ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶೌಚಾಲಯವನ್ನು ಪ್ರವೇಶಿಸುವಾಗ,ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್…

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶೌಚಾಲಯವನ್ನು ಪ್ರವೇಶಿಸುವಾಗ,ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್ ಖುಬುಸಿ ವಲ್ ಖಬಾಇಸ್ (ಓ ಅಲ್ಲಾಹ್, ಗಂಡು ಶೈತಾನರಿಂದ ಮತ್ತು ಹೆಣ್ಣು ಶೈತಾನರಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ) ಎಂದು ಹೇಳುತ್ತಿದ್ದರು

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶೌಚಾಲಯವನ್ನು ಪ್ರವೇಶಿಸುವಾಗ,ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್ ಖುಬುಸಿ ವಲ್ ಖಬಾಇಸ್ (ಓ ಅಲ್ಲಾಹ್, ಗಂಡು ಶೈತಾನರಿಂದ ಮತ್ತು ಹೆಣ್ಣು ಶೈತಾನರಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ) ಎಂದು ಹೇಳುತ್ತಿದ್ದರು."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಲ ಅಥವಾ ಮೂತ್ರ ವಿಸರ್ಜನೆ ಮಾಡುವ ಸ್ಥಳವನ್ನು ಪ್ರವೇಶಿಸುವಾಗ, ಅಲ್ಲಿರುವ ಗಂಡು ಮತ್ತು ಹೆಣ್ಣು ಶೈತಾನರ ಕೆಡುಕಿನಿಂದ ರಕ್ಷಿಸಲು ರಕ್ಷಾ ಪ್ರಾರ್ಥನೆ ನಡೆಸುತ್ತಿದ್ದರು. ಖುಬುಸ್ ಮತ್ತು ಖಬಾಇಸ್ ಎಂದರೆ ಕೆಡುಕು ಮತ್ತು ಮಾಲಿನ್ಯಗಳೆಂದೂ ಅರ್ಥ ನೀಡಲಾಗಿದೆ.

فوائد الحديث

ಶೌಚಾಲಯವನ್ನು ಪ್ರವೇಶಿಸುವಾಗ ಈ ಪ್ರಾರ್ಥನೆಯನ್ನು ಪಠಿಸುವುದು ಅಪೇಕ್ಷಣೀಯವಾಗಿದೆ.

ಎಲ್ಲಾ ಸಂದರ್ಭಗಳಲ್ಲೂ ಕೆಡುಕನ್ನು ತೊಲಗಿಸಲು ಮತ್ತು ತೊಂದರೆಗಳನ್ನು ನಿವಾರಿಸಲು ಎಲ್ಲಾ ಸೃಷ್ಟಿಗಳು ಅಲ್ಲಾಹನನ್ನು ಅವಲಂಬಿಸಿಕೊಂಡಿದ್ದಾರೆ.

التصنيفات

Toilet Manners