ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮೊಂದಿಗೆ ಇದ್ದಾಗ, ನಾವು ಚಿಕ್ಕವರು, ದೊಡ್ಡವರು,…

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮೊಂದಿಗೆ ಇದ್ದಾಗ, ನಾವು ಚಿಕ್ಕವರು, ದೊಡ್ಡವರು, ಸ್ವತಂತ್ರರು ಮತ್ತು ಗುಲಾಮರು ಹೀಗೆ ಎಲ್ಲರ ಪರವಾಗಿಯೂ, ಒಂದು ಸಾಅ್ ಆಹಾರ, ಅಥವಾ ಒಂದು ಸಾಅ್ ಗಿಣ್ಣು, ಅಥವಾ ಒಂದು ಸಾಅ್ ಬಾರ್ಲಿ, ಅಥವಾ ಒಂದು ಸಾಅ್ ಖರ್ಜೂರ, ಅಥವಾ ಒಂದು ಸಾಅ್ ಒಣದ್ರಾಕ್ಷಿ ಫಿತ್ರ್ ಝಕಾತ್ ನೀಡುತ್ತಿದ್ದೆವು

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮೊಂದಿಗೆ ಇದ್ದಾಗ, ನಾವು ಚಿಕ್ಕವರು, ದೊಡ್ಡವರು, ಸ್ವತಂತ್ರರು ಮತ್ತು ಗುಲಾಮರು ಹೀಗೆ ಎಲ್ಲರ ಪರವಾಗಿಯೂ, ಒಂದು ಸಾಅ್ ಆಹಾರ, ಅಥವಾ ಒಂದು ಸಾಅ್ ಗಿಣ್ಣು, ಅಥವಾ ಒಂದು ಸಾಅ್ ಬಾರ್ಲಿ, ಅಥವಾ ಒಂದು ಸಾಅ್ ಖರ್ಜೂರ, ಅಥವಾ ಒಂದು ಸಾಅ್ ಒಣದ್ರಾಕ್ಷಿ ಫಿತ್ರ್ ಝಕಾತ್ ನೀಡುತ್ತಿದ್ದೆವು. ಮುಆವಿಯ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನಮ್ಮ ಬಳಿಗೆ ಹಜ್ಜ್ ಅಥವಾ ಉಮ್ರ ನಿರ್ವಹಿಸಲು ಬರುವ ತನಕ ನಾವು ಹೀಗೆಯೇ ಕೊಡುತ್ತಿದ್ದೆವು. ಅವರು ಮಿಂಬರ್ (ಪ್ರವಚನ ಪೀಠ) ಏರಿ ಜನರನ್ನು ಉದ್ದೇಶಿಸಿ ಮಾತನಾಡಿದರು. ಅವರು ಜನರಿಗೆ ಹೇಳಿದ ಒಂದು ಮಾತು ಹೀಗಿತ್ತು: "ನಿಶ್ಚಯವಾಗಿಯೂ ಸಿರಿಯಾದ ಎರಡು ಮುದ್ದ್ ಗೋಧಿಯು ಒಂದು ಸಾಅ್ ಖರ್ಜೂರಕ್ಕೆ ಸಮವಾಗಿದೆ ಎಂದು ನಾನು ಕಾಣುತ್ತೇನೆ." ಜನರು ಅದನ್ನು ಅನುಸರಿಸಿದರು. (ಅಬೂ ಸಈದ್ ಹೇಳುತ್ತಾರೆ): ಆದರೆ ನಾನು ಜೀವಂತವಿರುವವರೆಗೂ ಪ್ರವಾದಿಯ ಕಾಲದಂತೆಯೇ ಫಿತ್ರ್ ಝಕಾತ್ ನೀಡುವುದನ್ನು ಮುಂದುವರಿಸಿದೆನು."

[صحيح] [متفق عليه]

الشرح

ಮುಸ್ಲಿಮರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲದಲ್ಲಿ ಮತ್ತು ಅವರ ನಂತರದ ಖಲೀಫರುಗಳ ಕಾಲದಲ್ಲಿ ಚಿಕ್ಕವರು ಮತ್ತು ದೊಡ್ಡವರು ಎಲ್ಲರ ಪರವಾಗಿಯೂ ಒಂದು ಸಾಅ್ ಆಹಾರದಷ್ಟು ಫಿತ್ರ್ ಝಕಾತ್ ನೀಡುತ್ತಿದ್ದರು. ಅವರ ಆಹಾರವು ಬಾರ್ಲಿ, ಝಬೀಬ್ (ಒಣದ್ರಾಕ್ಷಿ), ಅಕಿತ್ (ಗಿಣ್ಣ/ಒಣಗಿಸಿದ ಹಾಲು) ಮತ್ತು ಖರ್ಜೂರವಾಗಿತ್ತು. ಒಂದು ಸಾಅ್ ಎಂದರೆ ನಾಲ್ಕು ಮುದ್ದ್‌ಗಳು. ಒಂದು ಮುದ್ದ್ ಎಂದರೆ ಒಬ್ಬ ಸಾಮಾನ್ಯ ಮನುಷ್ಯನ ಎರಡು ಕೈಗಳನ್ನು ತುಂಬಿಸುವಷ್ಟು. ಖಲೀಫರಾಗಿ ಮುಆವಿಯಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಮದೀನಾಗೆ ಬಂದಾಗ, ಮತ್ತು ಸಿರಿಯಾದ ಗೋಧಿಯು ಹೆಚ್ಚಾದಾಗ, ಅವರು ಪ್ರವಚನ ನೀಡುತ್ತಾ ಹೇಳಿದರು: "ನಿಶ್ಚಯವಾಗಿಯೂ ಸಿರಿಯಾದ ಎರಡು ಮುದ್ದ್ ಗೋಧಿಯು ಒಂದು ಸಾಅ್ ಖರ್ಜೂರಕ್ಕೆ ಸಮವಾಗಿದೆ ಎಂದು ನಾನು ಕಾಣುತ್ತೇನೆ." ಜನರು ಅದನ್ನು ಅನುಸರಿಸಿದರು. ಅಬೂ ಸಈದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: "ಆದರೆ ನಾನು ನನ್ನ ಕೊನೆಯುಸಿರಿನ ತನಕ, ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲದಲ್ಲಿ ನೀಡುತ್ತಿದ್ದಂತೆಯೇ ನೀಡುತ್ತಿದ್ದೆ."

فوائد الحديث

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲದಲ್ಲಿ ಫಿತ್ರ್ ಝಕಾತ್‌ನ ಪ್ರಮಾಣ ಎಷ್ಟೆಂದು ವಿವರಿಸಲಾಗಿದೆ. ಅದು ಒಂದು ಸಾಅ್ ಆಹಾರವಾಗಿತ್ತು. ಅದರ ವರ್ಗ ಮತ್ತು ಮೌಲ್ಯವು ಭಿನ್ನವಾಗಿದ್ದರೂ ಸಹ.

ಆದಮರ ಮಕ್ಕಳಿಗೆ (ಮನುಷ್ಯರಿಗೆ) ಫಿತ್ರ್ ಝಕಾತ್ ಆಗಿ ನೀಡಲು ಯಾವುದೇ ಆಹಾರವಸ್ತು ಸಾಕಾಗುತ್ತವೆ. ಆದರೆ ಇಲ್ಲಿ ನಾಲ್ಕು ಪ್ರಕಾರಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದೇಕೆಂದರೆ, ಅವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲದಲ್ಲಿ ಜನರ ಮುಖ್ಯ ಆಹಾರವಾಗಿದ್ದವು.

ಹಣ, ನಗದು ಮುಂತಾದ ಆಹಾರೇತರ ವಸ್ತುಗಳನ್ನು ಫಿತ್ರ್ ಝಕಾತ್ ನೀಡಿದರೆ ಸಾಕಾಗುವುದಿಲ್ಲ.

ಇಮಾಂ ನವವಿ ಶರ್ಹ್ ಮುಸ್ಲಿಂನಲ್ಲಿ ಹೇಳಿದರು: "ಸಹಾಬಾಗಳು ಭಿನ್ನಾಭಿಪ್ರಾಯಪಟ್ಟರೆ, ಅವರಲ್ಲಿ ಕೆಲವರ ಅಭಿಪ್ರಾಯವು ಇತರರಿಗಿಂತ ಯೋಗ್ಯವಾಗುವುದಿಲ್ಲ. ಆಗ ನಾವು ಬೇರೆ ಪುರಾವೆಗೆ ತಿರುಗಬೇಕಾಗುತ್ತದೆ. ನಾವು ಹದೀಸಿನ ಬಾಹ್ಯಾರ್ಥವನ್ನು ಮತ್ತು ಕಿಯಾಸನ್ನು ನೋಡಿದರೆ,ಇತರ ಧಾನ್ಯಗಳಂತೆ ಗೋಧಿ ಕೂಡ ಒಂದು ಸಾಅ್ ಕೊಡಬೇಕೆಂಬ ಷರತ್ತನ್ನು ಒಪ್ಪಿಕೊಳ್ಳುವುದಾಗಿ ಕಾಣುತ್ತೇವೆ. ಆದ್ದರಿಂದ ಅದನ್ನು ಅವಲಂಬಿಸುವುದು ಕಡ್ಡಾಯವಾಗಿದೆ."

ಇಬ್ನ್ ಹಜರ್ ಹೇಳಿದರು: "ಅಬೂ ಸಈದ್ ರವರ ಹದೀಸ್‌ನಲ್ಲಿ ನಾವು ಕಡು ಅನುಸರಣೆಯನ್ನು ಮತ್ತು ಪುರಾವೆಗಳಿಗೆ ಅಂಟಿಕೊಳ್ಳುವುದನ್ನು ಹಾಗೂ ಸ್ಪಷ್ಟವಚನವು ಇರುವಾಗ ಇಜ್ತಿಹಾದ್‌ಗೆ ತಿರುಗದಿರುವುದನ್ನು ಕಾಣುತ್ತೇವೆ. ಮುಆವಿಯಾ ಮಾಡಿದ ಕೆಲಸ ಮತ್ತು ಜನರು ಅದನ್ನು ಅನುಮೋದಿಸಿದ್ದು ಕಾಣುವಾಗ ಇದರಲ್ಲಿ ಇಜ್ತಿಹಾದ್‌ಗೆ ಅನುಮತಿಯಿದೆ ಎಂಬುದಕ್ಕೆ ಪುರಾವೆ ಸಿಗುತ್ತದೆ. ಅದು ಪ್ರಶಂಸನೀಯವಾಗಿದೆ. ಆದರೆ ಸ್ಪಷ್ಟ ವಚನವು ಇರುವಾಗ ಇಜ್ತಿಹಾದನ್ನು ಪರಿಗಣಿಸುವುದು ಸರಿಯಲ್ಲ.

التصنيفات

Zakat-ul-Fitr (Minor-Eid Charity)