ನಿಂತು ನಮಾಝ್ ನಿರ್ವಹಿಸಿ, ಅದು ಸಾಧ್ಯವಾಗದಿದ್ದರೆ ಕುಳಿತು ನಿರ್ವಹಿಸಿ, ಅದು ಕೂಡ ಸಾಧ್ಯವಾಗದಿದ್ದರೆ ಮಲಗಿ ನಿರ್ವಹಿಸಿ

ನಿಂತು ನಮಾಝ್ ನಿರ್ವಹಿಸಿ, ಅದು ಸಾಧ್ಯವಾಗದಿದ್ದರೆ ಕುಳಿತು ನಿರ್ವಹಿಸಿ, ಅದು ಕೂಡ ಸಾಧ್ಯವಾಗದಿದ್ದರೆ ಮಲಗಿ ನಿರ್ವಹಿಸಿ

ಇಮ್ರಾನ್ ಬಿನ್ ಹುಸೈನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:ನನಗೆ ಮೂಲವ್ಯಾಧಿ ಇತ್ತು ಆದ್ದರಿಂದ ನಾನು ನಮಾಝ್ ನಿರ್ವಹಿಸುವ ಬಗ್ಗೆ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದಾಗ, ಅವರು ಹೇಳಿದರು: "ನಿಂತು ನಮಾಝ್ ನಿರ್ವಹಿಸಿ, ಅದು ಸಾಧ್ಯವಾಗದಿದ್ದರೆ ಕುಳಿತು ನಿರ್ವಹಿಸಿ, ಅದು ಕೂಡ ಸಾಧ್ಯವಾಗದಿದ್ದರೆ ಮಲಗಿ ನಿರ್ವಹಿಸಿ."

[Sahih/Authentic.] [Al-Bukhari]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ನಮಾಝನ್ನು ಮೂಲವಾಗಿ ನಿಂತುಕೊಂಡೇ ನಿರ್ವಹಿಸಬೇಕಾಗಿದೆ. ಆದರೆ ನಿಂತು ನಮಾಝ್ ನಿರ್ವಹಿಸಲು ಸಾಧ್ಯವಾಗದಿದ್ದರೆ, ಕುಳಿತು ನಿರ್ವಹಿಸಬೇಕು. ಕುಳಿತು ನಮಾಝ್ ನಿರ್ವಹಿಸಲು ಸಾಧ್ಯವಾಗದಿದ್ದರೆ ಮಲಗಿ ನಿರ್ವಹಿಸಬೇಕು.

فوائد الحديث

ಬುದ್ಧಿಯು ಸ್ತಿಮಿತದಲ್ಲಿರುವ ತನಕ ಯಾರಿಗೂ ನಮಾಝ್‌ನಲ್ಲಿ ವಿನಾಯಿತಿಯಿಲ್ಲ. ಸಾಧ್ಯವಾಗುವ ರೀತಿಯಲ್ಲಿ ನಿಂತು, ಕುಳಿತು, ಮಲಗಿ ನಮಾಝ್ ನಿರ್ವಹಿಸಬೇಕಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.

ಇಸ್ಲಾಂ ಧರ್ಮದ ಸಹಿಷ್ಣುತೆ ಮತ್ತು ಸರಳತೆಯನ್ನು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ದಾಸನಿಗೆ ತನಗೆ ಸಾಧ್ಯವಾಗುವ ರೀತಿಯಲ್ಲಿ ಆರಾಧನೆ ನಿರ್ವಹಿಸಲು ಅನುಮತಿಸಲಾಗಿದೆ.