ನೀನು ಹಿಂದೆ ಮಾಡಿದ ಒಳಿತುಗಳೊಂದಿಗೇ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವೆ

ನೀನು ಹಿಂದೆ ಮಾಡಿದ ಒಳಿತುಗಳೊಂದಿಗೇ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವೆ

ಹಕೀಮ್ ಬಿನ್ ಹಿಝಾಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಅಜ್ಞಾನ ಕಾಲದಲ್ಲಿ ನಾನು ದಾನ ಧರ್ಮ, ಗುಲಾಮ ವಿಮೋಚನೆ, ಕುಟುಂಬ ಸಂಬಂಧ ಜೋಡಿಸುವುದು ಮುಂತಾದ ಸತ್ಕರ್ಮಗಳನ್ನು ಮಾಡುತ್ತಿದ್ದೆ. ಅದಕ್ಕಾಗಿ ನನಗೆ ಏನಾದರೂ ಪ್ರತಿಫಲ ದೊರೆಯುವುದೇ?" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀನು ಹಿಂದೆ ಮಾಡಿದ ಒಳಿತುಗಳೊಂದಿಗೇ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವೆ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸತ್ಯನಿಷೇಧಿಯಾಗಿದ್ದ ಒಬ್ಬ ವ್ಯಕ್ತಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರೆ, ಅವನು ಸತ್ಯನಿಷೇಧಿಯಾಗಿದ್ದಾಗ ಮಾಡಿದ ದಾನ ಧರ್ಮ, ಗುಲಾಮ ವಿಮೋಚನೆ, ಕುಟುಂಬ ಸಂಬಂಧ ಜೋಡಿಸುವುದು ಮುಂತಾದ ಸತ್ಕರ್ಮಗಳಿಗೆ ಪ್ರತಿಫಲವನ್ನು ಪಡೆಯುತ್ತಾನೆ.

فوائد الحديث

ಸತ್ಯ ನಿಷೇಧಿಯು ತನ್ನ ಸತ್ಯನಿಷೇಧದಲ್ಲೇ ಸತ್ತರೆ ಇಹಲೋಕದಲ್ಲಿ ಮಾಡಿದ ಸತ್ಕರ್ಮಗಳಿಗೆ ಪರಲೋಕದಲ್ಲಿ ಪ್ರತಿಫಲ ನೀಡಲಾಗುವುದಿಲ್ಲ.

التصنيفات

ಇಸ್ಲಾಮ್