ದಜ್ಜಾಲ್‌ನ ಬಗ್ಗೆ ಯಾವುದೇ ಪ್ರವಾದಿಯೂ ಅವರ ಜನತೆಗೆ ತಿಳಿಸಿಕೊಡದ ವಿಷಯವನ್ನು ನಾನು ನಿಮಗೆ ತಿಳಿಸಿಕೊಡಲೇ? ನಿಶ್ಚಯವಾಗಿಯೂ ಅವನು…

ದಜ್ಜಾಲ್‌ನ ಬಗ್ಗೆ ಯಾವುದೇ ಪ್ರವಾದಿಯೂ ಅವರ ಜನತೆಗೆ ತಿಳಿಸಿಕೊಡದ ವಿಷಯವನ್ನು ನಾನು ನಿಮಗೆ ತಿಳಿಸಿಕೊಡಲೇ? ನಿಶ್ಚಯವಾಗಿಯೂ ಅವನು ಒಕ್ಕಣ್ಣನಾಗಿದ್ದಾನೆ. ಅವನು ಸ್ವರ್ಗ ಮತ್ತು ನರಕದಂತಿರುವುದನ್ನು ತನ್ನ ಜೊತೆಗೆ ತರುತ್ತಾನೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ದಜ್ಜಾಲ್‌ನ ಬಗ್ಗೆ ಯಾವುದೇ ಪ್ರವಾದಿಯೂ ಅವರ ಜನತೆಗೆ ತಿಳಿಸಿಕೊಡದ ವಿಷಯವನ್ನು ನಾನು ನಿಮಗೆ ತಿಳಿಸಿಕೊಡಲೇ? ನಿಶ್ಚಯವಾಗಿಯೂ ಅವನು ಒಕ್ಕಣ್ಣನಾಗಿದ್ದಾನೆ. ಅವನು ಸ್ವರ್ಗ ಮತ್ತು ನರಕದಂತಿರುವುದನ್ನು ತನ್ನ ಜೊತೆಗೆ ತರುತ್ತಾನೆ. ಅವನು ಸ್ವರ್ಗವೆಂದು ಹೇಳುವುದು ಅದು ವಾಸ್ತವದಲ್ಲಿ ನರಕವಾಗಿದೆ. ನೂಹ್ ತಮ್ಮ ಜನತೆಗೆ ಎಚ್ಚರಿಸಿದಂತೆ ನಾನು ಕೂಡ ಅವನ ಬಗ್ಗೆ ನಿಮಗೆ ಎಚ್ಚರಿಸುತ್ತಿದ್ದೇನೆ."

[صحيح] [متفق عليه]

الشرح

ಯಾವುದೇ ಪ್ರವಾದಿಯೂ ತಮ್ಮ ಜನತೆಗೆ ತಿಳಿಸಿಕೊಟ್ಟಿರದ ದಜ್ಜಾಲ್‌ನ ಲಕ್ಷಣಗಳು ಮತ್ತು ಚಿಹ್ನೆಗಳ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುತ್ತಿದ್ದಾರೆ. ಅವುಗಳಲ್ಲಿ ಕೆಲವು ಹೀಗಿವೆ: ಅವನು ಒಕ್ಕಣ್ಣನಾಗಿದ್ದಾನೆ. ಜನರ ದೃಷ್ಟಿಗಳಿಗೆ ಅನುಗುಣವಾಗಿ ಸ್ವರ್ಗ ಮತ್ತು ನರಕದಂತೆ ಕಾಣುವಂತದ್ದನ್ನು ಅಲ್ಲಾಹು ಅವನಿಗೆ ಕೊಟ್ಟಿದ್ದಾನೆ. ಆದರೆ, ವಾಸ್ತವದಲ್ಲಿ ಅವನು ತೋರಿಸುವ ಸ್ವರ್ಗವು ನರಕವಾಗಿದೆ ಮತ್ತು ನರಕವು ಸ್ವರ್ಗವಾಗಿದೆ. ಅವನನ್ನು ಅನುಸರಿಸುವವರನ್ನು ಅವನು ಜನರ ಕಣ್ಣಿಗೆ ಕಾಣುವ ಸ್ವರ್ಗಕ್ಕೆ ಸೇರಿಸುತ್ತಾನೆ. ಆದರೆ, ವಾಸ್ತವದಲ್ಲಿ ಅದು ಉರಿಯುವ ನರಕವಾಗಿದೆ. ಅವನನ್ನು ಅನುಸರಿಸದವರನ್ನು ಅವನು ಜನರ ಕಣ್ಣಿಗೆ ಕಾಣುವ ನರಕಕ್ಕೆ ಸೇರಿಸುತ್ತಾನೆ. ಆದರೆ, ವಾಸ್ತವದಲ್ಲಿ ಅದು ಅತ್ಯುತ್ತಮ ಸ್ವರ್ಗವಾಗಿದೆ. ನಂತರ, ನೂಹ್ ತಮ್ಮ ಜನತೆಗೆ ಎಚ್ಚರಿಸಿದಂತೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೂಡ ಅವನ ಪರೀಕ್ಷೆಗಳ ಬಗ್ಗೆ ನಮಗೆ ಎಚ್ಚರಿಸಿದರು.

فوائد الحديث

ದಜ್ಜಾಲ್‌ನ ಪರೀಕ್ಷೆಯು ಅತಿದೊಡ್ಡದಾಗಿದೆ.

ಪ್ರಾಮಾಣಿಕ ಸತ್ಯವಿಶ್ವಾಸ, ಅಲ್ಲಾಹನಲ್ಲಿ ಆಶ್ರಯ ಬೇಡುವುದು, ಕೊನೆಯ ತಶಹ್ಹುದ್‌ನಲ್ಲಿ ಅವನಿಂದ ಅಲ್ಲಾಹನಲ್ಲಿ ರಕ್ಷಣೆ ಬೇಡುವುದು ಮತ್ತು ಸೂರ ಕಹ್ಫ್‌ನ ಮೊದಲ ಹತ್ತು ಆಯತ್‌ಗಳನ್ನು ಕಂಠಪಾಠ ಮಾಡುವುದು ದಜ್ಜಾಲ್‌ನ ಪರೀಕ್ಷೆಗಳಿಂದ ಪಾರಾಗುವ ಮಾರ್ಗಗಳಾಗಿವೆ.

ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಮುದಾಯದ ಮೇಲಿದ್ದ ಅತಿಯಾದ ಆಸಕ್ತಿಯನ್ನು ತಿಳಿಸಲಾಗಿದೆ. ಏಕೆಂದರೆ, ಹಿಂದಿನ ಯಾವುದೇ ಪ್ರವಾದಿಯೂ ವಿವರಿಸದ ದಜ್ಜಾಲ್‌ನ ಲಕ್ಷಣಗಳನ್ನು ಅವರು ಮುಸ್ಲಿಮರಿಗೆ ವಿವರಿಸಿಕೊಟ್ಟಿದ್ದಾರೆ.

التصنيفات

ಅಂತ್ಯದಿನದಲ್ಲಿ ವಿಶ್ವಾಸವಿಡುವುದು, Portents of the Hour, Prophet's Mercy