إعدادات العرض
ನೋವಿರುವ ಸ್ಥಳದಲ್ಲಿ ಕೈಯಿಟ್ಟು ಮೂರು ಬಾರಿ 'ಬಿಸ್ಮಿಲ್ಲಾ' (ಅಲ್ಲಾಹನ ನಾಮದಲ್ಲಿ) ಎಂದು ಹೇಳು. ನಂತರ ಏಳು ಬಾರಿ ಹೀಗೆ ಹೇಳು: ನಾನು…
ನೋವಿರುವ ಸ್ಥಳದಲ್ಲಿ ಕೈಯಿಟ್ಟು ಮೂರು ಬಾರಿ 'ಬಿಸ್ಮಿಲ್ಲಾ' (ಅಲ್ಲಾಹನ ನಾಮದಲ್ಲಿ) ಎಂದು ಹೇಳು. ನಂತರ ಏಳು ಬಾರಿ ಹೀಗೆ ಹೇಳು: ನಾನು ಅನುಭವಿಸುತ್ತಿರುವ ಮತ್ತು ಭಯಪಡುತ್ತಿರುವ ಈ ಕೆಡುಕಿನಿಂದ ನಾನು ಅಲ್ಲಾಹನಲ್ಲಿ ಮತ್ತು ಅವನ ಶಕ್ತಿಯಲ್ಲಿ ರಕ್ಷೆ ಬೇಡುತ್ತೇನೆ
ಉಸ್ಮಾನ್ ಬಿನ್ ಅಬುಲ್ ಆಸ್ ಸಕಫಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಇಸ್ಲಾಂ ಸ್ವೀಕರಿಸಿದ ಕಾಲದಿಂದ ತಾನು ತನ್ನ ದೇಹದಲ್ಲಿ ಅನುಭವಿಸುತ್ತಿದ್ದ ನೋವಿನ ಬಗ್ಗೆ ಅಳಲನ್ನು ವ್ಯಕ್ತಪಡಿಸಿದಾಗ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಹೇಳಿದರು: "ನೋವಿರುವ ಸ್ಥಳದಲ್ಲಿ ಕೈಯಿಟ್ಟು ಮೂರು ಬಾರಿ 'ಬಿಸ್ಮಿಲ್ಲಾ' (ಅಲ್ಲಾಹನ ನಾಮದಲ್ಲಿ) ಎಂದು ಹೇಳು. ನಂತರ ಏಳು ಬಾರಿ ಹೀಗೆ ಹೇಳು: ನಾನು ಅನುಭವಿಸುತ್ತಿರುವ ಮತ್ತು ಭಯಪಡುತ್ತಿರುವ ಈ ಕೆಡುಕಿನಿಂದ ನಾನು ಅಲ್ಲಾಹನಲ್ಲಿ ಮತ್ತು ಅವನ ಶಕ್ತಿಯಲ್ಲಿ ರಕ್ಷೆ ಬೇಡುತ್ತೇನೆ."
الترجمة
العربية বাংলা Bosanski English Español فارسی Français Indonesia Русский Tagalog Türkçe اردو 中文 हिन्दी Tiếng Việt සිංහල Kurdî Português Nederlands অসমীয়া Kiswahili ગુજરાતી پښتو Hausa Română മലയാളം Deutsch नेपाली ქართული Moore Magyar తెలుగు Кыргызча Svenska Українська Kinyarwanda Македонски Oromoo ไทย Српски मराठी ਪੰਜਾਬੀ دری አማርኛ Malagasy Wolof ភាសាខ្មែរ Lietuvių தமிழ் Shqipالشرح
ಉಸ್ಮಾನ್ ಬಿನ್ ಅಬುಲ್ ಆಸ್ ಸಕಫಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಗೆ ಮಾರಣಾಂತಿಕ ನೋವು ಉಂಟಾಯಿತು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು ಭೇಟಿಯಾಗಲು ಬಂದರು ಮತ್ತು ಅವರಿಗೆ ಬಾಧಿಸಿದ ಅನಾರೋಗ್ಯವನ್ನು ಅಲ್ಲಾಹು ನಿವಾರಿಸುವಂತಹ ಒಂದು ಪ್ರಾರ್ಥನೆಯನ್ನು ಕಲಿಸಿಕೊಟ್ಟರು. ಅದೇನೆಂದರೆ, ಅವರು ನೋವಿರುವ ಸ್ಥಳದಲ್ಲಿ ಕೈಯನ್ನಿಟ್ಟು ಮೂರು ಬಾರಿ 'ಬಿಸ್ಮಿಲ್ಲಾ' ಎಂದು ಹೇಳುವುದು. ನಂತರ ಏಳು ಬಾರಿ ಹೀಗೆ ಹೇಳುವುದು: "ನಾನು ರಕ್ಷೆ ಬೇಡುತ್ತೇನೆ." ಅಂದರೆ, ನಾನು ಅಭಯ ಬೇಡುತ್ತೇನೆ, ಆಶ್ರಯಬೇಡುತ್ತೇನೆ. "ಅಲ್ಲಾಹನಲ್ಲಿ ಮತ್ತು ಅವನ ಶಕ್ತಿಯಲ್ಲಿ ನಾನು ಅನುಭವಿಸುತ್ತಿರುವ ಈ ಕೆಡುಕಿನಿಂದ" ಅಂದರೆ ಸದ್ಯದ ಪರಿಸ್ಥಿತಿಯಲ್ಲಿ ನಾನು ಅನುಭವಿಸುತ್ತಿರುವ ಈ ನೋವಿನಿಂದ. "ಮತ್ತು ನಾನು ಭಯಪಡುತ್ತಿರುವ" ಅಂದರೆ, ಭವಿಷ್ಯದಲ್ಲಿ ನನಗೆ ವ್ಯಥೆ ಮತ್ತು ಹೆದರಿಕೆಗೆ ಕಾರಣವಾಗಬಹುದೆಂದು ನಾನು ಭಯಪಡುತ್ತಿರುವ, ಅಥವಾ ಈ ಅನಾರೋಗ್ಯವು ಮುಂದುವರಿದು ನನ್ನ ದೇಹವಿಡೀ ನೋವಿನಿಂದ ಬಳಲಬಹುದೆಂದು ನಾನು ಭಯಪಡುತ್ತಿರುವುದರಿಂದ.فوائد الحديث
ಹದೀಸಿನಲ್ಲಿ ತಿಳಿಸಲಾಗಿರುವಂತೆ ಮನುಷ್ಯನು ಸ್ವಯಂ ತನಗಾಗಿ ಮಂತ್ರಿಸುವುದು ಅಪೇಕ್ಷಣೀಯವಾಗಿದೆ.
ಅತೃಪ್ತಿ ಮತ್ತು ಅಭ್ಯಂತರ ವ್ಯಕ್ತಪಡಿಸದ ರೀತಿಯಲ್ಲಿ ಅಳಲನ್ನು ತೋಡಿಕೊಳ್ಳುವುದು ತವಕ್ಕುಲ್ (ಅಲ್ಲಾಹನನ್ನು ಅವಲಂಬಿಸುವುದು) ಮತ್ತು ತಾಳ್ಮೆಗೆ ವಿರುದ್ಧವಾಗುವುದಿಲ್ಲ.
ಪ್ರಾರ್ಥನೆಯು ಕಾರ್ಯಕಾರಣಗಳನ್ನು ಅವಲಂಬಿಸುವುದನ್ನು ಒಳಗೊಂಡಿದೆ. ಆದ್ದರಿಂದ ಅದರ ನಿರ್ದಿಷ್ಟ ಪದಗಳು ಮತ್ತು ಸಂಖ್ಯೆಗಳಿಗೆ ಬದ್ಧವಾಗಿರಬೇಕಾಗಿದೆ.
ಈ ಪ್ರಾರ್ಥನೆಯು ಎಲ್ಲಾ ರೀತಿಯ ಸ್ನಾಯು ಸಂಬಂಧಿತ ನೋವುಗಳಿಗೆ ಸಹಕಾರಿಯಾಗಿದೆ.
ಈ ಪ್ರಾರ್ಥನೆಯ ಮೂಲಕ ಮಂತ್ರಿಸುವಾಗ ನೋವಿರುವ ಸ್ಥಳದಲ್ಲಿ ಕೈಯಿಡಬೇಕು.
