ಒಂದು ವೇಳೆ ಆದಮರ ಪುತ್ರನಿಗೆ (ಮನುಷ್ಯನಿಗೆ) ಎರಡು ಕಣಿವೆಗಳಷ್ಟು ಸಂಪತ್ತು ಇದ್ದಿದ್ದರೆ, ಅವನು ಖಂಡಿತವಾಗಿಯೂ ಮೂರನೇ ಕಣಿವೆಯನ್ನು…

ಒಂದು ವೇಳೆ ಆದಮರ ಪುತ್ರನಿಗೆ (ಮನುಷ್ಯನಿಗೆ) ಎರಡು ಕಣಿವೆಗಳಷ್ಟು ಸಂಪತ್ತು ಇದ್ದಿದ್ದರೆ, ಅವನು ಖಂಡಿತವಾಗಿಯೂ ಮೂರನೇ ಕಣಿವೆಯನ್ನು ಬಯಸುತ್ತಿದ್ದನು

ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಂದು ವೇಳೆ ಆದಮರ ಪುತ್ರನಿಗೆ (ಮನುಷ್ಯನಿಗೆ) ಎರಡು ಕಣಿವೆಗಳಷ್ಟು ಸಂಪತ್ತು ಇದ್ದಿದ್ದರೆ, ಅವನು ಖಂಡಿತವಾಗಿಯೂ ಮೂರನೇ ಕಣಿವೆಯನ್ನು ಬಯಸುತ್ತಿದ್ದನು. ಮತ್ತು ಆದಮರ ಪುತ್ರನ ಹೊಟ್ಟೆಯನ್ನು ಮಣ್ಣನ್ನು ಹೊರತುಪಡಿಸಿ ಬೇರೇನೂ ತುಂಬಿಸುವುದಿಲ್ಲ (ಅಂದರೆ, ಮರಣ ಹೊಂದುವವರೆಗೆ ಅವನ ಆಸೆ ತೀರುವುದಿಲ್ಲ). ಮತ್ತು ಯಾರು ತೌಬಾ (ಪಶ್ಚಾತ್ತಾಪ) ಮಾಡುತ್ತಾರೋ, ಅಲ್ಲಾಹು ಅವನ ತೌಬಾವನ್ನು ಸ್ವೀಕರಿಸುತ್ತಾನೆ".

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಒಂದು ವೇಳೆ ಆದಮರ ಪುತ್ರನು ಚಿನ್ನದಿಂದ ತುಂಬಿದ ಒಂದು ಕಣಿವೆಯನ್ನು ಪಡೆದರೆ, ಅವನ ಸಹಜ ಸ್ವಭಾವವಾದ ದುರಾಸೆಯಿಂದಾಗಿ, ತನಗೆ ಇನ್ನೂ ಎರಡು ಕಣಿವೆಗಳು ಇರಬೇಕೆಂದು ಅವನು ಬಯಸುತ್ತಾನೆ. ಅವನು ಮರಣ ಹೊಂದುವವರೆಗೆ ಮತ್ತು ಅವನ ಒಡಲು ಅವನ ಸಮಾಧಿಯ ಮಣ್ಣಿನಿಂದ ತುಂಬುವವರೆಗೆ ಅವನು ಈ ಪ್ರಪಂಚಕ್ಕಾಗಿ ದುರಾಸೆಯಿಂದಲೇ ಇರುತ್ತಾನೆ.

فوائد الحديث

ಸಂಪತ್ತು ಮತ್ತು ಈ ಪ್ರಪಂಚದ ಇತರ ಸುಖಭೋಗಗಳನ್ನು ಸಂಗ್ರಹಿಸಲು ಮನುಷ್ಯನಿಗಿರುವ ತೀವ್ರವಾದ ದುರಾಸೆಯನ್ನು ವಿವರಿಸಲಾಗಿದೆ.

ಇಮಾಮ್ ನವವಿ ಹೇಳುತ್ತಾರೆ: "ಇಹಲೋಕದ ಬಗ್ಗೆ ದುರಾಸೆ, ಅದನ್ನು ಅಧಿಕವಾಗಿ ಸಂಗ್ರಹಿಸುವ ಪ್ರೀತಿ ಮತ್ತು ಅದರ ಮೇಲಿನ ಹಂಬಲವನ್ನು ಇದರಲ್ಲಿ ಖಂಡಿಸಲಾಗಿದೆ."

ಯಾರು ನಿಂದನೀಯ ಗುಣಲಕ್ಷಣಗಳನ್ನು ತೊರೆದು ತೌಬಾ (ಪಶ್ಚಾತ್ತಾಪ) ಮಾಡುತ್ತಾರೋ, ಅಲ್ಲಾಹು ಅವರ ತೌಬಾವನ್ನು ಸ್ವೀಕರಿಸುತ್ತಾನೆ.

ಇಮಾಮ್ ನವವಿ ಹೇಳುತ್ತಾರೆ: "ಈ ಹದೀಸ್ ಆದಮರ ಪುತ್ರರಲ್ಲಿ ಇಹಲೋಕದ ದುರಾಸೆಯ ವಿಷಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ವಭಾವದ ಬಗ್ಗೆ ವಿವರಿಸುತ್ತದೆ. "ಮತ್ತು ಯಾರು ತೌಬಾ ಮಾಡುತ್ತಾರೋ, ಅಲ್ಲಾಹು ಅವನ ತೌಬಾವನ್ನು ಸ್ವೀಕರಿಸುತ್ತಾನೆ" ಎಂಬ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾತು ಈ ಅಭಿಪ್ರಾಯವನ್ನು ಬೆಂಬಲಿಸುತ್ತದೆ."

التصنيفات

Blameworthy Morals, Condemning Love of the World