إعدادات العرض
ನಾನೇ ನಿಮ್ಮ ಪೈಕಿ ಅಲ್ಲಾಹನ ಬಗ್ಗೆ ಅತ್ಯಂತ ಭಯಭಕ್ತಿಯುಳ್ಳವನು ಮತ್ತು ಅವನ ಬಗ್ಗೆ ಅತಿ ಹೆಚ್ಚು ತಿಳಿದವನು
ನಾನೇ ನಿಮ್ಮ ಪೈಕಿ ಅಲ್ಲಾಹನ ಬಗ್ಗೆ ಅತ್ಯಂತ ಭಯಭಕ್ತಿಯುಳ್ಳವನು ಮತ್ತು ಅವನ ಬಗ್ಗೆ ಅತಿ ಹೆಚ್ಚು ತಿಳಿದವನು
ಸತ್ಯವಿಶ್ವಾಸಿಗಳ ಮಾತೆ ಆಯಿಶಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಿಗೆ ಯಾವುದೇ ಕಾರ್ಯಗಳನ್ನು ಆದೇಶಿಸುವಾಗ, ಅವರಿಗೆ ನಿರ್ವಹಿಸಲು ಸಾಧ್ಯವಾಗುವಂತಹ ಕಾರ್ಯಗಳನ್ನು ಆದೇಶಿಸುತ್ತಿದ್ದರು. ಜನರು ಹೇಳುತ್ತಿದ್ದರು: "ಓ ಅಲ್ಲಾಹನ ಸಂದೇಶವಾಹಕರೇ, ನಾವು ನಿಮ್ಮಂತೆ ಅಲ್ಲ . ಖಂಡಿತವಾಗಿಯೂ ಅಲ್ಲಾಹು ನಿಮ್ಮ ಹಿಂದಿನ ಮತ್ತು ಮುಂದಿನ ಪಾಪಗಳನ್ನು ಕ್ಷಮಿಸಿದ್ದಾನೆ". ಆಗ ಅವರು (ಪ್ರವಾದಿ) ಕೋಪಗೊಳ್ಳುತ್ತಿದ್ದರು. ಎಷ್ಟರಮಟ್ಟಿಗೆಂದರೆ ಆ ಕೋಪವು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ನಂತರ ಅವರು ಹೇಳುತ್ತಿದ್ದರು: "ನಾನೇ ನಿಮ್ಮ ಪೈಕಿ ಅಲ್ಲಾಹನ ಬಗ್ಗೆ ಅತ್ಯಂತ ಭಯಭಕ್ತಿಯುಳ್ಳವನು ಮತ್ತು ಅವನ ಬಗ್ಗೆ ಅತಿ ಹೆಚ್ಚು ತಿಳಿದವನು".
الترجمة
العربية Português دری Македонски Tiếng Việt Magyar ქართული Indonesia বাংলা Kurdî ไทย অসমীয়া Nederlands Hausa ਪੰਜਾਬੀ Kiswahili Tagalog ភាសាខ្មែរ English ગુજરાતી සිංහල Русский मराठी മലയാളംالشرح
ಸತ್ಯವಿಶ್ವಾಸಿಗಳ ಮಾತೆ ಆಯಿಶಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಿಗೆ ಯಾವುದಾದರೂ ಕೆಲಸವನ್ನು ಆದೇಶಿಸಿದರೆ, ಅವರಿಗೆ ಕಷ್ಟವಾಗದಂತಹ ಸುಲಭವಾದ ಕಾರ್ಯವನ್ನೇ ಆದೇಶಿಸುತ್ತಿದ್ದರು. ಜನರು ಅದನ್ನು ನಿರಂತರವಾಗಿ ಮಾಡಲು ಸಾಧ್ಯವಾಗದೆ ಬಿಟ್ಟುಬಿಡಬಹುದು ಎಂಬ ಭಯದಿಂದ ಅವರು ಹೀಗೆ ಮಾಡುತ್ತಿದ್ದರು. ಪ್ರವಾದಿಯವರು ಕೂಡ ಅಂತಹ ಸುಲಭವಾದ (ಮಿತವಾದ) ಕಾರ್ಯವನ್ನೇ ಮಾಡುತ್ತಿದ್ದರು. ಆದರೆ ಸಹಾಬಾಗಳು ಪ್ರವಾದಿಯವರಿಗಿಂತ ಹೆಚ್ಚು ಕಷ್ಟಕರವಾದ ಕಾರ್ಯಗಳನ್ನು ಮಾಡಲು ಬಯಸುತ್ತಿದ್ದರು. ಅವರ ನಂಬಿಕೆಯೇನೆಂದರೆ, ತಮ್ಮ ಸ್ಥಾನಮಾನಗಳನ್ನು ಏರಿಸಿಕೊಳ್ಳಲು ಅವರು ಆರಾಧನೆಯಲ್ಲಿ ಹೆಚ್ಚು ಶ್ರಮಪಡುವ ಅಗತ್ಯವಿದೆ. ಆದರೆ ಪ್ರವಾದಿಯವರಿಗೆ ಅದರ ಅಗತ್ಯವಿಲ್ಲ (ಏಕೆಂದರೆ ಅವರ ಪಾಪಗಳನ್ನು ಅಲ್ಲಾಹು ಕ್ಷಮಿಸಿದ್ದಾನೆ). ಆದ್ದರಿಂದ ಅವರು ಹೇಳುತ್ತಿದ್ದರು: "ಓ ಅಲ್ಲಾಹನ ಸಂದೇಶವಾಹಕರೇ, ನಮ್ಮ ಸ್ಥಿತಿ ನಿಮ್ಮಂತಲ್ಲ. ಅಲ್ಲಾಹು ನಿಮ್ಮ ಪಾಪಗಳನ್ನು ಕ್ಷಮಿಸಿದ್ದಾನೆ." ಇದನ್ನು ಕೇಳಿ ಪ್ರವಾದಿಯವರು ಕೋಪಗೊಳ್ಳುತ್ತಿದ್ದರು ಮತ್ತು ಅದು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ನಂತರ ಅವರು ಹೇಳುತ್ತಿದ್ದರು: "ನಾನು ನಿಮಗಿಂತ ಹೆಚ್ಚು ಅಲ್ಲಾಹನ ಭಯವುಳ್ಳವನು ಮತ್ತು ತಿಳಿದವನು. ಆದ್ದರಿಂದ ನಾನು ಏನನ್ನು ಆದೇಶಿಸುತ್ತೇನೆಯೋ ಅದನ್ನೇ ಮಾಡಿರಿ."فوائد الحديث
ಇಬ್ನ್ ಹಜರ್ ಹೇಳುತ್ತಾರೆ: ಅವರು ಜನರಿಗೆ ಸುಲಭವಾದ ಕಾರ್ಯಗಳನ್ನು ಆದೇಶಿಸಲು ಕಾರಣ, ಅವರು ಅದನ್ನು ನಿರಂತರವಾಗಿ ಮಾಡಲಿ ಎಂಬುದಾಗಿತ್ತು. ಇನ್ನೊಂದು ಹದೀಸ್‌ನಲ್ಲಿ ಹೇಳಿರುವಂತೆ: "ಅಲ್ಲಾಹನಿಗೆ ಅತ್ಯಂತ ಇಷ್ಟವಾದ ಕಾರ್ಯವೆಂದರೆ, ಕಡಿಮೆಯಾದರೂ ಸರಿ, ನಿರಂತರವಾಗಿ ಮಾಡುವ ಕಾರ್ಯವಾಗಿದೆ."
ಸಜ್ಜನ ವ್ಯಕ್ತಿಯು ತನ್ನ ಸಜ್ಜನಿಕೆಯನ್ನು ನಂಬಿಕೊಂಡು, ಕರ್ಮಗಳಲ್ಲಿ ಪರಿಶ್ರಮ ಪಡುವುದನ್ನು ಬಿಡಬಾರದು.
ಅಗತ್ಯಬಿದ್ದರೆ ಮತ್ತು ಅಹಂಕಾರ ಅಥವಾ ದೊಡ್ಡಸ್ತಿಕೆ ಉಂಟಾಗಬಹುದು ಎಂಬ ಭಯವಿಲ್ಲದಿದ್ದರೆ, ಒಬ್ಬ ವ್ಯಕ್ತಿಯು ತನ್ನಲ್ಲಿರುವ ಒಳಿತು ಅಥವಾ ಶ್ರೇಷ್ಠತೆಯನ್ನು ಹೇಳಿಕೊಳ್ಳುವುದು ಸಮ್ಮತಾರ್ಹವಾಗಿದೆ.
ಆರಾಧನೆಯಲ್ಲಿ ಮಿತವಾಗಿರುವುದು ಮತ್ತು ನಿರಂತರತೆ ಕಾಯ್ದುಕೊಳ್ಳುವುದು ಮುಖ್ಯವೇ ಹೊರತು, ಅತಿಯಾಗಿ ಮಾಡಿ ಕೊನೆಗೆ ಬಿಟ್ಟುಬಿಡುವುದಲ್ಲ.
ಇಬ್ನ್ ಹಜರ್ ಹೇಳುತ್ತಾರೆ: ದಾಸನು ಆರಾಧನೆಯ ಉನ್ನತ ಹಂತ ತಲುಪಿದಾಗ, ಆ ಅನುಗ್ರಹವನ್ನು ಉಳಿಸಿಕೊಳ್ಳಲು ಮತ್ತು ಕೃತಜ್ಞತೆ ಸಲ್ಲಿಸುವ ಮೂಲಕ ಅದನ್ನು ಹೆಚ್ಚಿಸಿಕೊಳ್ಳಲು, ಆರಾಧನೆಯಲ್ಲಿ ನಿರಂತರತೆ ಕಾಯ್ದುಕೊಳ್ಳಬೇಕು.
ಶರೀಅತ್‌ಗೆ ವಿರುದ್ಧವಾದುದನ್ನು ಕಂಡಾಗ, ಅಥವಾ ಬುದ್ಧಿವಂತನಾದವನು ವಿಷಯವನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವಿದಾಗ, ಅವನನ್ನು ಎಚ್ಚರಿಸಲು ಕೋಪಗೊಳ್ಳುವುದು ಧರ್ಮಸಮ್ಮತವಾಗಿದೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಮುದಾಯದ ಮೇಲೆ ತೋರುತ್ತಿದ್ದ ಕರುಣೆ, ಮತ್ತು ಈ ಧರ್ಮವು ಸರಳವಾಗಿದೆ ಹಾಗೂ ಉದಾರವಾಗಿದೆ ಎಂಬುದನ್ನು ಇದು ತೋರಿಸುತ್ತದೆ.
ಸಹಾಬಾಗಳು ಆರಾಧನೆಯಲ್ಲಿ ಹೊಂದಿದ್ದ ತೀವ್ರ ಆಸಕ್ತಿ ಮತ್ತು ಒಳಿತನ್ನು ಹೆಚ್ಚು ಹೆಚ್ಚು ಪಡೆಯಬೇಕೆಂಬ ಹಂಬಲವನ್ನು ತಿಳಿಸಲಾಗಿದೆ.
ಶಾಸನಕರ್ತನು (ಅಲ್ಲಾಹು) ವಿಧಿಸಿದ ಮಿತಿಗಳಿಗೆ (ಅದು ಕಡ್ಡಾಯವಾಗಿರಲಿ ಅಥವಾ ರಿಯಾಯಿತಿಯಾಗಿರಲಿ) ಬದ್ಧರಾಗಿರಬೇಕು ಮತ್ತು ಧಾರ್ಮಿಕ ನಿಯಮಗಳಿಗೆ ಅನುಗುಣವಾಗಿರುವ ಸುಲಭವಾದ ದಾರಿಯನ್ನು ಸ್ವೀಕರಿಸುವುದು, ಅವುಗಳಿಗೆ ವಿರುದ್ಧವಾಗಿರುವ ಕಷ್ಟದ ದಾರಿಗಳನ್ನು ಸ್ವೀಕರಿಸುವುದಕ್ಕಿಂತ ಉತ್ತಮವಾಗಿದೆ ಎಂದು ನಂಬಬೇಕು.
