إعدادات العرض
ನನ್ನ ಮುಂದೆ ಸ್ವರ್ಗ ಮತ್ತು ನರಕವನ್ನು ಪ್ರದರ್ಶಿಸಲಾಯಿತು. ಇಂದಿನಂತೆ ಒಳಿತು ಮತ್ತು ಕೆಡುಕನ್ನು (ಒಟ್ಟಿಗೆ) ನಾನು ಎಂದಿಗೂ…
ನನ್ನ ಮುಂದೆ ಸ್ವರ್ಗ ಮತ್ತು ನರಕವನ್ನು ಪ್ರದರ್ಶಿಸಲಾಯಿತು. ಇಂದಿನಂತೆ ಒಳಿತು ಮತ್ತು ಕೆಡುಕನ್ನು (ಒಟ್ಟಿಗೆ) ನಾನು ಎಂದಿಗೂ ನೋಡಿರಲಿಲ್ಲ. ನಾನು ತಿಳಿದಿರುವುದನ್ನು ನೀವು ತಿಳಿದಿದ್ದರೆ, ನೀವು ಖಂಡಿತವಾಗಿಯೂ ಕಡಿಮೆ ನಗುತ್ತಿದ್ದಿರಿ ಮತ್ತು ಹೆಚ್ಚು ಅಳುತ್ತಿದ್ದಿರಿ
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಾಬಿಗಳ ಕಡೆಯಿಂದ ಏನೋ ತಲುಪಿತು. ಆಗ ಅವರು ಪ್ರವಚನ ನೀಡುತ್ತಾ ಹೇಳಿದರು: "ನನ್ನ ಮುಂದೆ ಸ್ವರ್ಗ ಮತ್ತು ನರಕವನ್ನು ಪ್ರದರ್ಶಿಸಲಾಯಿತು. ಇಂದಿನಂತೆ ಒಳಿತು ಮತ್ತು ಕೆಡುಕನ್ನು (ಒಟ್ಟಿಗೆ) ನಾನು ಎಂದಿಗೂ ನೋಡಿರಲಿಲ್ಲ. ನಾನು ತಿಳಿದಿರುವುದನ್ನು ನೀವು ತಿಳಿದಿದ್ದರೆ, ನೀವು ಖಂಡಿತವಾಗಿಯೂ ಕಡಿಮೆ ನಗುತ್ತಿದ್ದಿರಿ ಮತ್ತು ಹೆಚ್ಚು ಅಳುತ್ತಿದ್ದಿರಿ". ಅವರು (ಅನಸ್) ಹೇಳುತ್ತಾರೆ: ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಚರರಿಗೆ ಅದಕ್ಕಿಂತ ಕಠಿಣವಾದ ದಿನವು ಬಂದಿರಲಿಲ್ಲ. ಅವರು (ಅನಸ್) ಹೇಳುತ್ತಾರೆ: ಅವರು (ಸಹಾಬಿಗಳು) ತಮ್ಮ ತಲೆಗಳನ್ನು ಮುಚ್ಚಿಕೊಂಡರು. ಅವರು ಬಿಕ್ಕಳಿಸಿ ಅಳುವ ಶಬ್ದ ಕೇಳಿಬರುತ್ತಿತ್ತು. ಅನಸ್ ಹೇಳುತ್ತಾರೆ: ಆಗ ಉಮರ್ ಎದ್ದು ನಿಂತು ಹೇಳಿದರು: "ನಾವು ಅಲ್ಲಾಹನನ್ನು ಪರಿಪಾಲಕನಾಗಿ, ಇಸ್ಲಾಂ ಅನ್ನು ಧರ್ಮವಾಗಿ, ಮತ್ತು ಮುಹಮ್ಮದ್ ರನ್ನು ಪ್ರವಾದಿಯಾಗಿ ತೃಪ್ತಿಪಟ್ಟಿದ್ದೇವೆ". ಅನಸ್ ಹೇಳುತ್ತಾರೆ: ಆಗ ಒಬ್ಬ ವ್ಯಕ್ತಿ ಎದ್ದು ನಿಂತು ಕೇಳಿದರು: "ನನ್ನ ತಂದೆ ಯಾರು?" ಪ್ರವಾದಿ ಹೇಳಿದರು: "ನಿನ್ನ ತಂದೆ ಇಂತಿಂತಹ ವ್ಯಕ್ತಿ". ಆಗ ಈ ವಚನವು ಅವತೀರ್ಣವಾಯಿತು: “ಓ ಸತ್ಯವಿಶ್ವಾಸಿಗಳೇ, ಕೆಲವು ವಿಷಯಗಳ ಬಗ್ಗೆ ಕೇಳಬೇಡಿ. ಅವು ನಿಮಗೆ ಬಹಿರಂಗಗೊಳಿಸಲ್ಪಟ್ಟರೆ ನಿಮಗೆ ನೋವು ಉಂಟುಮಾಡಬಹುದು.” [ಸೂರ ಅಲ್-ಮಾಇದಾ: 101].
الترجمة
العربية বাংলা Bosanski English Español Français Indonesia Русский Tagalog Türkçe اردو 中文 हिन्दी ئۇيغۇرچە Kurdî Tiếng Việt Nederlands Kiswahili অসমীয়া ગુજરાતી සිංහල Magyar ქართული Hausa Română ไทย Português मराठी ភាសាខ្មែរ دری አማርኛ Македонски తెలుగు Українська ਪੰਜਾਬੀ മലയാളം Moore پښتوالشرح
ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಸಹಚರರ ಬಗ್ಗೆ ಏನೋ ಒಂದು ವಿಷಯ ತಲುಪಿತು. ಅದೇನೆಂದರೆ, ಅವರು ಅವರಲ್ಲಿ ಅತಿಯಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆಗ ಅವರು ಕೋಪಗೊಂಡು ಪ್ರವಚನ ನೀಡುತ್ತಾ ಹೇಳಿದರು: ನನ್ನ ಮುಂದೆ ಸ್ವರ್ಗ ಮತ್ತು ನರಕವನ್ನು ಪ್ರದರ್ಶಿಸಲಾಯಿತು; ನಾನು ಇಂದು ಸ್ವರ್ಗದಲ್ಲಿ ಕಂಡಷ್ಟು ಒಳಿತನ್ನು ಎಂದಿಗೂ ನೋಡಿರಲಿಲ್ಲ, ಮತ್ತು ಇಂದು ನರಕದಲ್ಲಿ ಕಂಡಷ್ಟು ಕೆಡುಕನ್ನು ಎಂದಿಗೂ ನೋಡಿರಲಿಲ್ಲ. ಒಂದು ವೇಳೆ ನಾನು ನೋಡಿದ್ದನ್ನು ನೀವು ನೋಡಿದ್ದರೆ, ಮತ್ತು ನಾನು ತಿಳಿದಿರುವುದನ್ನು – ಹಾಗೂ ಇಂದು ಮತ್ತು ಇದಕ್ಕೆ ಮೊದಲು ನಾನು ನೋಡಿದ್ದನ್ನು – ನೀವು ತಿಳಿದಿದ್ದರೆ, ನೀವು ಖಂಡಿತವಾಗಿಯೂ ತೀವ್ರ ಕಳವಳಗೊಳ್ಳುತ್ತಿದ್ದಿರಿ. ನಿಮ್ಮ ನಗು ಕಡಿಮೆಯಾಗುತ್ತಿತ್ತು, ಮತ್ತು ನಿಮ್ಮ ಅಳು ಹೆಚ್ಚಾಗುತ್ತಿತ್ತು. ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ: ಆಗ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಚರರಿಗೆ ಅದಕ್ಕಿಂತ ಕಠಿಣವಾದ ದಿನವು ಬಂದಿರಲಿಲ್ಲ. ಅವರು ತಮ್ಮ ತಲೆಗಳನ್ನು ಮುಚ್ಚಿಕೊಂಡರು ಮತ್ತು ಅಳುವಿನ ತೀವ್ರತೆಯಿಂದ ಅವರು ಬಿಕ್ಕಳಿಸುವ ಶಬ್ದ ಕೇಳಿಬರುತ್ತಿತ್ತು. ಆಗ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಎದ್ದು ನಿಂತು ಹೇಳಿದರು: ನಾವು ಅಲ್ಲಾಹನನ್ನು ಪರಿಪಾಲಕನಾಗಿ, ಇಸ್ಲಾಂ ಅನ್ನು ಧರ್ಮವಾಗಿ, ಮತ್ತು ಮುಹಮ್ಮದ್ ರನ್ನು ಪ್ರವಾದಿಯಾಗಿ ತೃಪ್ತಿಪಟ್ಟಿದ್ದೇವೆ. ಅವರು (ಅನಸ್) ಹೇಳುತ್ತಾರೆ: ಆಗ ಒಬ್ಬ ವ್ಯಕ್ತಿ ಎದ್ದುನಿಂತು ಕೇಳಿದರು: ನನ್ನ ತಂದೆ ಯಾರು? ಅವರು (ಪ್ರವಾದಿ) ಹೇಳಿದರು: "ನಿನ್ನ ತಂದೆ ಇಂತಿಂತಹ ವ್ಯಕ್ತಿ". ಆಗ ಈ ವಚನವು ಅವತೀರ್ಣವಾಯಿತು: “ಓ ಸತ್ಯವಿಶ್ವಾಸಿಗಳೇ, ಕೆಲವು ವಿಷಯಗಳ ಬಗ್ಗೆ ಕೇಳಬೇಡಿ. ಅವು ನಿಮಗೆ ಬಹಿರಂಗಗೊಳಿಸಲ್ಪಟ್ಟರೆ ನಿಮಗೆ ನೋವು ಉಂಟುಮಾಡಬಹುದು.” [ಸೂರ ಅಲ್-ಮಾಇದಾ: 101].فوائد الحديث
ಅಲ್ಲಾಹನ ಶಿಕ್ಷೆಯನ್ನು ಹೆದರಿ ಅಳುವುದು, ಮತ್ತು ಅತಿಯಾಗಿ ನಗದಿರುವುದು ಅಪೇಕ್ಷಿತವಾಗಿದೆ. ಏಕೆಂದರೆ ಅದು (ಅತಿಯಾದ ನಗು) ನಿರ್ಲಕ್ಷ್ಯ ಮತ್ತು ಹೃದಯದ ಕಠೋರತೆಯನ್ನು ಸೂಚಿಸುತ್ತದೆ.
ಸಹಾಬಿಗಳು (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಉಪದೇಶದಿಂದ ಪ್ರಭಾವಿತರಾಗುತ್ತಿದ್ದರು, ಮತ್ತು ಸರ್ವಶಕ್ತನಾದ ಅಲ್ಲಾಹನ ಶಿಕ್ಷೆಯನ್ನು ತೀವ್ರವಾಗಿ ಭಯಪಡುತ್ತಿದ್ದರು.
ಅಳುವಾಗ ಮುಖವನ್ನು ಮುಚ್ಚಿಕೊಳ್ಳುವುದು ಅಪೇಕ್ಷಿತವಾಗಿದೆ.
ಅಲ್-ಖತ್ತಾಬೀ ಹೇಳುತ್ತಾರೆ: ಈ ಹದೀಸ್, ಯಾರು ತಮಗೆ ಅಗತ್ಯವಿಲ್ಲದ ವಿಷಯದ ಬಗ್ಗೆ ಅನಗತ್ಯವಾಗಿ ಅಥವಾ ಹಠದಿಂದ ಕೇಳುತ್ತಾರೋ ಅವರಿಗೆ ಸಂಬಂಧಿಸಿದ್ದಾಗಿದೆ. ಆದರೆ, ಯಾರು ಅನಿವಾರ್ಯತೆಯಿಂದ, ಅಂದರೆ ಒಂದು ಸಮಸ್ಯೆ ಎದುರಾಗಿ ಅದರ ಬಗ್ಗೆ ಕೇಳುತ್ತಾರೋ, ಅವರಿಗೆ ಯಾವುದೇ ಪಾಪ ಅಥವಾ ದೋಷವಿಲ್ಲ.
ಅಲ್ಲಾಹನಿಗೆ ವಿಧೇಯತೆ ತೋರುವುದರಲ್ಲಿ ಸ್ಥಿರವಾಗಿರಲು, ಅಲ್ಲಾಹನಿಗೆ ಅವಿಧೇಯತೆ ತೋರುವುದರಿಂದ ದೂರವಿರಲು, ಮತ್ತು ಅಲ್ಲಾಹನ ಎಲ್ಲೆಗಳಲ್ಲಿ ನಿಲ್ಲಲು ಪ್ರೋತ್ಸಾಹಿಸಲಾಗಿದೆ.
ಉಪದೇಶ ಮಾಡುವಾಗ ಮತ್ತು ಕಲಿಸುವಾಗ (ಸಕಾರಣವಾಗಿದ್ದರೆ) ಕೋಪಗೊಳ್ಳಲು ಅನುಮತಿಯಿದೆ.
التصنيفات
Descriptions of Paradise and Hell