ನೀವು ಮುಶ್ರಿಕರೊಡನೆ ನಿಮ್ಮ ಸಂಪತ್ತು, ನಿಮ್ಮ ಪ್ರಾಣ ಮತ್ತು ನಿಮ್ಮ ನಾಲಿಗೆಯಿಂದ ಜಿಹಾದ್ ಮಾಡಿರಿ

ನೀವು ಮುಶ್ರಿಕರೊಡನೆ ನಿಮ್ಮ ಸಂಪತ್ತು, ನಿಮ್ಮ ಪ್ರಾಣ ಮತ್ತು ನಿಮ್ಮ ನಾಲಿಗೆಯಿಂದ ಜಿಹಾದ್ ಮಾಡಿರಿ

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಮುಶ್ರಿಕರೊಡನೆ ನಿಮ್ಮ ಸಂಪತ್ತು, ನಿಮ್ಮ ಪ್ರಾಣ ಮತ್ತು ನಿಮ್ಮ ನಾಲಿಗೆಯಿಂದ ಜಿಹಾದ್ ಮಾಡಿರಿ."

[صحيح]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸತ್ಯನಿಷೇಧಿಗಳೊಡನೆ ಜಿಹಾದ್ ಮಾಡಲು ಮತ್ತು ಅಲ್ಲಾಹನ ವಚನವು ಅತ್ಯುನ್ನತವಾಗಬೇಕೆಂಬ ಉದ್ದೇಶದಿಂದ ಅವರನ್ನು ಎದುರಿಸಲು ಸಾಧ್ಯವಿರುವ ಎಲ್ಲ ವಿಧಾನಗಳಿಂದಲೂ ಪರಿಶ್ರಮಿಸಬೇಕೆಂದು ಆದೇಶಿಸಿದರು. ಅವುಗಳಲ್ಲಿ ಕೆಲವು ಹೀಗಿವೆ: ಮೊದಲನೆಯದಾಗಿ: ಅವರೊಡನೆ ಜಿಹಾದ್ ಮಾಡಲು ಸಂಪತ್ತನ್ನು ಖರ್ಚು ಮಾಡುವುದು. ಉದಾಹರಣೆಗೆ, ಶಸ್ತ್ರಾಸ್ತ್ರಗಳನ್ನು ಖರೀದಿಸುವುದು, ಜಿಹಾದ್ ಮಾಡುವವರ ವೆಚ್ಚ ಭರಿಸುವುದು ಇತ್ಯಾದಿ. ಎರಡನೆಯದಾಗಿ: ಅವರನ್ನು ಎದುರಿಸಲು ಮತ್ತು ಅವರನ್ನು ತಡೆಯಲು ಪ್ರಾಣ ಮತ್ತು ದೇಹದೊಂದಿಗೆ ಸ್ವತಃ ಹೊರಡುವುದು. ಮೂರನೆಯದಾಗಿ: ಅವರನ್ನು ನಾಲಿಗೆಯ ಮೂಲಕ ಈ ಧರ್ಮಕ್ಕೆ ಆಹ್ವಾನಿಸುವುದು, ಅವರ ಮೇಲೆ ಪುರಾವೆಗಳನ್ನು ಸ್ಥಾಪಿಸುವುದು, ಮತ್ತು ಅವರನ್ನು ಖಂಡಿಸುವುದು ಮತ್ತು ಅವರಿಗೆ ಪ್ರತ್ಯುತ್ತರ ನೀಡುವುದು.

فوائد الحديث

ಪ್ರಾಣ, ಸಂಪತ್ತು ಮತ್ತು ನಾಲಿಗೆಯಿಂದ ಮುಶ್ರಿಕರೊಡನೆ ಜಿಹಾದ್ ಮಾಡಲು ಪ್ರೋತ್ಸಾಹಿಸಲಾಗಿದೆ. ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಜಿಹಾದ್ ಮಾಡಬೇಕಾಗಿದೆ. ಜಿಹಾದ್ ಕೇವಲ ದೈಹಿಕವಾಗಿ ಹೋರಾಡುವುದಕ್ಕೆ ಸೀಮಿತವಾಗಿಲ್ಲ.

ಜಿಹಾದಿನ ಆದೇಶವು ಕಡ್ಡಾಯದ ಆದೇಶವಾಗಿದೆ. ಅದು ಕೆಲವೊಮ್ಮೆ ವೈಯಕ್ತಿಕ ಕಡ್ಡಾಯವಾಗಬಹುದು (ಫರ್ದ್ ಐನ್), ಮತ್ತು ಕೆಲವೊಮ್ಮೆ ಸಾಮಾಜಿಕ ಕಡ್ಡಾಯವಾಗಬಹುದು (ಫರ್ದ್ ಕಿಫಾಯ).

ಅಲ್ಲಾಹು ಜಿಹಾದನ್ನು ಹಲವಾರು ಕಾರಣಗಳಿಗಾಗಿ ನಿಯಮಗೊಳಿಸಿದ್ದಾನೆ: ಮೊದಲನೆಯದಾಗಿ: ಶಿರ್ಕ್ (ದೇವಸಹಭಾಗಿತ್ವ) ಮತ್ತು ಮುಶ್ರಿಕರನ್ನು ವಿರೋಧಿಸುವುದು; ಏಕೆಂದರೆ ಅಲ್ಲಾಹು ಶಿರ್ಕ್ ಅನ್ನು ಎಂದಿಗೂ ಸ್ವೀಕರಿಸುವುದಿಲ್ಲ. ಎರಡನೆಯದಾಗಿ: ಅಲ್ಲಾಹನ ಕಡೆಗೆ ಆಹ್ವಾನಿಸುವ ಮಾರ್ಗದಲ್ಲಿ ಅಡ್ಡಿಯಾಗುವ ಅಡೆತಡೆಗಳನ್ನು ನಿವಾರಿಸುವುದು. ಮೂರನೆಯದಾಗಿ: ಏಕದೇವ ಸಿದ್ಧಾಂತವನ್ನು ಅದನ್ನು ವಿರೋಧಿಸುವ ಎಲ್ಲದರಿಂದಲೂ ರಕ್ಷಿಸುವುದು. ನಾಲ್ಕನೆಯದಾಗಿ: ಮುಸ್ಲಿಮರು, ಅವರ ದೇಶಗಳು, ಅವರ ಗೌರವಗಳು ಮತ್ತು ಅವರ ಸಂಪತ್ತನ್ನು ರಕ್ಷಿಸುವುದು.

التصنيفات

Ruling of Jihad