಸಮಯದಲ್ಲಿ ಸೂರ್ಯಾಸ್ತವನ್ನು ಖಚಿತಪಡಿಸಿಕೊಂಡ ನಂತರ ಬೇಗನೆ ಉಪವಾಸವನ್ನು ತೊರೆಯುವವರೆಗೆ ಒಳಿತಿನಲ್ಲಿರುತ್ತಾರೆ. ಇದು ಸುನ್ನತ್‌ಗೆ ಅನುಗುಣವಾಗಿ ನಡೆಯುವುದು ಮತ್ತು ಅದರ ಸೀಮೆಯೊಳಗೆ ನಿಲ್ಲುವುದಾಗಿದೆ.

فوائد الحديث

ನವವಿ ಹೇಳಿದರು: "ಸೂರ್ಯಾಸ್ತವನ್ನು ಖಚಿತಪಡಿಸಿಕೊಂಡ ನಂತರ ಉಪವಾಸವನ್ನು ಬೇಗನೆ ತೊರೆಯಬೇಕೆಂದು ಈ ಹದೀಸಿನಲ್ಲಿ ಒತ್ತಾಯವಿದೆ. ಇದರ ಅರ್ಥವೇನೆಂದರೆ, ಸಮುದಾಯವು ಎಲ್ಲಿಯತನಕ ಈ ಸುನ್ನತ್ತನ್ನು ಕಾಪಾಡಿಕೊಳ್ಳುತ್ತಾರೋ ಅಲ್ಲಿಯ ತನಕ ಅವರು ಒಳಿತಿನಲ್ಲಿರುತ್ತಾರೆ ಮತ್ತು ಕ್ರಮಬದ್ಧರಾಗಿರುತ್ತಾರೆ. ಅವರು ಉಪವಾಸ ತೊರೆಯುವುದನ್ನು ವಿಳಂಬ ಮಾಡಿದರೆ, ಅದು ಅವರಿಗೆ ಸಂಭವಿಸಲಿರುವ ದುರಂತದ ಸಂಕೇತವಾಗಿರುತ್ತದೆ.

ಜನರು ಸುನ್ನತ್ ಅನ್ನು ಅನುಸರಿಸುವುದರಿಂದ ಅವರಲ್ಲಿ ಒಳಿತು ಉಳಿದುಕೊಂಡಿದೆ. ಸುನ್ನತ್ ಬದಲಾವಣೆಗೊಳ್ಳುವಾಗ ಕಾರ್ಯಗಳು ಹಾಳಾಗುತ್ತವೆ.

ಗ್ರಂಥದವರಿಗೆ ಮತ್ತು ನೂತನವಾದಿಗಳಿಗೆ ವಿರುದ್ಧವಾಗಿ ಸಾಗಬೇಕೆಂದು ಇದರಲ್ಲಿ ಸೂಚಿಸಲಾಗಿದೆ. ಏಕೆಂದರೆ ಅವರು ಉಪವಾಸ ತೊರೆಯುವುದನ್ನು ವಿಳಂಬ ಮಾಡುತ್ತಿದ್ದರು.

ಇಬ್ನ್ ಹಜರ್ ಹೇಳಿದರು: "ಇದರಲ್ಲಿ ಅದರ ಕಾರಣವನ್ನು ವಿವರಿಸಲಾಗಿದೆ. ಮುಹಲ್ಲಬ್ ಹೇಳಿದರು: ಇದರಲ್ಲಿರುವ ವಿವೇಕವೆಂದರೆ, ಹಗಲಿನ ಒಂದು ಭಾಗದಿಂದ ರಾತ್ರಿಯನ್ನು ಹೆಚ್ಚಿಸದಿರುವುದು. ಏಕೆಂದರೆ ಅದು ಉಪವಾಸ ಮಾಡುವವರಿಗೆ ಹೆಚ್ಚು ಅನುಕೂಲವಾಗಿರುತ್ತದೆ ಮತ್ತು ಆರಾಧನೆ ನಿರ್ವಹಿಸಲು ಅವರಿಗೆ ಬಲವನ್ನು ನೀಡುತ್ತದೆ. ನೋಟದಿಂದ ಅಥವಾ ಇಬ್ಬರು ನ್ಯಾಯಯುತ ಜನರು ತಿಳಿಸುವುದರಿಂದ - ಪ್ರಬಲ ಅಭಿಪ್ರಾಯದಲ್ಲಿ ಒಬ್ಬ ನ್ಯಾಯಯುತ ವ್ಯಕ್ತಿ - ಸೂರ್ಯಾಸ್ತವಾಗಿದೆಯೆಂದು ಖಚಿತಪಡಿಸಿದರೆ ಇದು ಅನ್ವಯವಾಗುತ್ತದೆಯೆಂದು ವಿದ್ವಾಂಸರು ಹೇಳುತ್ತಾರೆ."

ಇಬ್ನ್ ಹಜರ್ ಹೇಳಿದರು: "ಸೂಚನೆ: ರಮದಾನ್ ತಿಂಗಳಲ್ಲಿ, ಫಜ್ರ್‌ಗೆ ಸುಮಾರು ಇಪ್ಪತ್ತು ನಿಮಿಷಗಳ ಮೊದಲು ಎರಡನೇ ಅದಾನ್ ನೀಡುವುದು ಮತ್ತು ಉಪವಾಸ ಆಚರಿಸಲು ಬಯಸುವವರಿಗೆ ತಿನ್ನುವುದು-ಕುಡಿಯುವುದನ್ನು ನಿಷೇಧಿಸುವ ಸಂಕೇತವಾಗಿ ಬೆಳಗಿಸಲಾದ ದೀಪಗಳನ್ನು ನಂದಿಸುವುದು ಈ ಕಾಲದಲ್ಲಿ ನೂತನವಾಗಿ ಆವಿಷ್ಕರಿಸಲಾದ ನಿಂದನೀಯ ಬಿದ್‌ಅತ್‌ಗಳಾಗಿವೆ. ಹೀಗೆ ಮಾಡಿದವರು ಇದನ್ನು ಆರಾಧನೆಗಾಗಿ ಮುನ್ನೆಚ್ಚರಿಕೆ ವಹಿಸುವುದು ಎಂದು ಭಾವಿಸುತ್ತಾರೆ. ಆದರೆ ಇದರ ನಿಜವಾದ ತತ್ವ ಕೆಲವೇ ಜನರಿಗೆ ಮಾತ್ರ ತಿಳಿದಿದೆ. ಇದು ಅವರನ್ನು ಅವರ ವಾದ ಪ್ರಕಾರ ಸಮಯವನ್ನು ದೃಡಪಡಿಸಲು ಸೂರ್ಯಾಸ್ತದ ನಂತರ ಅದಾನ್ ನೀಡುವುದರ ಕಡೆಗೆ ಒಯ್ದಿದೆ. ಇದರಿಂದ ಅವರು ಇಫ್ತಾರ್ (ಉಪವಾಸ ಮುರಿಯುವುದು) ತಡ ಮಾಡುತ್ತಾರೆ ಮತ್ತು ಸಹರಿಗಾಗಿ ತ್ವರೆ ಮಾಡುತ್ತಾರೆ. ಹೀಗೆ ಅವರು ಸುನ್ನತ್‌ಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಇದರಿಂದಾಗಿ ಅವರಲ್ಲಿ ಒಳಿತು ಕ್ಷೀಣಿಸಿದೆ ಮತ್ತು ಕೆಡುಕು ವ್ಯಾಪಿಸಿದೆ. ಅಲ್ಲಾಹನೇ ಸಹಾಯಕ್ಕೆ ಅರ್ಹನು."

التصنيفات

Recommended Acts of Fasting