ಖಂಡಿತವಾಗಿಯೂ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಾಲಿಕ (ಗೋಳಾಡುವ ಮಹಿಳೆ), ಹಾಲಿಕ (ತಲೆ…

ಖಂಡಿತವಾಗಿಯೂ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಾಲಿಕ (ಗೋಳಾಡುವ ಮಹಿಳೆ), ಹಾಲಿಕ (ತಲೆ ಬೋಳಿಸಿಕೊಳ್ಳುವ ಮಹಿಳೆ) ಮತ್ತು ಶಾಕ್ಕ (ಬಟ್ಟೆ ಹರಿದುಕೊಳ್ಳುವ ಮಹಿಳೆ) ರಿಂದ ಮುಕ್ತರಾಗಿದ್ದರು

ಅಬೂ ಬುರ್ದ ಬಿನ್ ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಅಬೂ ಮೂಸಾ ತೀವ್ರ ನೋವಿನಿಂದ ಬಳಲುತ್ತಿದ್ದರು. ಅವರ ತಲೆಯು ಅವರ ಕುಟುಂಬದ ಮಹಿಳೆಯೊಬ್ಬರ ಮಡಿಲಿನಲ್ಲಿದ್ದ ಸ್ಥಿತಿಯಲ್ಲಿ ಅವರು ಪ್ರಜ್ಞಾಹೀನರಾಗಿದ್ದರು. ಆಕೆಗೆ ಯಾವುದೇ ರೀತಿಯಲ್ಲಿ ಉತ್ತರ ನೀಡಲು ಅವರಿಗೆ ಸಾಧ್ಯವಾಗಲಿಲ್ಲ. ಪ್ರಜ್ಞೆ ಮರಳಿ ಬಂದ ನಂತರ ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಾರಿಂದ ಮುಕ್ತರಾಗಿದ್ದರೋ ಅವರಿಂದ ನಾನು ಕೂಡ ಮುಕ್ತನಾಗಿದ್ದೇನೆ. ಖಂಡಿತವಾಗಿಯೂ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಾಲಿಕ (ಗೋಳಾಡುವ ಮಹಿಳೆ), ಹಾಲಿಕ (ತಲೆ ಬೋಳಿಸಿಕೊಳ್ಳುವ ಮಹಿಳೆ) ಮತ್ತು ಶಾಕ್ಕ (ಬಟ್ಟೆ ಹರಿದುಕೊಳ್ಳುವ ಮಹಿಳೆ) ರಿಂದ ಮುಕ್ತರಾಗಿದ್ದರು."

[صحيح] [متفق عليه]

الشرح

ಅಬೂ ಬುರ್ದಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ತಿಳಿಸುವುದೇನೆಂದರೆ, ಅವರ ತಂದೆ ಅಬೂ ಮೂಸಾ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಪ್ರಜ್ಞಾಹೀನರಾದರು. ಅವರ ತಲೆಯು ಅವರ ಕುಟುಂಬದ ಮಹಿಳೆಯೊಬ್ಬರ ಮಡಿಲಿನಲ್ಲಿತ್ತು. ಆಕೆ ಗಟ್ಟಿಯಾಗಿ ಕೂಗುತ್ತಾ ಗೋಳಾಡುತ್ತಿದ್ದಳು. ಆದರೆ ಪ್ರಜ್ಞಾಹೀನರಾಗಿದ್ದರಿಂದ ಆಕೆಗೆ ಉತ್ತರ ಕೊಡಲು ಅಬೂ ಮೂಸಾರಿಗೆ ಸಾಧ್ಯವಾಗಲಿಲ್ಲ. ಪ್ರಜ್ಞೆ ಮರಳಿ ಬಂದ ನಂತರ, ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಾರಿಂದ ಮುಕ್ತರಾಗಿದ್ದರೋ ಅವರಿಂದ ನಾನು ಕೂಡ ಮುಕ್ತನಾಗಿದ್ದೇನೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಕೆಳಗಿನವರಿಂದ ಮುಕ್ತರಾಗಿದ್ದರು: ಸಾಲಿಕ: ಅಂದರೆ, ದುರಂತ ಸಂಭವಿಸುವಾಗ ಗಟ್ಟಿಯಾಗಿ ಅರಚುವ ಮಹಿಳೆ. ಹಾಲಿಕ: ಅಂದರೆ, ದುರಂತ ಸಂಭವಿಸುವಾಗ ತನ್ನ ತಲೆಗೂದಲನ್ನು ಬೋಳಿಸಿಕೊಳ್ಳುವ ಮಹಿಳೆ. ಶಾಕ್ಕ: ಅಂದರೆ, ದುರಂತ ಸಂಭವಿಸುವಾಗ ತನ್ನ ಬಟ್ಟೆಯನ್ನು ಹರಿಯುವ ಮಹಿಳೆ. ಏಕೆಂದರೆ, ಇವೆಲ್ಲವೂ ಅಜ್ಞಾನ ಯುಗದ ಆಚರಣೆಗಳಾಗಿವೆ. ಬದಲಿಗೆ, ದುರಂತ ಸಂಭವಿಸುವಾಗ ತಾಳ್ಮೆಯಿಂದಿರಲು ಮತ್ತು ಅದಕ್ಕಾಗಿ ಅಲ್ಲಾಹನಿಂದ ಪ್ರತಿಫಲವನ್ನು ಅಪೇಕ್ಷಿಸಲು ಆಜ್ಞಾಪಿಸಲಾಗಿದೆ.

فوائد الحديث

ದುರಂತಗಳು ಸಂಭವಿಸಿದಾಗ ಬಟ್ಟೆಗಳನ್ನು ಹರಿಯುವುದು, ಕೂದಲನ್ನು ಬೋಳಿಸಿಕೊಳ್ಳುವುದು ಮತ್ತು ಗಟ್ಟಿಯಾಗಿ ಅರಚುವುದು ನಿಷೇಧಿಸಲಾಗಿದೆ ಮತ್ತು ಅವು ಮಹಾಪಾಪಗಳಲ್ಲಿ ಒಳಪಡುತ್ತವೆ.

ಗೋಳಿಡದೆ ಮತ್ತು ಗಟ್ಟಿಯಾಗಿ ಅರಚದೆ ಕೇವಲ ದುಃಖ ಪ್ರಕಟಿಸುವುದು ಮತ್ತು ಅಳುವುದು ನಿಷೇಧಿಸಲಾಗಿಲ್ಲ. ಏಕೆಂದರೆ ಇದು ಅಲ್ಲಾಹನ ತೀರ್ಮಾನಕ್ಕೆ ತಾಳ್ಮೆ ತೋರುವುದನ್ನು ವಿರೋಧಿಸುವುದಿಲ್ಲ. ಬದಲಿಗೆ, ಇದು ವಾತ್ಸಲ್ಯದ ಒಂದು ರೂಪವಾಗಿದೆ.

ಅಲ್ಲಾಹು ವಿಧಿಸಿದ ಯಾತನಾಮಯ ವಿಧಿಗಳ ಬಗ್ಗೆ ಮಾತು ಅಥವಾ ಕ್ರಿಯೆಗಳ ಮೂಲಕ ಕೋಪವನ್ನು ವ್ಯಕ್ತಪಡಿಸುವುದು ನಿಷೇಧಿಸಲಾಗಿದೆ.

ದುರಂತಗಳು ಸಂಭವಿಸುವಾಗ ತಾಳ್ಮೆ ತೋರುವುದು ಕಡ್ಡಾಯವಾಗಿದೆ.

التصنيفات

Issues of Divine Decree and Fate, Death and Its Rulings