ಯಾರು ಒಬ್ಬ ಪುರುಷನನ್ನು ಅಥವಾ ಮಹಿಳೆಯನ್ನು ಗುದದ್ವಾರದಲ್ಲಿ ಸಂಭೋಗಿಸುತ್ತಾರೋ, ಅವನ ಕಡೆಗೆ ಅಲ್ಲಾಹು ದೃಷ್ಟಿ ಹಾಯಿಸುವುದಿಲ್ಲ

ಯಾರು ಒಬ್ಬ ಪುರುಷನನ್ನು ಅಥವಾ ಮಹಿಳೆಯನ್ನು ಗುದದ್ವಾರದಲ್ಲಿ ಸಂಭೋಗಿಸುತ್ತಾರೋ, ಅವನ ಕಡೆಗೆ ಅಲ್ಲಾಹು ದೃಷ್ಟಿ ಹಾಯಿಸುವುದಿಲ್ಲ

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಒಬ್ಬ ಪುರುಷನನ್ನು ಅಥವಾ ಮಹಿಳೆಯನ್ನು ಗುದದ್ವಾರದಲ್ಲಿ ಸಂಭೋಗಿಸುತ್ತಾರೋ, ಅವನ ಕಡೆಗೆ ಅಲ್ಲಾಹು ದೃಷ್ಟಿ ಹಾಯಿಸುವುದಿಲ್ಲ."

[صحيح]

الشرح

ಇನ್ನೊಬ್ಬ ಪುರುಷನ ಗುದದ್ವಾರದಲ್ಲಿ ಅಥವಾ ಮಹಿಳೆಯ ಗುದದ್ವಾರದಲ್ಲಿ ಸಂಭೋಗಿಸುವವನ ಕಡೆಗೆ ಅಲ್ಲಾಹು ದಯೆಯ ದೃಷ್ಟಿಯನ್ನು ಬೀರುವುದಿಲ್ಲ ಮತ್ತು ಅದು ಮಹಾಪಾಪಗಳಲ್ಲಿ ಒಂದಾಗಿದೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಕಠಿಣ ಎಚ್ಚರಿಕೆ ನೀಡುತ್ತಿದ್ದಾರೆ.

فوائد الحديث

ಪುರುಷನು ಪುರುಷನನ್ನು ಸಂಭೋಗಿಸುವುದು - ಲಿವಾತ್ (ಸಲಿಂಗ ಕಾಮ) - ಮಹಾಪಗಳಲ್ಲಿ ಒಂದಾಗಿದೆ.

ಮಹಿಳೆಯನ್ನು ಗುದದ್ವಾರದಲ್ಲಿ ಸಂಭೋಗಿಸುವುದು ಕೂಡ ಮಹಾಪಾಪಗಳಲ್ಲಿ ಒಂದಾಗಿದೆ.

"ಅಲ್ಲಾಹು ದೃಷ್ಟಿ ಬೀರುವುದಿಲ್ಲ" ಎಂದರೆ ಅಲ್ಲಾಹು ಕರುಣೆ ಮತ್ತು ಮಮತೆಯ ದೃಷ್ಟಿ ಬೀರುವುದಿಲ್ಲ ಎಂದರ್ಥ. ಅಲ್ಲಾಹು ಅವನನ್ನು ನೋಡುವುದೇ ಇಲ್ಲ ಎಂದರ್ಥವಲ್ಲ. ಏಕೆಂದರೆ ಅಲ್ಲಾಹನಿಗೆ ಯಾವುದೇ ವಸ್ತು ಕೂಡ ಕಾಣದೇ ಇರುವುದಿಲ್ಲ ಮತ್ತು ಅವನ ದೃಷ್ಟಿಯಿಂದ ಏನೂ ತಪ್ಪಿಸಿಕೊಳ್ಳುವುದಿಲ್ಲ.

ಈ ಪ್ರವೃತ್ತಿಗಳು ಮನುಷ್ಯರಿಗೆ ಅತ್ಯಂತ ಅಶ್ಲೀಲ ಮತ್ತು ಅತಿ ಅಪಾಯಕಾರಿ ಪ್ರವೃತ್ತಿಗಳಾಗಿವೆ. ಏಕೆಂದರೆ ಇದರಲ್ಲಿ ಆರೋಗ್ಯಕರ ಮಾನವ ಸಹಜ ಪ್ರವೃತ್ತಿಗೆ ವಿರುದ್ಧವಾದ ಕಾರ್ಯಗಳಿವೆ, ಸಂತಾನ ಕ್ಷೀಣಿಸುತ್ತದೆ, ವೈವಾಹಿಕ ಜೀವನವು ಹಾಳಾಗುತ್ತದೆ, ದ್ವೇಷ ಮತ್ತು ಶತ್ರುತ್ವವನ್ನು ಬೆಳೆಸುತ್ತದೆ ಮತ್ತು ಅಸಹ್ಯವಾದ ಸ್ಥಳಗಳಲ್ಲಿ ಬೀಳುವಂತೆ ಮಾಡುತ್ತದೆ.

التصنيفات

Rulings of Discretionary Punishments