ತನ್ನ ಪರಿಪಾಲಕನನ್ನು ಸ್ಮರಿಸುವವನ ಮತ್ತು ತನ್ನ ಪರಿಪಾಲಕನನ್ನು ಸ್ಮರಿಸದವನ ಉದಾಹರಣೆಯು, ಜೀವಂತವಿರುವವನ ಮತ್ತು ಸತ್ತವನ…

ತನ್ನ ಪರಿಪಾಲಕನನ್ನು ಸ್ಮರಿಸುವವನ ಮತ್ತು ತನ್ನ ಪರಿಪಾಲಕನನ್ನು ಸ್ಮರಿಸದವನ ಉದಾಹರಣೆಯು, ಜೀವಂತವಿರುವವನ ಮತ್ತು ಸತ್ತವನ ಉದಾಹರಣೆಯಂತಿದೆ

ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ತನ್ನ ಪರಿಪಾಲಕನನ್ನು ಸ್ಮರಿಸುವವನ ಮತ್ತು ತನ್ನ ಪರಿಪಾಲಕನನ್ನು ಸ್ಮರಿಸದವನ ಉದಾಹರಣೆಯು, ಜೀವಂತವಿರುವವನ ಮತ್ತು ಸತ್ತವನ ಉದಾಹರಣೆಯಂತಿದೆ." ಮುಸ್ಲಿಂರ ವರದಿಯಲ್ಲಿ ಹೀಗಿದೆ: "ಅಲ್ಲಾಹನನ್ನು ಸ್ಮರಿಸಲ್ಪಡುವ ಮನೆಯ ಉದಾಹರಣೆ ಮತ್ತು ಅಲ್ಲಾಹನನ್ನು ಸ್ಮರಿಸಲ್ಪಡದ ಮನೆಯ ಉದಾಹರಣೆಯು, ಜೀವಂತವಿರುವವನ ಮತ್ತು ಸತ್ತವನ ಉದಾಹರಣೆಯಂತಿದೆ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಅಲ್ಲಾಹನನ್ನು ಸ್ಮರಿಸುವವನ ಮತ್ತು ಅಲ್ಲಾಹನನ್ನು ಸ್ಮರಿಸದವನ ನಡುವಿನ ವ್ಯತ್ಯಾಸವನ್ನು ವಿವರಿಸಿದ್ದಾರೆ. ಪ್ರಯೋಜನದಲ್ಲಿ ಮತ್ತು ಉತ್ತಮ ರೂಪದಲ್ಲಿ ಅದು ಜೀವಂತವಾಗಿರುವವರ ಮತ್ತು ಸತ್ತವರ ನಡುವಿನ ವ್ಯತ್ಯಾಸವನ್ನು ಸೂಚಿಸುತ್ತದೆ. ತನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಸ್ಮರಿಸುವವನ ಉದಾಹರಣೆಯು ಜೀವಂತವಾಗಿರುವವನ ಉದಾಹರಣೆಯಂತಿದೆ. ಅವನ ಬಾಹ್ಯರೂಪವು ಜೀವದ ಬೆಳಕಿನಿಂದ ಮತ್ತು ಅವನ ಅಂತರಂಗವು ಜ್ಞಾನದ ಬೆಳಕಿನಿಂದ ಅಲಂಕರಿಸಲ್ಪಟ್ಟಿದೆ ಹಾಗೂ ಅವನಲ್ಲಿ ಪ್ರಯೋಜನವಿದೆ. ಅಲ್ಲಾಹನನ್ನು ಸ್ಮರಿಸದವನ ಉದಾಹರಣೆಯು ಸತ್ತವನ ಉದಾಹರಣೆಯಂತಿದೆ. ಅವನ ಬಾಹ್ಯರೂಪವು ನಿಷ್ಪ್ರಯೋಜಕವಾಗಿದೆ ಮತ್ತು ಅವನ ಅಂತರಂಗವು ವ್ಯರ್ಥವಾಗಿದೆ ಹಾಗೂ ಅವನಲ್ಲಿ ಯಾವುದೇ ಪ್ರಯೋಜನವಿಲ್ಲ. ಅದೇ ರೀತಿ, ಮನೆಯ ನಿವಾಸಿಗಳು ಅಲ್ಲಾಹನನ್ನು ಸ್ಮರಿಸುತ್ತಿದ್ದರೆ, ಆ ಮನೆಯನ್ನು ಜೀವಂತ ಮನೆ ಎಂದು ಬಣ್ಣಿಸಲಾಗುತ್ತದೆ. ಇಲ್ಲದಿದ್ದರೆ ಅದು ಸತ್ತ ಮನೆಯಾಗಿದೆ. ಏಕೆಂದರೆ ಅದರ ನಿವಾಸಿಗಳು ಅಲ್ಲಾಹನ ಸ್ಮರಣೆಯನ್ನು ಮರೆತುಬಿಟ್ಟಿದ್ದಾರೆ. ಒಂದು ಮನೆಯನ್ನು ಜೀವಂತ ಮತ್ತು ಸತ್ತ ಮನೆ ಎಂದು ವರ್ಣಿಸಿದರೆ, ಅದರ ಅರ್ಥ ಮನೆಯ ನಿವಾಸಿಗಳಾಗಿದ್ದಾರೆ.

فوائد الحديث

ಅಲ್ಲಾಹನನ್ನು ಸ್ಮರಿಸಲು ಪ್ರೋತ್ಸಾಹಿಸಲಾಗಿದೆ ಮತ್ತು ಅವನ ಸ್ಮರಣೆಯನ್ನು ನಿರ್ಲಕ್ಷಿಸುವುದರ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

ಆತ್ಮವು ದೇಹದ ಜೀವವಾಗಿರುವಂತೆ, ದೇವ ಸ್ಮರಣೆಯು ಆತ್ಮದ ಜೀವವಾಗಿದೆ.

ವಿಷಯವನ್ನು ಮನದಟ್ಟು ಮಾಡಲು ಉದಾಹರಣೆಗಳನ್ನು ನೀಡುವುದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾದರಿಯಾಗಿದೆ.

ನವವಿ ಹೇಳಿದರು: "ಈ ಹದೀಸಿನಲ್ಲಿ ಮನೆಯಲ್ಲಿ ಅಲ್ಲಾಹನನ್ನು ಸ್ಮರಿಸಬೇಕೆಂದು ಮತ್ತು ಅದು ದೇವಸ್ಮರಣೆಯಿಲ್ಲದೆ ಖಾಲಿಯಾಗಿರಬಾರದೆಂದು ಉತ್ತೇಜಿಸಲಾಗಿದೆ."

ನವವಿ ಹೇಳಿದರು: "ಸತ್ತವರು ಸ್ವರ್ಗಕ್ಕೆ ಹೋಗುವವರಾಗಿದ್ದರೂ ಸಹ ತಮ್ಮ ದೀರ್ಘಾಯುಷ್ಯವನ್ನು ಅಲ್ಲಾಹನ ವಿಧೇಯತೆಯಲ್ಲಿ ಕಳೆಯುವವವರಿಗೆ ಶ್ರೇಷ್ಠತೆಯಿದೆಯೆಂದು ಇದರಿಂದ ತಿಳಿದುಕೊಳ್ಳಬಹುದು. ಏಕೆಂದರೆ ಜೀವಂತವಿರುವವರು ಅವರೊಂದಿಗೆ ಸೇರಿಕೊಳ್ಳುವಾಗ, ಹೆಚ್ಚು ಹೆಚ್ಚು ವಿಧೇಯತೆಯ ಕರ್ಮಗಳನ್ನು ಮಾಡಿದವರಾಗಿರುತ್ತಾರೆ."

التصنيفات

Benefits of Remembering Allah