إعدادات العرض
ನನ್ನ ಗೆಳೆಯ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನಗೆ ಮೂರು ವಿಷಯಗಳ ಉಪದೇಶ ಮಾಡಿದರು: ಪ್ರತೀ ತಿಂಗಳಲ್ಲಿ ಮೂರು ದಿನ…
ನನ್ನ ಗೆಳೆಯ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನಗೆ ಮೂರು ವಿಷಯಗಳ ಉಪದೇಶ ಮಾಡಿದರು: ಪ್ರತೀ ತಿಂಗಳಲ್ಲಿ ಮೂರು ದಿನ ಉಪವಾಸ ಆಚರಿಸುವುದು, ಎರಡು ರಕ್‌ಅತ್ ದುಹಾ ನಮಾಝ್ ನಿರ್ವಹಿಸುವುದು ಮತ್ತು ಮಲಗುವುದಕ್ಕೆ ಮೊದಲು ವಿತ್ರ್ ನಮಾಝ್ ನಿರ್ವಹಿಸುವುದು
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನನ್ನ ಗೆಳೆಯ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನಗೆ ಮೂರು ವಿಷಯಗಳ ಉಪದೇಶ ಮಾಡಿದರು: ಪ್ರತೀ ತಿಂಗಳಲ್ಲಿ ಮೂರು ದಿನ ಉಪವಾಸ ಆಚರಿಸುವುದು, ಎರಡು ರಕ್‌ಅತ್ ದುಹಾ ನಮಾಝ್ ನಿರ್ವಹಿಸುವುದು ಮತ್ತು ಮಲಗುವುದಕ್ಕೆ ಮೊದಲು ವಿತ್ರ್ ನಮಾಝ್ ನಿರ್ವಹಿಸುವುದು."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी ئۇيغۇرچە Hausa Português Kurdî සිංහල Nederlands অসমীয়া Tiếng Việt Kiswahili ગુજરાતી پښتو አማርኛ Oromoo ไทย Română മലയാളം नेपाली Malagasy Deutsch Кыргызча తెలుగు ქართული Moore Magyar Svenska Македонскиالشرح
ಅಬೂಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ತಿಳಿಸುವುದೇನೆಂದರೆ, ಅವರ ಅತ್ಯಂತ ಪ್ರೀತಿಯ ಗೆಳೆಯರಾದ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಮೂರು ವಿಷಯಗಳ ಬಗ್ಗೆ ಉಪದೇಶ ಮಾಡಿದರು. ಒಂದು: ಪ್ರತಿ ತಿಂಗಳು ಮೂರು ದಿನ ಉಪವಾಸ ಆಚರಿಸುವುದು. ಎರಡು: ಪ್ರತಿದಿನ ಎರಡು ರಕ್‌ಅತ್ ದುಹಾ ನಮಾಝ್ ನಿರ್ವಹಿಸುವುದು. ಮೂರು: ಮಲಗುವುದಕ್ಕೆ ಮೊದಲು ವಿತ್ರ್ ನಮಾಝ್ ನಿರ್ವಹಿಸುವುದು. ಇದು ರಾತ್ರಿಯ ಕೊನೆಯ ಭಾಗದಲ್ಲಿ ಏಳಲು ಸಾಧ್ಯವಾಗಲಾರದು ಎಂದು ಭಯಪಡುವವರಿಗೆ.فوائد الحديث
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಂಗಡಿಗರ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟು ಅವರಿಗೆ ಸೂಕ್ತವಾದ ರೀತಿಯಲ್ಲಿ ಉಪದೇಶ ನೀಡುತ್ತಿದ್ದರು. ಬಲಶಾಲಿಗಳಿಗೆ ಜಿಹಾದ್ ಸೂಕ್ತವಾಗಿದೆ, ಭಕ್ತರಿಗೆ ಆರಾಧನೆ ಸೂಕ್ತವಾಗಿದೆ ಮತ್ತು ವಿದ್ವಾಂಸರಿಗೆ ಜ್ಞಾನವು ಸೂಕ್ತವಾಗಿದೆ. ಹೀಗೆ...
"ಪ್ರತಿ ತಿಂಗಳು ಮೂರು ದಿನ ಉಪವಾಸ ಆಚರಿಸುವುದು" ಎಂಬುದನ್ನು ವಿವರಿಸುತ್ತಾ ಇಬ್ನ್ ಹಜರ್ ಅಸ್ಕಲಾನಿ ಹೇಳಿದರು: "ನನಗೆ ಅನಿಸುವ ಪ್ರಕಾರ ಇಲ್ಲಿ ಹೇಳಿರುವುದು ಬಿಳಿ ದಿನಗಳ ಬಗ್ಗೆಯಾಗಿರಬಹುದು. ಅಂದರೆ, ಹಿಜರಿ ತಿಂಗಳ ಹದಿಮೂರು, ಹದಿನಾಲ್ಕು ಮತ್ತು ಹದಿನೈದನೇ ದಿನಗಳ ಬಗ್ಗೆ."
ಇಬ್ನ್ ಹಜರ್ ಅಸ್ಕಲಾನಿ ಹೇಳಿದರು: "ವಿತ್ರ್ ನಮಾಝನ್ನು ಮಲಗುವುದಕ್ಕೆ ಮೊದಲು ನಿರ್ವಹಿಸುವುದು ಅಪೇಕ್ಷಣೀಯವೆಂದು ಇದರಿಂದ ತಿಳಿದುಬರುತ್ತದೆ. ಇದು ರಾತ್ರಿ ಎದ್ದೇಳುವ ಭರವಸೆಯಿಲ್ಲದವರಿಗೆ ಮಾತ್ರ."
ಈ ಮೂರು ಕಾರ್ಯಗಳು ಬಹಳ ಪ್ರಮುಖವಾಗಿವೆ. ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದನ್ನು ತಮ್ಮ ಸಂಗಡಿಗರಿಗೆ ಉಪದೇಶಿಸಿದ್ದಾರೆ.
"ಎರಡು ರಕಅತ್ ದುಹಾ ನಮಾಝ್" ಎಂಬುದನ್ನು ವಿವರಿಸುತ್ತಾ ಇಬ್ನ್ ದಕೀಕುಲ್ ಈದ್ ಹೇಳಿದರು: "ನಿರ್ವಹಿಸಬೇಕೆಂದು ಒತ್ತುಕೊಟ್ಟು ಹೇಳಲಾಗಿರುವ ಕನಿಷ್ಠ ಎರಡು ರಕಅತ್‌ಗಳ ಬಗ್ಗೆ ಅವರು ಇಲ್ಲಿ ತಿಳಿಸಿರಬಹುದು. ದುಹಾ ನಮಾಝ್ ನಿರ್ವಹಿಸುವುದು ಅಪೇಕ್ಷಣೀಯವಾಗಿದೆ ಮತ್ತು ಅದು ಕನಿಷ್ಠ ಎರಡು ರಕಅತ್ ಆಗಿದೆ ಎಂಬುದಕ್ಕೆ ಈ ಹದೀಸಿನಲ್ಲಿ ಪುರಾವೆಯಿದೆ."
ದುಹಾ ನಮಾಝ್‌ನ ಸಮಯ: ಇದರ ಸಮಯವು ಸೂರ್ಯೋದಯವಾಗಿ ಸುಮಾರು ಹದಿನೈದು ನಿಮಿಷಗಳ ನಂತರ ಆರಂಭವಾಗುತ್ತದೆ ಮತ್ತು ಝುಹರ್ ನಮಾಝ್‌ಗೆ ಸುಮಾರು ಹತ್ತು ನಿಮಿಷಗಳಿರುವಾಗ ಮುಗಿಯುತ್ತದೆ. ರಕಅತ್‌ಗಳ ಸಂಖ್ಯೆ: ಕನಿಷ್ಠ ಎರಡು ರಕಅತ್. ಗರಿಷ್ಠ ಎಷ್ಟೆಂಬ ಬಗ್ಗೆ ಭಿನ್ನಮತವಿದೆ. ಕೆಲವರು ಎಂಟು ರಕಅತ್ ಎಂದಿದ್ದಾರೆ. ಕೆಲವರು ಗರಿಷ್ಠ ಮಿತಿಯಿಲ್ಲ ಎಂದಿದ್ದಾರೆ.
ವಿತ್ರ್‌ನ ಸಮಯ: ಇಶಾ ನಮಾಝ್‌ನ ನಂತರ ಆರಂಭವಾಗಿ ಮುಂಜಾನೆಯ ಆರಂಭದವರೆಗೆ ಇರುತ್ತದೆ. ಇದು ಕನಿಷ್ಠ ಒಂದು ರಕಅತ್ ಮತ್ತು ಗರಿಷ್ಠ ಹನ್ನೊಂದು ರಕಅತ್‌ಗಳಾಗಿವೆ.
التصنيفات
Voluntary Fasting