ಫಜ್ರ್‌ನ ಅಝಾನ್‌ನಲ್ಲಿ ಮುಅದ್ದಿನ್ (ಅಝಾನ್ ಹೇಳುವವನು) 'ಹಯ್ಯ ಅಲಲ್-ಫಲಾಹ್' ಎಂದು ಹೇಳಿದಾಗ, 'ಅಸ್ಸಲಾತು ಖೈರುನ್ ಮಿನನ್ನೌಮ್'…

ಫಜ್ರ್‌ನ ಅಝಾನ್‌ನಲ್ಲಿ ಮುಅದ್ದಿನ್ (ಅಝಾನ್ ಹೇಳುವವನು) 'ಹಯ್ಯ ಅಲಲ್-ಫಲಾಹ್' ಎಂದು ಹೇಳಿದಾಗ, 'ಅಸ್ಸಲಾತು ಖೈರುನ್ ಮಿನನ್ನೌಮ್' (ನಿದ್ರೆಗಿಂತ ನಮಾಝ್ ಉತ್ತಮವಾಗಿದೆ) ಎಂದು ಹೇಳುವುದು ಸುನ್ನತ್‌ನ ಭಾಗವಾಗಿದೆ

ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ಫಜ್ರ್‌ನ ಅಝಾನ್‌ನಲ್ಲಿ ಮುಅದ್ದಿನ್ (ಅಝಾನ್ ಹೇಳುವವನು) 'ಹಯ್ಯ ಅಲಲ್-ಫಲಾಹ್' ಎಂದು ಹೇಳಿದಾಗ, 'ಅಸ್ಸಲಾತು ಖೈರುನ್ ಮಿನನ್ನೌಮ್' (ನಿದ್ರೆಗಿಂತ ನಮಾಝ್ ಉತ್ತಮವಾಗಿದೆ) ಎಂದು ಹೇಳುವುದು ಸುನ್ನತ್‌ನ ಭಾಗವಾಗಿದೆ".

[صحيح] [رواه ابن خزيمة والدارقطني والبيهقي]

الشرح

ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಮುಅದ್ದಿನ್ ವಿಶೇಷವಾಗಿ ಫಜ್ರ್‌ನ ಅಝಾನ್‌ನಲ್ಲಿ, 'ಹಯ್ಯ ಅಲಲ್-ಫಲಾಹ್' (ಯಶಸ್ಸಿನ ಕಡೆಗೆ ಬನ್ನಿ) ಎಂದು ಹೇಳಿದ ನಂತರ, 'ಅಸ್ಸಲಾತು ಖೈರುನ್ ಮಿನನ್ನೌಮ್' (ನಮಾಝ್ ನಿದ್ರೆಗಿಂತ ಉತ್ತಮವಾಗಿದೆ) ಎಂದು ಹೇಳುವುದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸುನ್ನತ್‌ನಲ್ಲಿ ಸ್ಥಾಪಿಸಿದ ವಿಷಯಗಳಲ್ಲಿ ಒಂದಾಗಿದೆ.

فوائد الحديث

"ಸುನ್ನತ್‌ನ ಭಾಗವಾಗಿದೆ" ಎಂದರೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸುನ್ನತ್‌ನ ಭಾಗವಾಗಿದೆ. ಆದ್ದರಿಂದ, ಇದು 'ಮರ್ಫೂಅ್' ನ (ಅಂದರೆ, ಪ್ರವಾದಿಯವರಿಗೆ (ಸ) ನೇರವಾಗಿ ಸೇರಿಸಲಾದ) ನಿಯಮವನ್ನು ಹೊಂದಿದೆ.

ಫಜ್ರ್‌ನ ಅಝಾನ್‌ನಲ್ಲಿ 'ಹಯ್ಯ ಅಲಲ್-ಫಲಾಹ್' ನಂತರ: 'ಅಸ್ಸಲಾತು ಖೈರುನ್ ಮಿನನ್ನೌಮ್' ಎಂದು ಎರಡು ಬಾರಿ ಹೇಳುವುದು ಅಪೇಕ್ಷಣೀಯವಾಗಿದೆ. ಏಕೆಂದರೆ, ಫಜ್ರ್ ನಮಾಝ್ ಸಾಮಾನ್ಯವಾಗಿ ಜನರು ನಿದ್ರಿಸುವ ಸಮಯದಲ್ಲಿರುತ್ತದೆ, ಮತ್ತು ಅವರು ನಿದ್ರೆಯಿಂದ ಎದ್ದು ನಮಾಝ್‌ಗೆ ಬರುತ್ತಾರೆ. ಆದ್ದರಿಂದ, ಇತರ ನಮಾಝ್‌ಗಳಿಗಿಂತ ಭಿನ್ನವಾಗಿ ಫಜ್ರ್ ನಮಾಝ್‌ಗೆ ಇದನ್ನು ವಿಶೇಷವಾಗಿ ಸೇರಿಸಲಾಗಿದೆ.

التصنيفات

The Azan and Iqaamah