ಒಬ್ಬ ವ್ಯಕ್ತಿ ಅಸುನೀಗಿದರೆ ಅವನ ಕರ್ಮಗಳೆಲ್ಲವೂ ಮುಕ್ತಾಯವಾಗುತ್ತವೆ. ಆದರೆ ಮೂರು ವಿಷಯಗಳು ಇದಕ್ಕೆ ಹೊರತಾಗಿವೆ. ನಡೆಯುತ್ತಿರುವ…

ಒಬ್ಬ ವ್ಯಕ್ತಿ ಅಸುನೀಗಿದರೆ ಅವನ ಕರ್ಮಗಳೆಲ್ಲವೂ ಮುಕ್ತಾಯವಾಗುತ್ತವೆ. ಆದರೆ ಮೂರು ವಿಷಯಗಳು ಇದಕ್ಕೆ ಹೊರತಾಗಿವೆ. ನಡೆಯುತ್ತಿರುವ ದಾನ-ಧರ್ಮಗಳು, ಪ್ರಯೋಜನಪಡೆಯಲಾಗುತ್ತಿರುವ ಜ್ಞಾನಗಳು ಮತ್ತು ಅವನಿಗಾಗಿ ಪ್ರಾರ್ಥಿಸುವ ಅವನ ನೀತಿವಂತ ಮಕ್ಕಳು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ವ್ಯಕ್ತಿ ಅಸುನೀಗಿದರೆ ಅವನ ಕರ್ಮಗಳೆಲ್ಲವೂ ಮುಕ್ತಾಯವಾಗುತ್ತವೆ. ಆದರೆ ಮೂರು ವಿಷಯಗಳು ಇದಕ್ಕೆ ಹೊರತಾಗಿವೆ. ನಡೆಯುತ್ತಿರುವ ದಾನ-ಧರ್ಮಗಳು, ಪ್ರಯೋಜನಪಡೆಯಲಾಗುತ್ತಿರುವ ಜ್ಞಾನಗಳು ಮತ್ತು ಅವನಿಗಾಗಿ ಪ್ರಾರ್ಥಿಸುವ ಅವನ ನೀತಿವಂತ ಮಕ್ಕಳು."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಮರಣಹೊಂದಿದ ವ್ಯಕ್ತಿಯ ಕರ್ಮಗಳು ಅವನ ಮರಣದೊಂದಿಗೆ ಮುಕ್ತಾಯವಾಗುತ್ತವೆ. ಮರಣಾನಂತರ ಅವನ ಹೆಸರಲ್ಲಿ ಯಾವುದೇ ಸತ್ಕರ್ಮಗಳನ್ನು ದಾಖಲಿಸಲಾಗುವುದಿಲ್ಲ. ಆದರೆ, ಈ ಮೂರು ವಿಷಯಗಳು ಇದಕ್ಕೆ ಹೊರತಾಗಿವೆ. ಏಕೆಂದರೆ, ಇವು ಸಂಭವಿಸಲು ಅವನು ಕಾರಣಕರ್ತನಾಗಿದ್ದನು. ಒಂದು: ನಿರಂತರ ಮತ್ತು ಶಾಶ್ವತವಾಗಿ ಪ್ರತಿಫಲ ನೀಡುತ್ತಿರುವ ದಾನಧರ್ಮಗಳು. ಉದಾಹರಣೆಗೆ, ವಕ್ಫ್, ಮಸೀದಿ ನಿರ್ಮಾಣ, ಬಾವಿ ತೋಡುವುದು ಇತ್ಯಾದಿ. ಎರಡು: ಜನರು ಪ್ರಯೋಜನ ಪಡೆಯುತ್ತಿರುವ ಜ್ಞಾನ. ಉದಾಹರಣೆಗೆ, ಜ್ಞಾನದ ಪುಸ್ತಕಗಳನ್ನು ಬರೆಯುವುದು, ಜ್ಞಾನವನ್ನು ಇತರರಿಗೆ ಕಲಿಸಿಕೊಡುವುದು, ಮತ್ತು ಇವನ ಮರಣಾನಂತರ ಅವರು ಅದನ್ನು ಇತರರಿಗೆ ಕಲಿಸಿಕೊಡುವುದು ಇತ್ಯಾದಿ. ಮೂರು: ತನ್ನ ಮಾತಾಪಿತರಿಗಾಗಿ ಪ್ರಾರ್ಥಿಸುತ್ತಿರುವ ಸತ್ಯವಿಶ್ವಾಸಿಗಳಾದ ನೀತಿವಂತ ಮಕ್ಕಳು.

فوائد الحديث

ವಿದ್ವಾಂಸರ ಒಮ್ಮತಾಭಿಪ್ರಾಯದ ಪ್ರಕಾರ ಮನುಷ್ಯನಿಗೆ ಮರಣಾನಂತರ ಪ್ರತಿಫಲ ನೀಡುವ ಕರ್ಮಗಳು ಯಾವುದೆಂದರೆ: ನಿರಂತರ ನಡೆಯುತ್ತಿರುವ ದಾನಧರ್ಮಗಳು, ಪ್ರಯೋಜನ ಪಡೆಯಲಾಗುತ್ತಿರುವ ಜ್ಞಾನಗಳು ಮತ್ತು ಪ್ರಾರ್ಥನೆಗಳು. ಇನ್ನೊಂದು ಹದೀಸಿನಲ್ಲಿ ಹಜ್ಜ್ ಅನ್ನು ಕೂಡ ಸೇರಿಸಲಾಗಿದೆ.

ಈ ಹದೀಸಿನಲ್ಲಿ ಈ ಮೂರು ವಿಷಯಗಳನ್ನು ವಿಶೇಷವಾಗಿ ಹೇಳಿರುವುದೇಕೆಂದರೆ, ಇವು ಒಳಿತುಗಳ ಮೂಲವಾಗಿವೆ ಮತ್ತು ಸಾತ್ವಿಕರು ತಮ್ಮ ಮರಣಾನಂತರ ನೆಲೆನಿಲ್ಲಬೇಕೆಂದು ಹೆಚ್ಚಾಗಿ ಬಯಸುವುದು ಇವುಗಳನ್ನಾಗಿವೆ.

ಪ್ರಯೋಜನ ಪಡೆಯಲಾಗುವ ಎಲ್ಲಾ ಜ್ಞಾನಗಳಿಗೂ ಪ್ರತಿಫಲ ದೊರೆಯುತ್ತದೆ. ಆದರೆ ಧಾರ್ಮಿಕ ಜ್ಞಾನ ಮತ್ತು ಅದನ್ನು ಎತ್ತಿಹಿಡಿಯುವ ಜ್ಞಾನಗಳು ಇವೆಲ್ಲದರ ಅಗ್ರ ಶಿಖರದಲ್ಲಿ ನಿಲ್ಲುತ್ತವೆ.

ಈ ಮೂರು ವಿಷಯಗಳಲ್ಲಿ ಜ್ಞಾನವು ಹೆಚ್ಚು ಪ್ರಯೋಜನಕಾರಿಯಾಗಿದೆ. ಏಕೆಂದರೆ, ಜ್ಞಾನವು ಅದನ್ನು ಕಲಿಯುವ ವ್ಯಕ್ತಿಗೆ ಪ್ರಯೋಜನಕಾರಿಯಾಗಿದೆ, ಅದು ಧರ್ಮಶಾಸ್ತ್ರವನ್ನು ಸಂರಕ್ಷಿಸುತ್ತದೆ ಮತ್ತು ಅದು ಮನುಷ್ಯರಿಗೆ ಸಾರ್ವತ್ರಿಕ ಪ್ರಯೋಜನವನ್ನು ನೀಡುತ್ತದೆ. ಅದು ಹೆಚ್ಚು ಸಮಗ್ರ ಮತ್ತು ಸಾರ್ವತ್ರಿಕವಾಗಿದೆ. ಏಕೆಂದರೆ, ಜನರು ನಿಮ್ಮ ಜ್ಞಾನದಿಂದ ನೀವು ಬದುಕಿರುವಾಗಲೂ, ನೀವು ಮರಣಹೊಂದಿದ ನಂತರವೂ ಅರಿವನ್ನು ಪಡೆಯುತ್ತಾರೆ.

ನೀತಿವಂತ ಮಕ್ಕಳನ್ನು ಬೆಳೆಸಲು ಪ್ರೋತ್ಸಾಹಿಸಲಾಗಿದೆ. ಏಕೆಂದರೆ, ಅವರು ಪರಲೋಕದಲ್ಲಿ ಮಾತಾಪಿತರಿಗೆ ಪ್ರಯೋಜನ ನೀಡುತ್ತಾರೆ. ಅವರು ನೀಡುವ ಪ್ರಯೋಜನವು ಅವರು ಮಾತಾಪಿತರಿಗಾಗಿ ಮಾಡುವ ಪ್ರಾರ್ಥನೆಯಾಗಿದೆ.

ಮರಣಹೊಂದಿದ ಮಾತಾಪಿತರಿಗೆ ಒಳಿತು ಮಾಡಲು ಪ್ರೋತ್ಸಾಹಿಸಲಾಗಿದೆ. ಮಕ್ಕಳಿಗೆ ಪ್ರಯೋಜನ ದೊರೆಯುವ ಒಳಿತುಗಳಲ್ಲಿ ಇದು ಕೂಡ ಸೇರಿದೆ.

ಮಕ್ಕಳಲ್ಲದವರು ಪ್ರಾರ್ಥಿಸುವ ಪ್ರಾರ್ಥನೆಗಳಿಂದಲೂ ಮರಣಹೊಂದಿದವರಿಗೆ ಪ್ರಯೋಜನ ದೊರೆಯುತ್ತದೆ. ಆದರೆ ಇಲ್ಲಿ ಮಕ್ಕಳನ್ನು ವಿಶೇಷವಾಗಿ ಉಲ್ಲೇಖಿಸಿದ್ದೇಕೆಂದರೆ, ಮಕ್ಕಳು ಹೆಚ್ಚಾಗಿ ತಮ್ಮ ಮರಣದವರೆಗೂ ತಮ್ಮ ಮಾತಾಪಿತರಿಗಾಗಿ ನಿರಂತರ ಪ್ರಾರ್ಥಿಸುವವರಾಗಿದ್ದಾರೆ.

التصنيفات

Endowment, Merits of Supplication, Doing Good Deeds on behalf of the Deceased and Gifting them the Reward, Merit and Significance of Knowledge