ಮೇಲಿನ ಕೈಯು ಕೆಳಗಿನ ಕೈಗಿಂತ ಉತ್ತಮವಾಗಿದೆ

ಮೇಲಿನ ಕೈಯು ಕೆಳಗಿನ ಕೈಗಿಂತ ಉತ್ತಮವಾಗಿದೆ

ಅಬ್ದುಲ್ಲಾ ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್ (ಪ್ರವಚನ ಪೀಠ) ನ ಮೇಲೆ ನಿಂತು, ದಾನ-ಧರ್ಮ, (ಭಿಕ್ಷೆ ಬೇಡುವುದರಿಂದ) ದೂರವಿರುವುದು, ಮತ್ತು ಬೇಡುವುದು ಮುಂತಾದವುಗಳ ಬಗ್ಗೆ ಉಲ್ಲೇಖಿಸುತ್ತಾ ಹೇಳಿದರು: "ಮೇಲಿನ ಕೈಯು ಕೆಳಗಿನ ಕೈಗಿಂತ ಉತ್ತಮವಾಗಿದೆ. ಮೇಲಿನ ಕೈ ಎಂದರೆ ಖರ್ಚು ಮಾಡುವ ಕೈ, ಮತ್ತು ಕೆಳಗಿನ ಕೈ ಎಂದರೆ ಬೇಡುವ ಕೈ".

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್‌ನ ಮೇಲೆ ಪ್ರವಚನ ನೀಡುತ್ತಿರುವಾಗ ದಾನ-ಧರ್ಮದ ಬಗ್ಗೆ ಮತ್ತು ಭಿಕ್ಷೆ ಬೇಡುವುದರಿಂದ ದೂರವಿರುವುದರ ಬಗ್ಗೆ ಉಲ್ಲೇಖಿಸಿದರು. ನಂತರ ಹೇಳಿದರು: ನೀಡುವ ಮತ್ತು ಖರ್ಚು ಮಾಡುವ ಮೇಲಿನ ಕೈಯು, ಬೇಡು ಕೆಳಗಿನ ಕೈಗಿಂತ ಉತ್ತಮವಾಗಿದೆ ಮತ್ತು ಅಲ್ಲಾಹನಿಗೆ ಹೆಚ್ಚು ಪ್ರಿಯವಾಗಿದೆ.

فوائد الحديث

ಇದರಲ್ಲಿ ಒಳಿತಿನ ಮಾರ್ಗಗಳಲ್ಲಿ ದಾನ ಮಾಡುವುದು ಮತ್ತು ಖರ್ಚು ಮಾಡುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ ಹಾಗೂ ಯಾಚಿಸುವುದನ್ನು ಖಂಡಿಸಲಾಗಿದೆ.

ಇದರಲ್ಲಿ ಬೇಡದೆ ಆತ್ಮಸಂಯಮ ಪಾಲಿಸಲು ಮತ್ತು ಜನರಲ್ಲಿ ಕೇಳದೆ ಸ್ವಾವಲಂಬಿಯಾಗಿರಲು ಪ್ರೋತ್ಸಾಹಿಸಲಾಗಿದೆ. ಹಾಗೆಯೇ, ಶ್ರೇಷ್ಠ ವಿಷಯಗಳ ಕಡೆಗೆ ಪ್ರೇರೇಪಿಸಲಾಗಿದೆ ಹಾಗೂ ಕೀಳು ವಿಷಯಗಳನ್ನು ತೊರೆಯಲು ಆದೇಶಿಸಲಾಗಿದೆ. ಅಲ್ಲಾಹು ಶ್ರೇಷ್ಠ ವಿಷಯಗಳನ್ನು ಇಷ್ಟಪಡುತ್ತಾನೆ.

ಕೈಗಳನ್ನು ಶ್ರೇಷ್ಠತೆಯಲ್ಲಿ ನಾಲ್ಕು ವಿಧಗಳಾಗಿ ವಿಂಗಡಿಸಬಹುದು. ಅವು ಈ ಕೆಳಗಿನಂತಿವೆ: ಅವುಗಳಲ್ಲಿ ಅತ್ಯುನ್ನತವಾದುದು: ನೀಡುವ ಕೈ. ನಂತರ: ಸ್ವೀಕರಿಸುವುದಿಂದ ದೂರವಿರುವ ಆತ್ಮಸಂಯಮದ ಕೈ. ನಂತರ: ಕೇಳದೆ ತೆಗೆದುಕೊಳ್ಳುವ ಕೈ. ಮತ್ತು ಅತ್ಯಂತ ಕೆಳಮಟ್ಟದ್ದು: ಬೇಡುವ ಕೈ.

التصنيفات

Voluntary Charity, Expenses