ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರೊಂದಿಗೆ ನಾನು ಒಂದು ಈದ್‌ನಲ್ಲಿ ಪಾಲ್ಗೊಂಡಿದ್ದೆ. ಅವರು ಹೇಳಿದರು:…

ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರೊಂದಿಗೆ ನಾನು ಒಂದು ಈದ್‌ನಲ್ಲಿ ಪಾಲ್ಗೊಂಡಿದ್ದೆ. ಅವರು ಹೇಳಿದರು: 'ಇವೆರಡು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉಪವಾಸ ಆಚರಿಸುವುದನ್ನು ನಿಷೇಧಿಸಿದ ದಿನಗಳಾಗಿವೆ: ನಿಮ್ಮ ಉಪವಾಸವನ್ನು ಕೊನೆಗೊಳಿಸುವ ದಿನ ಮತ್ತು ನೀವು ನಿಮ್ಮ ಬಲಿಮೃಗದಿಂದ ತಿನ್ನುವ ದಿನ

ಇಬ್ನ್ ಅಝ್‌ಹರ್‌ರ ವಿಮೋಚಿತ ಗುಲಾಮ ಅಬೂ ಉಬೈದ್ ರಿಂದ ವರದಿ. "ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರೊಂದಿಗೆ ನಾನು ಒಂದು ಈದ್‌ನಲ್ಲಿ ಪಾಲ್ಗೊಂಡಿದ್ದೆ. ಅವರು ಹೇಳಿದರು: 'ಇವೆರಡು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉಪವಾಸ ಆಚರಿಸುವುದನ್ನು ನಿಷೇಧಿಸಿದ ದಿನಗಳಾಗಿವೆ: ನಿಮ್ಮ ಉಪವಾಸವನ್ನು ಕೊನೆಗೊಳಿಸುವ ದಿನ ಮತ್ತು ನೀವು ನಿಮ್ಮ ಬಲಿಮೃಗದಿಂದ ತಿನ್ನುವ ದಿನ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈದುಲ್-ಫಿತ್ರ್ ಮತ್ತು ಈದುಲ್-ಅದ್‌ಹಾ ಹಬ್ಬದ ದಿನಗಳಲ್ಲಿ ಉಪವಾಸ ಆಚರಿಸುವುದನ್ನು ನಿಷೇಧಿಸಿದರು. ಈದುಲ್-ಫಿತ್ರ್ ಎಂದರೆ ರಮದಾನ್ ತಿಂಗಳ ಉಪವಾಸವನ್ನು ಕೊನೆಗೊಳಿಸುವ ದಿನವಾಗಿದೆ ಮತ್ತು ಈದುಲ್-ಅದ್‌ಹಾ ಎಂದರೆ ಬಲಿ ನೀಡಿದ ಮೃಗಗಳ ಮಾಂಸವನ್ನು ತಿನ್ನುವ ದಿನವಾಗಿದೆ.

فوائد الحديث

ಈದುಲ್-ಫಿತ್ರ್, ಈದುಲ್-ಅದ್‌ಹಾ ಮಾತ್ರವಲ್ಲದೆ ಅಯ್ಯಾಮು ತ್ತಶ್ರೀಕ್ ದಿನಗಳಲ್ಲಿ ಉಪವಾಸ ಆಚರಿಸುವುದು ನಿಷೇಧಿಸಲಾಗಿದೆ. ಏಕೆಂದರೆ ಅವು ಈದುಲ್-ಅದ್‌ಹಾದ ನಂತರದ ದಿನಗಳಾಗಿವೆ. ಕುರ್ಬಾನಿ ಮಾಡಲು ಮೃಗಗಳನ್ನು ಹೊಂದಿರದವರಿಗೆ ಅಯ್ಯಾಮು ತ್ತಶ್ರೀಕ್ ದಿನಗಳಲ್ಲಿ ಉಪವಾಸ ಆಚರಿಸಲು ಅನುಮತಿಸಲಾಗಿದೆ.

ಇಬ್ನ್ ಹಜರ್ ಹೇಳಿದರು: "ಹೀಗೆ ಹೇಳಲಾಗಿದೆ: ಈ ಎರಡು ದಿನಗಳನ್ನು ವಿಶೇಷವಾಗಿ ಉಲ್ಲೇಖಿಸಿರುವುದು ಈ ಎರಡು ದಿನಗಳಲ್ಲಿ ಉಪವಾಸವನ್ನು ಮುರಿಯುವ ಕಡ್ಡಾಯತೆಯ ಕಾರಣವನ್ನು ಸೂಚಿಸುವುದಕ್ಕಾಗಿದೆ. ಇದರಲ್ಲಿ ಒಂದು ಉಪವಾಸದ ದಿನಗಳನ್ನು ಇತರ ದಿನಗಳಿಂದ ಬೇರ್ಪಡಿಸುವುದು ಮತ್ತು ಆ ದಿನದಲ್ಲಿ ಉಪವಾಸ ಆಚರಿಸದಿರುವ ಮೂಲಕ ಉಪವಾಸದ ಪೂರ್ಣಗೊಳಿಸುವಿಕೆಯನ್ನು ತೋರಿಸುವುದು. ಮತ್ತೊಂದು ಕಾರಣವೆಂದರೆ, ಅಲ್ಲಾಹನಿಗೆ ಹತ್ತಿರವಾಗಲು ಉದ್ದೇಶಿಸಿ ನಿರ್ವಹಿಸಲಾದ ಕುರ್ಬಾನಿಯ ಮಾಂಸವನ್ನು ತಿನ್ನುವುದು.

ಪ್ರವಚನ ನೀಡುವವರು ತಮ್ಮ ಪ್ರವಚನದಲ್ಲಿ ಪ್ರಸಕ್ತ ಆಗುಹೋಗುಗಳಿಗೆ ಸಂಬಂಧಿಸಿದ ನಿಯಮಗಳನ್ನು ತಿಳಿಸುವುದು ಮತ್ತು ಸೂಕ್ತ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಪೇಕ್ಷಣೀಯವಾಗಿದೆ.

ಕುರ್ಬಾನಿಯ ಮಾಂಸವನ್ನು ತಿನ್ನುವುದು ಧಾರ್ಮಿಕ ನಿಯಮವಾಗಿದೆ.

التصنيفات

Fasting Prohibitions