ನಾನು ಉತ್ತಮ ಗುಣನಡವಳಿಕೆಗಳನ್ನು (ಮಕಾರಿಮಲ್ ಅಖ್ಲಾಖ್) ಪರಿಪೂರ್ಣಗೊಳಿಸುವುದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ

ನಾನು ಉತ್ತಮ ಗುಣನಡವಳಿಕೆಗಳನ್ನು (ಮಕಾರಿಮಲ್ ಅಖ್ಲಾಖ್) ಪರಿಪೂರ್ಣಗೊಳಿಸುವುದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ಉತ್ತಮ ಗುಣನಡವಳಿಕೆಗಳನ್ನು (ಮಕಾರಿಮಲ್ ಅಖ್ಲಾಖ್) ಪರಿಪೂರ್ಣಗೊಳಿಸುವುದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ".

[حسن] [رواه البخاري في الأدب المفرد وأحمد والبيهقي]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಅತ್ಯುನ್ನತನಾದ ಅಲ್ಲಾಹು ಅವರನ್ನು ಶ್ರೇಷ್ಠ ನಡವಳಿಕೆಗಳನ್ನು ಮತ್ತು ಸದ್ಗುಣಗಳನ್ನು ಪೂರ್ಣಗೊಳಿಸುವುದಕ್ಕಾಗಿಯೇ ಕಳುಹಿಸಿದ್ದಾನೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಮಗಿಂತ ಹಿಂದಿನ ಸಂದೇಶವಾಹಕರ (ಬೋಧನೆಗಳನ್ನು) ಪೂರ್ಣಗೊಳಿಸುವ ಕಾರ್ಯಕ್ಕಾಗಿ ಮತ್ತು ಅರಬ್ಬರಲ್ಲಿದ್ದ ಉತ್ತಮ ಗುಣನಡತೆಗಳನ್ನು ಪರಿಪೂರ್ಣಗೊಳಿಸುವುದಕ್ಕಾಗಿ ಕಳುಹಿಸಲ್ಪಟ್ಟರು. ಅವರು (ಅರಬ್ಬರು) ಒಳಿತನ್ನು ಪ್ರೀತಿಸುತ್ತಿದ್ದರು ಮತ್ತು ಕೆಡುಕನ್ನು ದ್ವೇಷಿಸುತ್ತಿದ್ದರು. ಅವರು ಪೌರುಷ, ಔದಾರ್ಯ ಮತ್ತು ಘನತೆಯುಳ್ಳವರಾಗಿದ್ದರು. ಆದ್ದರಿಂದ ಅವರ ಗುಣನಡತೆಯಲ್ಲಿದ್ದ ಕೊರತೆಗಳನ್ನು ಪೂರ್ಣಗೊಳಿಸಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಕಳುಹಿಸಲ್ಪಟ್ಟರು. ಉದಾಹರಣೆಗೆ ವಂಶದ ಬಗ್ಗೆ ಹೆಮ್ಮೆಪಡುವುದು, ಅಹಂಕಾರ ಪಡುವುದು, ಬಡವರನ್ನು ಕೀಳಾಗಿ ಕಾಣುವುದು ಮುಂತಾದ ಕೊರತೆಗಳು.

فوائد الحديث

ಉತ್ತಮ ಗುಣನಡತೆಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗಿದೆ, ಮತ್ತು ಅವುಗಳ ವಿರುದ್ಧವಾದವುಗಳನ್ನು ನಿಷೇಧಿಸಲಾಗಿದೆ.

ಇಸ್ಲಾಮೀ ಶರೀಅತ್‌ನಲ್ಲಿ ಉತ್ತಮ ಗುಣನಡವಳಿಕೆಗಿರುವ ಮಹತ್ವವನ್ನು ವಿವರಿಸಲಾಗಿದೆ ಮತ್ತು ಅದು ಇಸ್ತಾಂ ಧರ್ಮದ ಆದ್ಯತೆಗಳಲ್ಲಿ ಒಂದಾಗಿದೆ ಎಂದು ತಿಳಿಸಲಾಗಿದೆ.

ಅಜ್ಞಾನದ ಕಾಲದ (ಜಾಹಿಲಿಯ್ಯಃ) ಜನರಲ್ಲಿ ಉತ್ತಮ ಗುಣನಡವಳಿಕೆಯ ಕೆಲವು ಅವಶೇಷಗಳಿದ್ದವು. ಉದಾಹರಣೆಗೆ, ಔದಾರ್ಯ, ಶೌರ್ಯ ಇತ್ಯಾದಿ. ಇಸ್ಲಾಮ್ ಅವುಗಳನ್ನು ಪರಿಪೂರ್ಣಗೊಳಿಸಲು ಬಂದಿತು.

التصنيفات

ಶ್ಲಾಘನೀಯ ಚರಿತ್ರೆಯ ಸದ್ಗುಣಗಳು