إعدادات العرض
1- "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮೊಂದಿಗೆ ಇದ್ದಾಗ, ನಾವು ಚಿಕ್ಕವರು, ದೊಡ್ಡವರು, ಸ್ವತಂತ್ರರು ಮತ್ತು ಗುಲಾಮರು ಹೀಗೆ ಎಲ್ಲರ ಪರವಾಗಿಯೂ, ಒಂದು ಸಾಅ್ ಆಹಾರ, ಅಥವಾ ಒಂದು ಸಾಅ್ ಗಿಣ್ಣು, ಅಥವಾ ಒಂದು ಸಾಅ್ ಬಾರ್ಲಿ, ಅಥವಾ ಒಂದು ಸಾಅ್ ಖರ್ಜೂರ, ಅಥವಾ ಒಂದು ಸಾಅ್ ಒಣದ್ರಾಕ್ಷಿ ಫಿತ್ರ್ ಝಕಾತ್ ನೀಡುತ್ತಿದ್ದೆವು.* ಮುಆವಿಯ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನಮ್ಮ ಬಳಿಗೆ ಹಜ್ಜ್ ಅಥವಾ ಉಮ್ರ ನಿರ್ವಹಿಸಲು ಬರುವ ತನಕ ನಾವು ಹೀಗೆಯೇ ಕೊಡುತ್ತಿದ್ದೆವು. ಅವರು ಮಿಂಬರ್ (ಪ್ರವಚನ ಪೀಠ) ಏರಿ ಜನರನ್ನು ಉದ್ದೇಶಿಸಿ ಮಾತನಾಡಿದರು. ಅವರು ಜನರಿಗೆ ಹೇಳಿದ ಒಂದು ಮಾತು ಹೀಗಿತ್ತು: "ನಿಶ್ಚಯವಾಗಿಯೂ ಸಿರಿಯಾದ ಎರಡು ಮುದ್ದ್ ಗೋಧಿಯು ಒಂದು ಸಾಅ್ ಖರ್ಜೂರಕ್ಕೆ ಸಮವಾಗಿದೆ ಎಂದು ನಾನು ಕಾಣುತ್ತೇನೆ." ಜನರು ಅದನ್ನು ಅನುಸರಿಸಿದರು. (ಅಬೂ ಸಈದ್ ಹೇಳುತ್ತಾರೆ): ಆದರೆ ನಾನು ಜೀವಂತವಿರುವವರೆಗೂ ಪ್ರವಾದಿಯ ಕಾಲದಂತೆಯೇ ಫಿತ್ರ್ ಝಕಾತ್ ನೀಡುವುದನ್ನು ಮುಂದುವರಿಸಿದೆನು."
2- .