إعدادات العرض
.
.
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಿತ್ರ್ ಝಕಾತನ್ನು ಒಂದು ಸಾಅ್ ಖರ್ಜೂರ ಅಥವಾ ಒಂದು ಸಾಅ್ ಬಾರ್ಲಿಯಂತೆ ಗುಲಾಮರು, ಸ್ವತಂತ್ರರು, ಪುರುಷರು, ಸ್ತ್ರೀಯರು, ಕಿರಿಯರು, ಹಿರಿಯರು ಮುಂತಾದ ಎಲ್ಲಾ ಮುಸ್ಲಿಮರ ಮೇಲೆ ಕಡ್ಡಾಯಗೊಳಿಸಿದರು. ಜನರು ನಮಾಝ್‌ಗೆ ಹೊರಡುವ ಮೊದಲು ಅದನ್ನು ನೀಡಬೇಕೆಂದು ಅವರು ಆದೇಶಿಸಿದರು."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी ئۇيغۇرچە Hausa Português Kurdî සිංහල Kiswahili Tiếng Việt অসমীয়া ગુજરાતી Nederlands മലയാളം Română Magyar ქართული Moore Svenska Македонски ไทย Українська తెలుగుالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಮದಾನ್ ಮುಗಿದ ಬಳಿಕ ಫಿತ್ರ್ ಝಕಾತ್ ನೀಡುವುದನ್ನು ಕಡ್ಡಾಯಗೊಳಿಸಿದರು. ಇದರ ಪ್ರಮಾಣ ಒಂದು ಸಾಅ್, ಇದು ತೂಕದಲ್ಲಿ ನಾಲ್ಕು ಮುದ್ದ್‌ಗೆ ಸಮನಾಗಿದೆ. ಒಂದು ಮುದ್ದ್ ಎಂದರೆ ಸರಾಸರಿ ಗಾತ್ರದ ವ್ಯಕ್ತಿಯ ಎರಡು ಕೈಬೊಗಸೆಗಳು ತುಂಬವಷ್ಟು ಖರ್ಜೂರ ಅಥವಾ ಬಾರ್ಲಿ. ಇದು ಸ್ವತಂತ್ರ, ಗುಲಾಮ, ಪುರುಷ, ಸ್ತ್ರೀ, ಕಿರಿಯ, ಹಿರಿಯ ಎಂಬ ವ್ಯತ್ಯಾಸವಿಲ್ಲದೆ ಎಲ್ಲ ಮುಸ್ಲಿಮರಿಗೂ ಕಡ್ಡಾಯವಾಗಿದೆ. ಇದು ತನಗೆ ಮತ್ತು ತಾನು ಆಹಾರ ನೀಡಬೇಕಾದವರಿಗೆ ಒಂದು ದಿನ ಮತ್ತು ರಾತ್ರಿಯ ಅಗತ್ಯಗಳನ್ನು ಮೀರಿ ಹೆಚ್ಚು ಆಹಾರವಸ್ತುಗಳನ್ನು ಹೊಂದಿರುವವರಿಗೆ ಅನ್ವಯಿಸುತ್ತದೆ. ಜನರು ಈದ್ ನಮಾಝ್‌ಗೆ ಹೊರಡುವ ಮೊದಲು ಇದನ್ನು ನೀಡಬೇಕೆಂದು ಅವರು ಆಜ್ಞಾಪಿಸಿದರು.فوائد الحديث
ರಮದಾನ್ ತಿಂಗಳ ನಂತರದ ಫಿತ್ರ್ ಝಕಾತನ್ನು ಕಿರಿಯರು, ಹಿರಿಯರು, ಸ್ವತಂತ್ರರು, ಗುಲಾಮರು ಮುಂತಾದ ಎಲ್ಲರ ಪರವಾಗಿ ನೀಡಬೇಕಾಗಿದೆ. ಇದನ್ನು ಕುಟುಂಬ ಪೋಷಕರು ಮತ್ತು ಯಜಮಾನರಿಗೆ ವಹಿಸಲಾಗಿದೆ. ಅವರು ಇದನ್ನು ತಮ್ಮ ಪರವಾಗಿ, ತಮ್ಮ ಮಕ್ಕಳು ಮತ್ತು ತಾನು ಯಾರ ವೆಚ್ಚವನ್ನು ಭರಿಸಲು ಬದ್ಧನಾಗಿರುವನೋ ಅವರ ಪರಗಾಗಿ ಅದನ್ನು ನೀಡಬೇಕು.
ಹೊಟ್ಟೆಯಲ್ಲಿರುವ ಭ್ರೂಣಕ್ಕೆ ಫಿತ್ರ್ ಝಕಾತ್ ನೀಡುವುದು ಕಡ್ಡಾಯವಲ್ಲ. ಆದರೆ ಅದು ಅಪೇಕ್ಷಣೀಯವಾಗಿದೆ.
ಫಿತ್ರ್ ಝಕಾತ್ ಆಗಿ ಏನು ನೀಡಬೇಕೆಂದು ವಿವರಿಸಲಾಗಿದೆ. ಅದು ಜನರ ಸಾಮಾನ್ಯವಾಗಿ ಬಳಸುವ ಆಹಾರ ವಸ್ತುವಾಗಿರತಕ್ಕದ್ದು.
ಈದ್ ನಮಾಝ್‌ಗೆ ಮುಂಚಿತವಾಗಿ ಅದನ್ನು ನೀಡುವುದು ಕಡ್ಡಾಯವಾಗಿದೆ. ಈದ್ ಹಬ್ಬದ ಬೆಳಿಗ್ಗೆ ಅದನ್ನು ನೀಡುವುದು ಶ್ರೇಷ್ಠವಾಗಿದೆ. ಈದ್‌ಗಿಂತ ಒಂದು ಅಥವಾ ಎರಡು ದಿನಗಳ ಮೊದಲು ಅದನ್ನು ನೀಡಲು ಅನುಮತಿಸಲಾಗಿದೆ.
التصنيفات
Zakat-ul-Fitr (Minor-Eid Charity)