ಪುನರುತ್ಥಾನ ದಿನದಂದು ಅಲ್ಲಾಹು ಮೊದಲಿನವರು ಮತ್ತು ನಂತರದವರನ್ನು (ಎಲ್ಲರನ್ನೂ) ಒಟ್ಟುಗೂಡಿಸಿದಾಗ, ಪ್ರತಿಯೊಬ್ಬ…

ಪುನರುತ್ಥಾನ ದಿನದಂದು ಅಲ್ಲಾಹು ಮೊದಲಿನವರು ಮತ್ತು ನಂತರದವರನ್ನು (ಎಲ್ಲರನ್ನೂ) ಒಟ್ಟುಗೂಡಿಸಿದಾಗ, ಪ್ರತಿಯೊಬ್ಬ ವಿಶ್ವಾಸದ್ರೋಹಿಗಾಗಿ ಒಂದು ಪ್ರತ್ಯೇಕ ಧ್ವಜ ಏರಿಸಲಾಗುವುದು. ಆಗ ಹೇಳಲಾಗುವುದು: 'ಇದು ಇಂಥಿಂತವನ ಮಗನ ವಿಶ್ವಾಸದ್ರೋಹ'

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಪುನರುತ್ಥಾನ ದಿನದಂದು ಅಲ್ಲಾಹು ಮೊದಲಿನವರು ಮತ್ತು ನಂತರದವರನ್ನು (ಎಲ್ಲರನ್ನೂ) ಒಟ್ಟುಗೂಡಿಸಿದಾಗ, ಪ್ರತಿಯೊಬ್ಬ ವಿಶ್ವಾಸದ್ರೋಹಿಗಾಗಿ ಒಂದು ಪ್ರತ್ಯೇಕ ಧ್ವಜ ಏರಿಸಲಾಗುವುದು. ಆಗ ಹೇಳಲಾಗುವುದು: 'ಇದು ಇಂಥಿಂತವನ ಮಗನ ವಿಶ್ವಾಸದ್ರೋಹ'."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಪುನರುತ್ಥಾನ ದಿನದಂದು ಅಲ್ಲಾಹು ಮೊದಲಿನವರು ಮತ್ತು ನಂತರದವರನ್ನು ವಿಚಾರಣೆಗಾಗಿ ಒಟ್ಟುಗೂಡಿಸಿದಾಗ, ಅಲ್ಲಾಹನೊಂದಿಗೆ ಅಥವಾ ಜನರೊಂದಿಗೆ ತಾನು ಪೂರೈಸಬೇಕಾಗಿದ್ದ ಕರಾರನ್ನು ಪೂರೈಸದ ಪ್ರತಿಯೊಬ್ಬ ವಿಶ್ವಾಸದ್ರೋಹಿಗೂ, ಅವನ ವಿಶ್ವಾಸದ್ರೋಹವನ್ನು ಬಹಿರಂಗಪಡಿಸುವ ಒಂದು ಚಿಹ್ನೆಯನ್ನು (ಧ್ವಜವನ್ನು) ಸ್ಥಾಪಿಸಲಾಗುವುದು. ಅಂದು ಅವನ ಬಗ್ಗೆ ಹೀಗೆ ಕೂಗಿ ಹೇಳಲಾಗುವುದು: ಇದು ಇಂಥವನ ಮಗ ಇಂಥವನು ಮಾಡಿದ ವಿಶ್ವಾಸದ್ರೋಹ. ಇದು ಮಹ್ಶರ್ (ಒಟ್ಟುಗೂಡುವ ಸ್ಥಳ) ನಲ್ಲಿ ಸೇರಿದ ಜನರ ಮುಂದೆ ಅವನ ಕೆಟ್ಟ ಕೃತ್ಯವನ್ನು ಪ್ರಕಟಪಡಿಸುವುದಕ್ಕಾಗಿದೆ.

فوائد الحديث

ವಿಶ್ವಾಸದ್ರೋಹವು ನಿಷಿದ್ಧವಾಗಿದೆ ಮತ್ತು ಅದು ಮಹಾಪಾಪಗಳಲ್ಲಿ ಒಂದಾಗಿದೆ. ಏಕೆಂದರೆ ಅದರ ಬಗ್ಗೆ ಈ ತೀವ್ರವಾದ ಎಚ್ಚರಿಕೆಯು ವರದಿಯಾಗಿದೆ.

ರಕ್ತ, ಗೌರವ, ರಹಸ್ಯ ಅಥವಾ ಸಂಪತ್ತಿನ ವಿಷಯದಲ್ಲಿ ಯಾರಾದರೂ ನಿಮ್ಮನ್ನು ನಂಬಿ, ನೀವು ಅವರಿಗೆ ದ್ರೋಹ ಬಗೆದು, ನಿಮ್ಮ ವಿಶ್ವಾಸಾರ್ಹತೆಯ ಬಗ್ಗೆ ಅವರಲ್ಲಿದ್ದ ಭರವಸೆಯನ್ನು ಹುಸಿಗೊಳಿಸಿದರೆ ಅದೆಲ್ಲವನ್ನೂ ಎಚ್ಚರಿಕೆ ನೀಡಲಾದ ವಿಶ್ವಾಸದ್ರೋಹದಲ್ಲಿ ಒಳಗೊಳ್ಳುತ್ತದೆ.

ಇಮಾಮ್ ಖುರ್ತುಬಿ ಹೇಳುತ್ತಾರೆ: "ಇದು ಅರಬ್ಬರು ಮಾಡುತ್ತಿದ್ದ ರೀತಿಯಲ್ಲಿಯೇ ಅವರಿಗಾಗಿರುವ ಒಂದು ಸಂಬೋಧನೆಯಾಗಿದೆ. ಏಕೆಂದರೆ ಅವರು ವಫಾದಾರಿಗಾಗಿ ಬಿಳಿ ಧ್ವಜವನ್ನು ಮತ್ತು ವಿಶ್ವಾಸದ್ರೋಹಕ್ಕಾಗಿ ಕಪ್ಪು ಧ್ವಜವನ್ನು ಎತ್ತುತ್ತಿದ್ದರು. ಇದರಿಂದ ವಿಶ್ವಾಸದ್ರೋಹಿಯನ್ನು ದೂಷಿಸಲು ಮತ್ತು ನಿಂದಿಸಲು ಸಾಧ್ಯವಾಗುತ್ತಿತ್ತು. ಆದ್ದರಿಂದ, ಹದೀಸ್‌ನ ಪ್ರಕಾರ, ವಿಶ್ವಾಸದ್ರೋಹಿಗೆ ಇದೇ ರೀತಿಯ ಘಟನೆ ಸಂಭವಿಸುತ್ತದೆ. ಇದರಿಂದ ಅವನು ಪುನರುತ್ಥಾನದಲ್ಲಿ ತನ್ನ ಈ ಗುಣದಿಂದ ಪ್ರಸಿದ್ಧನಾಗುತ್ತಾನೆ ಮತ್ತು (ಮಹ್ಶರ್‌ನ) ಜನರು ಅವನನ್ನು ದೂಷಿಸುತ್ತಾರೆ.

ಇಬ್ನ್ ಹಜರ್ ಹೇಳುತ್ತಾರೆ: "ಇದರಲ್ಲಿ, ಪುನರುತ್ಥಾನ ದಿನದಂದು ಜನರನ್ನು ಅವರ ತಂದೆಯಂದಿರ ಹೆಸರುಗಳಿಂದ ಕರೆಯಲಾಗುವುದು ಎಂಬ ಸೂಚನೆಯಿದೆ. ಏಕೆಂದರೆ ಇದರಲ್ಲಿ "ಇಂಥವನ ಮಗ ಇಂಥವನ ವಿಶ್ವಾಸದ್ರೋಹ" ಎಂದು ಹೇಳಲಾಗಿದೆ."

التصنيفات

Blameworthy Morals, Manners of Jihad