إعدادات العرض
ಯಾರು ಅಲ್ಲಾಹನ ಮಾರ್ಗದಲ್ಲಿ ಒಂದು ದಿನ ಉಪವಾಸವನ್ನು ಆಚರಿಸುತ್ತಾನೋ, ಅಲ್ಲಾಹು ಅವನ ಮುಖವನ್ನು ನರಕದಿಂದ ಎಪ್ಪತ್ತು…
ಯಾರು ಅಲ್ಲಾಹನ ಮಾರ್ಗದಲ್ಲಿ ಒಂದು ದಿನ ಉಪವಾಸವನ್ನು ಆಚರಿಸುತ್ತಾನೋ, ಅಲ್ಲಾಹು ಅವನ ಮುಖವನ್ನು ನರಕದಿಂದ ಎಪ್ಪತ್ತು ಶರತ್ಕಾಲಗಳಷ್ಟು ದೂರ ಮಾಡುತ್ತಾನೆ
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಯಾರು ಅಲ್ಲಾಹನ ಮಾರ್ಗದಲ್ಲಿ ಒಂದು ದಿನ ಉಪವಾಸವನ್ನು ಆಚರಿಸುತ್ತಾನೋ, ಅಲ್ಲಾಹು ಅವನ ಮುಖವನ್ನು ನರಕದಿಂದ ಎಪ್ಪತ್ತು ಶರತ್ಕಾಲಗಳಷ್ಟು ದೂರ ಮಾಡುತ್ತಾನೆ."
الترجمة
العربية বাংলা Bosanski English Español فارسی Français Bahasa Indonesia Русский Tagalog اردو 中文 हिन्दी ئۇيغۇرچە Hausa Português Kurdî සිංහල Tiếng Việt Kiswahili অসমীয়া ગુજરાતી Nederlands മലയാളം Română Magyar ქართული Oromoo Mooreالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಯಾರು ಜಿಹಾದಿನಲ್ಲಿ - ಜಿಹಾದ್ ಮತ್ತು ಇತರ [ಸಂದರ್ಭಗಳಲ್ಲಿ] ಎಂದು ಕೂಡ ಹೇಳಲಾಗಿದೆ - ಅಲ್ಲಾಹನಿಂದ ಪ್ರತಿಫಲ ಮತ್ತು ಪುರಸ್ಕಾರವನ್ನು ಬಯಸುತ್ತಾ, ಅಲ್ಲಾಹನಿಗೆ ನಿಷ್ಕಳಂಕವಾಗಿ ಒಂದು ದಿನ ಉಪವಾಸವನ್ನು ಆಚರಿಸುತ್ತಾರೋ, ಖಂಡಿತವಾಗಿಯೂ ಅಲ್ಲಾಹು ತನ್ನ ಅನುಗ್ರಹದಿಂದ, ಅವನ ಮತ್ತು ನರಕಾಗ್ನಿಯ ನಡುವೆ ಎಪ್ಪತ್ತು ವರ್ಷಗಳ ಅಂತರವನ್ನು ಮಾಡುತ್ತಾನೆ.فوائد الحديث
ನವವಿ ಹೇಳಿದರು: "ಅಲ್ಲಾಹನ ಮಾರ್ಗದಲ್ಲಿ ಉಪವಾಸ ಆಚರಿಸುವುದರ ಶ್ರೇಷ್ಠತೆಯು, ಯಾರಿಗೆ ಉಪವಾಸ ಆಚರಿಸುವುದರಿಂದ ಹಾನಿಯಾಗುವುದಿಲ್ಲವೋ, ಹಕ್ಕು ನಷ್ಟವಾಗುವುದಿಲ್ಲವೋ ಮತ್ತು ಅದರಿಂದ ಅವನ ಯುದ್ಧಕ್ಕೆ ಅಥವಾ ಅವನ ಯುದ್ಧದ ಪ್ರಮುಖ ಕಾರ್ಯಗಳಿಗೆ ಅಡ್ಡಿಯಾಗುವುದಿಲ್ಲನೋ ಅವರಿಗೆ ಮಾತ್ರ ಅನ್ವಯಿಸುತ್ತದೆ.
ಐಚ್ಛಿಕ ಉಪವಾಸ ಆಚರಿಸಲು ಪ್ರೋತ್ಸಾಹ ಮತ್ತು ಒತ್ತಾಯ ಮಾಡಲಾಗಿದೆ.
ಉಪವಾಸ ಆಚರಿಸುವಾಗ ನಿಷ್ಕಳಂಕತೆ ಮತ್ತು ಅಲ್ಲಾಹನ ತೃಪ್ತಿಯನ್ನು ಬಯಸುವುದು ಕಡ್ಡಾಯವಾಗಿದೆ. ತೋರಿಕೆಗಾಗಿ, ಖ್ಯಾತಿಗಾಗಿ ಅಥವಾ ಇತರ ಉದ್ದೇಶಗಳಿಗಾಗಿ ಉಪವಾಸ ಆಚರಿಸಬಾರದು.
ಸಿಂಧಿ ಹೇಳಿದರು: "ಅಲ್ಲಾಹನ ಮಾರ್ಗದಲ್ಲಿ" ಎಂಬ ಮಾತಿನ ಉದ್ದೇಶವು ಕೇವಲ ನಿಯ್ಯತ್ತನ್ನು ಸರಿಪಡಿಸುವುದಕ್ಕಾಗಿರಬಹುದು. ಅಥವಾ ಅದರ ಉದ್ದೇಶವು ಯೋಧನಾಗಿರುವಾಗ ಉಪವಾಸ ಆಚರಿಸುವ ಬಗ್ಗೆಯಾಗಿರಬಹುದು. ಎರಡನೆಯ ಅರ್ಥವು ಹೆಚ್ಚು ಸ್ಪಷ್ಟವಾಗಿದೆ."
ಇಬ್ನ್ ಹಜರ್ ಹೇಳಿದರು: "ಎಪ್ಪತ್ತು ಶರತ್ಕಾಲಗಳು" ಎಂಬ ಮಾತಿನಲ್ಲಿರುವ ಶರತ್ಕಾಲ (ಖರೀಫ್) ಎಂದರೆ ವರ್ಷದ ಒಂದು ನಿರ್ದಿಷ್ಟ ಸಮಯವಾಗಿದೆ. ಇಲ್ಲಿ ಅದರ ಉದ್ದೇಶವು ವರ್ಷವಾಗಿದೆ. ಇಲ್ಲಿ ಬೇಸಿಗೆ, ಚಳಿ, ವಸಂತಕಾಲ ಮುಂತಾದ ಋತುಗಳನ್ನು ಹೊರತುಪಡಿಸಿ ಶರತ್ಕಾಲ (ಖರೀಫ್) ಎಂದು ನಿರ್ದಿಷ್ಟವಾಗಿ ಹೇಳಲಾಗಿರುವುದು ಏಕೆಂದರೆ, ಶರತ್ಕಾಲವು ಅತ್ಯಂತ ಫಲಭರಿತ ಋತುವಾಗಿದೆ. ಅದು ಹಣ್ಣುಗಳನ್ನು ಕೊಯ್ಲು ಮಾಡುವ ಸಮಯವಾಗಿದೆ.
التصنيفات
Voluntary Fasting