ನಾನು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಕಿರುನಾಲಗೆ ಕಾಣುವ ರೀತಿಯಲ್ಲಿ ಪೂರ್ಣವಾಗಿ…

ನಾನು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಕಿರುನಾಲಗೆ ಕಾಣುವ ರೀತಿಯಲ್ಲಿ ಪೂರ್ಣವಾಗಿ ನಗುವುದನ್ನು ನೋಡಿಲ್ಲ, ಬದಲಿಗೆ, ಅವರು ಕೇವಲ ಮಂದಹಾಸ ಬೀರುತ್ತಿದ್ದರು

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನಾನು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಕಿರುನಾಲಗೆ ಕಾಣುವ ರೀತಿಯಲ್ಲಿ ಪೂರ್ಣವಾಗಿ ನಗುವುದನ್ನು ನೋಡಿಲ್ಲ, ಬದಲಿಗೆ, ಅವರು ಕೇವಲ ಮಂದಹಾಸ ಬೀರುತ್ತಿದ್ದರು."

[صحيح] [متفق عليه]

الشرح

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಕಿರುನಾಲಗೆ ಕಾಣುವ ರೀತಿಯಲ್ಲಿ ಅತಿಯಾಗಿ ನಗುತ್ತಿರಲಿಲ್ಲ. ಕಿರುನಾಲಗೆ ಎಂದರೆ ಗಂಟಲಿನ ಮೇಲ್ಭಾಗದಲ್ಲಿ ನೇತಾಡುವ ಮಾಂಸದ ತುಂಡು. ಬದಲಿಗೆ, ಅವರು ಕೇವಲ ಮಂದಹಾಸ ಬೀರುತ್ತಿದ್ದರು."

فوائد الحديث

ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂತೋಷವಾದಾಗ, ಅಥವಾ ಅವರಿಗೆ ಒಂದು ವಿಷಯವು ಇಷ್ಟವಾದಾಗ, ಅವರ ನಗು ಕೇವಲ ಮಂದಹಾಸವಾಗಿತ್ತು.

ಇಬ್ನ್ ಹಜರ್ ಹೇಳಿದರು: "ನಾನು ಅವರನ್ನು ಪೂರ್ಣವಾಗಿ ನಗುವುದನ್ನು ನೋಡಿಲ್ಲ" ಅಂದರೆ, ಅವರು ನಗುವಿನಲ್ಲಿ ಸಂಪೂರ್ಣ ತೊಡಗಿಕೊಂಡು ಪೂರ್ಣವಾಗಿ ನಗುವುದನ್ನು ನಾನು ನೋಡಿಲ್ಲ.

ಅತಿಯಾಗಿ ನಗುವುದು ಮತ್ತು ಗಹಗಹಿಸಿ ನಗುವುದು ಸಜ್ಜನರ ಗುಣಲಕ್ಷಣಗಳಲ್ಲ.

ಅತಿಯಾದ ನಗು ಇತರರ ಮುಂದೆ ವ್ಯಕ್ತಿಯ ಘನತೆ ಮತ್ತು ಗಾಂಭೀರ್ಯವನ್ನು ಕಡಿಮೆ ಮಾಡುತ್ತದೆ.

التصنيفات

Prophet's Laughing