ಯಾರು ಅಮಾನತ್ (ವಿಶ್ವಾಸ, ನಂಬಿಕೆ) ನ ಮೇಲೆ ಆಣೆ ಮಾಡುತ್ತಾರೋ ಅವರು ನಮ್ಮವರಲ್ಲ

ಯಾರು ಅಮಾನತ್ (ವಿಶ್ವಾಸ, ನಂಬಿಕೆ) ನ ಮೇಲೆ ಆಣೆ ಮಾಡುತ್ತಾರೋ ಅವರು ನಮ್ಮವರಲ್ಲ

ಬುರೈದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಅಮಾನತ್ (ವಿಶ್ವಾಸ, ನಂಬಿಕೆ) ನ ಮೇಲೆ ಆಣೆ ಮಾಡುತ್ತಾರೋ ಅವರು ನಮ್ಮವರಲ್ಲ."

[صحيح] [رواه أبو داود وأحمد]

الشرح

ಅಮಾನತ್‌ನ ಮೇಲೆ ಆಣೆ ಮಾಡುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ ಮತ್ತು ಹಾಗೆ ಮಾಡುವವರು ನಮ್ಮವರಲ್ಲ ಎಂದು ಹೇಳಿದ್ದಾರೆ.

فوائد الحديث

ಅಲ್ಲಾಹು ಅಲ್ಲದವರ ಮೇಲೆ ಆಣೆ ಮಾಡುವುದು ನಿಷಿದ್ಧವಾಗಿದೆ. ಅಮಾನತ್‌ನ ಮೇಲೆ ಆಣೆ ಮಾಡುವುದು ಇದರಲ್ಲಿ ಒಳಪಡುತ್ತದೆ. ಇದು ಸಣ್ಣ ಶಿರ್ಕ್ (ಶಿರ್ಕ್ ಅಸ್ಗರ್) ಆಗಿದೆ.

ಅಮಾನತ್ ಎಂಬ ಪದದಲ್ಲಿ ವಿಧೇಯತೆ, ಆರಾಧನೆ, ಠೇವಣಿ, ನಗದು ಮತ್ತು ಸಂರಕ್ಷಣೆಗಳು ಒಳಪಡುತ್ತವೆ.

ಆಣೆ ಮಾಡಬೇಕಾದುದು ಅಲ್ಲಾಹನ ಮೇಲೆ, ಅವನ ಹೆಸರುಗಳ ಮೇಲೆ, ಅಥವಾ ಅವನ ಗುಣಲಕ್ಷಣಗಳ ಮೇಲೆ ಮಾತ್ರವಾಗಿದೆ.

ಖತ್ತಾಬಿ ಹೇಳಿದರು: "ಅಲ್ಲಾಹು ಅಲ್ಲದವರ ಮೇಲೆ ಆಣೆ ಮಾಡುವುದನ್ನು ದ್ವೇಷಿಸಲು ಕಾರಣವೇನೆಂದರೆ, ಅಲ್ಲಾಹು ಮತ್ತು ಅವನ ಗುಣಲಕ್ಷಣಗಳ ಮೇಲೆ ಮಾತ್ರ ಆಣೆ ಮಾಡಲು ಆದೇಶಿಸಲಾಗಿದೆ. ಅಮಾನತ್ ಅವನ ಗುಣಲಕ್ಷಣಗಳಲ್ಲಿ ಒಳಪಡುವುದಿಲ್ಲ. ಬದಲಿಗೆ, ಅದು ಅವನ ಆಜ್ಞೆಗಳಲ್ಲಿ ಮತ್ತು ಅವನು ಕಡ್ಡಾಯಗೊಳಿಸಿದ ಕರ್ತವ್ಯಗಳಲ್ಲಿ ಒಂದಾಗಿದೆ. ಆದ್ದರಿಂದ, ಅಲ್ಲಾಹು, ಅವನ ಹೆಸರುಗಳು ಮತ್ತು ಅವನ ಗುಣಲಕ್ಷಣಗಳೊಂದಿಗೆ ಅಮಾನತ್ ಅನ್ನು ಸಮೀಕರಿಸುವ ಭಯವಿರುವುದರಿಂದ ಅದರ ಮೇಲೆ ಆಣೆ ಮಾಡುವುದನ್ನು ತಡೆಯಲಾಗಿದೆ."

التصنيفات

Polytheism