ಯಾವುದೇ ಒಬ್ಬ ವ್ಯಕ್ತಿ ನನಗೆ ಸಲಾಂ ಹೇಳಿದರೂ, ನಾನು ಅವರ ಸಲಾಂಗೆ ಉತ್ತರಿಸುವ ತನಕ ಅಲ್ಲಾಹು ನನ್ನ ಆತ್ಮವನ್ನು ನನಗೆ ಮರಳಿಕೊಡದೇ…

ಯಾವುದೇ ಒಬ್ಬ ವ್ಯಕ್ತಿ ನನಗೆ ಸಲಾಂ ಹೇಳಿದರೂ, ನಾನು ಅವರ ಸಲಾಂಗೆ ಉತ್ತರಿಸುವ ತನಕ ಅಲ್ಲಾಹು ನನ್ನ ಆತ್ಮವನ್ನು ನನಗೆ ಮರಳಿಕೊಡದೇ ಇರಲಾರ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾವುದೇ ಒಬ್ಬ ವ್ಯಕ್ತಿ ನನಗೆ ಸಲಾಂ ಹೇಳಿದರೂ, ನಾನು ಅವರ ಸಲಾಂಗೆ ಉತ್ತರಿಸುವ ತನಕ ಅಲ್ಲಾಹು ನನ್ನ ಆತ್ಮವನ್ನು ನನಗೆ ಮರಳಿಕೊಡದೇ ಇರಲಾರ."

[إسناده حسن] [رواه أبو داود وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅವರಿಗೆ ಸಲಾಂ ಹೇಳುವ ಎಲ್ಲಾ ಮುಸಲ್ಮಾನರ ಸಲಾಂಗೆ ಉತ್ತರಿಸುವುದಕ್ಕಾಗಿ ಅಲ್ಲಾಹು ಅವರಿಗೆ ಅವರ ಆತ್ಮವನ್ನು ಮರಳಿಕೊಡುತ್ತಾನೆ. ಅವರು ಹತ್ತಿರದಲ್ಲಿದ್ದರೂ ದೂರದಲ್ಲಿದ್ದರೂ ಸಹ. ಬರ್ಝಕ್ ಮತ್ತು ಸಮಾಧಿಯ ಜೀವನವು ಅದೃಶ್ಯ ವಿಷಯಗಳಲ್ಲಿ ಒಳಪಟ್ಟದ್ದಾಗಿದ್ದು, ಅವುಗಳ ನಿಜಸ್ಥಿತಿಯನ್ನು ಅಲ್ಲಾಹನ ಹೊರತು ಯಾರೂ ತಿಳಿದಿಲ್ಲ. ಅವನು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

فوائد الحديث

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸಲಾತ್ ಮತ್ತು ಸಲಾಂ ಹೇಳುವುದನ್ನು ಹೆಚ್ಚಿಸಬೇಕೆಂದು ಪ್ರೋತ್ಸಾಹಿಸಲಾಗಿದೆ.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮಾಧಿ ಜೀವನವು ಒಬ್ಬ ವ್ಯಕ್ತಿ ಬರ್ಝಕ್‌ನಲ್ಲಿ ಜೀವಿಸುವ ಅತ್ಯಂತ ಪರಿಪೂರ್ಣ ಜೀವನವಾಗಿದೆ. ಅವುಗಳ ನಿಜಸ್ಥಿತಿಯೇನೆಂದು ಅಲ್ಲಾಹನ ಹೊರತು ಯಾರೂ ತಿಳಿದಿಲ್ಲ.

ನಾವು ಬದುಕಿರುವಂತೆಯೇ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೂಡ ಬದುಕಿದ್ದಾರೆ ಎಂದು ವಾದಿಸುವವರಿಗೆ, ಮತ್ತು ಅವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಾಯ ಕೇಳುವುದಕ್ಕೆ ಇದರಲ್ಲಿ ಪುರಾವೆ ಹುಡುಕುವ ಶಿರ್ಕ್ ವಾದಿಗಳಿಗೆ ಈ ಹದೀಸಿನಲ್ಲಿ ಪುರಾವೆಯಿಲ್ಲ. ವಾಸ್ತವವಾಗಿ ಇದು ಬರ್ಝಕೀ ಜೀವನವಾಗಿದೆ.

التصنيفات

Prophetic characteristics