ಹರೆಯ ತಲುಪಿದ ಎಲ್ಲರಿಗೂ ಶುಕ್ರವಾರ ಸ್ನಾನ ಮಾಡುವುದು, ಹಲ್ಲು ಸ್ವಚ್ಛ ಮಾಡುವುದು ಮತ್ತು ಲಭ್ಯವಿದ್ದರೆ ಸುಗಂಧ ದ್ರವ್ಯವನ್ನು…

ಹರೆಯ ತಲುಪಿದ ಎಲ್ಲರಿಗೂ ಶುಕ್ರವಾರ ಸ್ನಾನ ಮಾಡುವುದು, ಹಲ್ಲು ಸ್ವಚ್ಛ ಮಾಡುವುದು ಮತ್ತು ಲಭ್ಯವಿದ್ದರೆ ಸುಗಂಧ ದ್ರವ್ಯವನ್ನು ಹಚ್ಚುವುದು ಕಡ್ಡಾಯವಾಗಿದೆ

ಅಮ್ರ್ ಬಿನ್ ಸುಲೈಮ್ ಅನ್ಸಾರಿ ರಿಂದ ವರದಿ. ಅವರು ಹೇಳಿದರು: ಅಬೂ ಸಈದ್ ಹೀಗೆ ಹೇಳಿದ್ದರು ಎಂಬುದಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಅವರು (ಅಬೂ ಸಈದ್) ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳಿದ್ದರು ಎಂಬುದಕ್ಕೆ ನಾನು ಸಾಕ್ಷಿಯಾಗಿದ್ದೇನೆ: "ಹರೆಯ ತಲುಪಿದ ಎಲ್ಲರಿಗೂ ಶುಕ್ರವಾರ ಸ್ನಾನ ಮಾಡುವುದು, ಹಲ್ಲು ಸ್ವಚ್ಛ ಮಾಡುವುದು ಮತ್ತು ಲಭ್ಯವಿದ್ದರೆ ಸುಗಂಧ ದ್ರವ್ಯವನ್ನು ಹಚ್ಚುವುದು ಕಡ್ಡಾಯವಾಗಿದೆ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಜುಮಾ ನಮಾಝ್ ಕಡ್ಡಾಯವಿರುವ, ಪುರುಷರು ಮತ್ತು ಪ್ರೌಢರಾದ ಎಲ್ಲಾ ಮುಸ್ಲಿಮರಿಗೂ ಶುಕ್ರವಾರ ಸ್ನಾನ ಮಾಡುವುದು ಕಡ್ಡಾಯದಂತೆ ಪ್ರಬಲವಾಗಿದೆ. ಅದೇ ರೀತಿ ಹಲ್ಲುಜ್ಜುವ ಕಡ್ಡಿ ಮುಂತಾದವುಗಳಿಂದ ಹಲ್ಲುಗಳನ್ನು ಸ್ವಚ್ಛ ಮಾಡುವುದು ಕೂಡ. ಅದೇ ರೀತಿ ಯಾವುದೇ ಉತ್ತಮ ಪರಿಮಳವಿರುವ ಸುಗಂಧ ದ್ರವ್ಯವನ್ನು ಹಚ್ಚುವುದು ಕೂಡ.

فوائد الحديث

ಪ್ರೌಢರಾದ ಎಲ್ಲಾ ಮುಸ್ಲಿಂ ಪುರುಷರಿಗೆ ಶುಕ್ರವಾರ ಸ್ನಾನ ಮಾಡುವುದು ಪ್ರಬಲ ಅಪೇಕ್ಷಣೀಯ ಕಾರ್ಯವಾಗಿದೆ.

ಮುಸಲ್ಮಾನನು ಬಾಯಿಯನ್ನು ಸ್ವಚ್ಛ ಮಾಡುವುದು ಮತ್ತು ದುರ್ಗಂಧವನ್ನು ನಿವಾರಿಸುವುದು ಅತ್ಯಾವಶ್ಯಕವಾಗಿದೆ.

ಶುಕ್ರವಾರವನ್ನು ಗೌರವಿಸಬೇಕು ಮತ್ತು ಅದಕ್ಕಾಗಿ ತಯಾರಿ ಮಾಡಿಕೊಳ್ಳಬೇಕು.

ಜುಮಾ ನಮಾಝಿಗಾಗಿ ಹಲ್ಲು ಸ್ವಚ್ಛ ಮಾಡುವುದನ್ನು ಪ್ರಬಲ ಅಪೇಕ್ಷಣೀಯ ಕಾರ್ಯವೆಂದು ಹೇಳಲಾಗಿದೆ.

ಅದೇ ರೀತಿ, ಜುಮಾ ನಮಾಝಿಗೆ ಹೊರಡುವ ಮೊದಲು ಯಾವುದೇ ಉತ್ತಮ ಪರಿಮಳವಿರುವ ಸುಗಂಧ ದ್ರವ್ಯವನ್ನು ಹಚ್ಚುವುದು ಕೂಡ ಅಪೇಕ್ಷಣೀಯ ಕಾರ್ಯವಾಗಿದೆ.

ಮಹಿಳೆ ನಮಾಝ್ ಅಥವಾ ಇತರ ಉದ್ದೇಶಕ್ಕಾಗಿ ಮನೆಯಿಂದ ಹೊರಟರೆ, ಸುಗಂಧ ದ್ರವ್ಯವನ್ನು ಹಚ್ಚಬಾರದು. ಏಕೆಂದರೆ ಅದು ನಿಷೇಧಿಸಲಾಗಿದೆಯೆಂದು ಪ್ರವಾದಿಚರ್ಯೆಯು ಸೂಚಿಸಿದೆ.

ಹರೆಯ ತಲುಪಿದವನು ಎಂದರೆ ಪ್ರೌಢಾವಸ್ಥೆ ತಲುಪಿದವನು. ಕೆಲವು ಲಕ್ಷಣಗಳ ಮೂಲಕ ಪ್ರೌಢಾವಸ್ಥೆಯನ್ನು ಗುರುತಿಸಬಹುದು. ಮೂರು ಲಕ್ಷಣಗಳು ಪುರುಷರಲ್ಲಿ ಮತ್ತು ಮಹಿಳೆಯರಲ್ಲಿ ಕಂಡುಬರುತ್ತವೆ. ಅವು: ಒಂದು: ಹದಿನೈದು ವರ್ಷ ಪೂರ್ತಿಯಾಗುವುದು. ಎರಡು: ಜನನಾಂಗದ ಸುತ್ತ ರೋಮ ಬೆಳೆಯುವುದು. ಮೂರು: ಸ್ವಪ್ನಸ್ಖಲನದಿಂದ ಅಥವಾ ಸ್ವಪ್ನ ಸ್ಖಲನವಾಗದಿದ್ದರೂ ಕಾಮೋದ್ರೇಕದಿಂದ ವೀರ್ಯ ಹೊರಬರುವುದು. ನಾಲ್ಕನೇ ಲಕ್ಷಣವು ಮಹಿಳೆಯರಿಗೆ ಮಾತ್ರ ಸೀಮಿತವಾಗಿರುವ ಮುಟ್ಟು. ಮಹಿಳೆಗೆ ಮುಟ್ಟು ಪ್ರಾರಂಭವಾದರೆ ಆಕೆ ಪ್ರೌಢಾವಸ್ಥೆ ತಲುಪಿದ್ದಾಳೆ.

التصنيفات

Rulings of Jumu‘ah Prayer