إعدادات العرض
'ಹಾಗಾದರೆ, ನೀನು ಬಯಸಿದ್ದೆಲ್ಲವೂ ನಿನಗೆ ಖಂಡಿತ ಸಿಗುತ್ತದೆ, ಮತ್ತು ಅದರೊಂದಿಗೆ ಅದರಷ್ಟೇ (ಹೆಚ್ಚಿಗೆ ಸಿಗುತ್ತದೆ)'
'ಹಾಗಾದರೆ, ನೀನು ಬಯಸಿದ್ದೆಲ್ಲವೂ ನಿನಗೆ ಖಂಡಿತ ಸಿಗುತ್ತದೆ, ಮತ್ತು ಅದರೊಂದಿಗೆ ಅದರಷ್ಟೇ (ಹೆಚ್ಚಿಗೆ ಸಿಗುತ್ತದೆ)'
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸ್ವರ್ಗದಲ್ಲಿ ನಿಮ್ಮಲ್ಲೊಬ್ಬನ ಅತ್ಯಂತ ಕೆಳಮಟ್ಟದ ಸ್ಥಾನವು (ಹೇಗಿರುತ್ತದೆ) ಎಂದರೆ, ಅವನೊಂದಿಗೆ (ಅಲ್ಲಾಹು) ಹೇಳುತ್ತಾನೆ: 'ಏನಾದರೂ ಇಚ್ಚಿಸು!'. ಆಗ ಅವನು ಇಚ್ಚಿಸುತ್ತಾನೆ, ಮತ್ತು ಇಚ್ಚಿಸುತ್ತಾನೆ (ಇಚ್ಚಿಸುತ್ತಲೇ ಇರುತ್ತಾನೆ). ನಂತರ ಅವನೊಂದಿಗೆ (ಅಲ್ಲಾಹು) ಕೇಳುತ್ತಾನೆ: 'ನೀನು (ಎಲ್ಲವನ್ನೂ) ಇಚ್ಚಿಸಿದೆಯಾ?'. ಅವನು ಹೇಳುತ್ತಾನೆ: 'ಹೌದು'. ಆಗ ಅವನೊಂದಿಗೆ (ಅಲ್ಲಾಹು) ಹೇಳುತ್ತಾನೆ: 'ಹಾಗಾದರೆ, ನೀನು ಬಯಸಿದ್ದೆಲ್ಲವೂ ನಿನಗೆ ಖಂಡಿತ ಸಿಗುತ್ತದೆ, ಮತ್ತು ಅದರೊಂದಿಗೆ ಅದರಷ್ಟೇ (ಹೆಚ್ಚಿಗೆ ಸಿಗುತ್ತದೆ)' ".
الترجمة
العربية বাংলা Bosanski English Español فارسی Français Indonesia Русский Tagalog Türkçe اردو 中文 हिन्दी Tiếng Việt සිංහල Hausa Kurdî தமிழ் অসমীয়া Nederlands Kiswahili ગુજરાતી Magyar ქართული Română Português ไทย తెలుగు मराठी دری አማርኛ Malagasy Македонски ភាសាខ្មែរ Українська ਪੰਜਾਬੀ Wolof پښتو Moore Svenska മലയാളംالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸ್ವರ್ಗವನ್ನು ಪ್ರವೇಶಿಸುವವರಲ್ಲಿ ಅತ್ಯಂತ ಕೆಳಮಟ್ಟದ ಮತ್ತು ಕನಿಷ್ಠ ದರ್ಜೆಯ ವ್ಯಕ್ತಿಯೊಂದಿಗೆ (ಅಲ್ಲಾಹು) ಹೇಳುತ್ತಾನೆ: ಇಚ್ಚಿಸು. ಆಗ ಅವನು ಇಚ್ಚಿಸುತ್ತಾನೆ, ಮತ್ತು ಬಯಸುತ್ತಾನೆ, ಎಲ್ಲಿಯವರೆಗೆಂದರೆ ಅವನು ಪ್ರಕಟಿಸದಂತಹ ಯಾವುದೇ ಬಯಕೆಯೂ ಉಳಿಯುವುದಿಲ್ಲ. ನಂತರ ಅವನೊಂದಿಗೆ (ಅಲ್ಲಾಹು) ಕೇಳುತ್ತಾನೆ: ನೀನು (ಎಲ್ಲವನ್ನೂ) ಬಯಸಿದೆಯಾ? ಅವನು ಹೇಳುತ್ತಾನೆ: ಹೌದು. ಆಗ ಅವನೊಂದಿಗೆ (ಅಲ್ಲಾಹು) ಹೇಳುತ್ತಾನೆ: ಹಾಗಾದರೆ, ನೀನು ಬಯಸಿದ್ದೆಲ್ಲವೂ ನಿನಗೆ ಖಂಡಿತ ಸಿಗುತ್ತದೆ, ಮತ್ತು ಅದರೊಂದಿಗೆ ಅದರಷ್ಟೇ (ಹೆಚ್ಚಿಗೆ ಸಿಗುತ್ತದೆ).فوائد الحديث
ಸ್ವರ್ಗವಾಸಿಗಳ ಸ್ಥಾನಮಾನಗಳಲ್ಲಿ (ದರ್ಜೆಗಳಲ್ಲಿ) ವ್ಯತ್ಯಾಸವಿರುತ್ತದೆ.
ಅಲ್ಲಾಹುವಿನ ಮಹಾನ್ ಔದಾರ್ಯವನ್ನು ವಿವರಿಸಲಾಗಿದೆ.
ಸ್ವರ್ಗದ ಅನುಗ್ರಹಗಳು ಯಾವುದೇ ನಿರ್ದಿಷ್ಟ ವಸ್ತುವಿಗೆ ಸೀಮಿತವಾಗಿಲ್ಲ. ಬದಲಿಗೆ ಸತ್ಯವಿಶ್ವಾಸಿಯು ತಾನು ಬಯಸುವ ಮತ್ತು ತನ್ನ ಮನಸ್ಸು ಆಶಿಸುವ ಎಲ್ಲವನ್ನೂ ಅಲ್ಲಾಹುವಿನ ಕಡೆಯಿಂದ ಅನುಗ್ರಹ, ಔದಾರ್ಯ ಮತ್ತು ಕೃಪೆಯ ರೂಪದಲ್ಲಿ ಅಲ್ಲಿ ಕಂಡುಕೊಳ್ಳುತ್ತಾನೆ.
