إعدادات العرض
ಅಲ್ಲಾಹನ ಪ್ರವಾದಿಯು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಕಷ್ಟದ ಸಮಯದಲ್ಲಿ ಹೀಗೆ ಹೇಳುತ್ತಿದ್ದರು: "ಅಲ್ಲಾಹನ ಹೊರತು…
ಅಲ್ಲಾಹನ ಪ್ರವಾದಿಯು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಕಷ್ಟದ ಸಮಯದಲ್ಲಿ ಹೀಗೆ ಹೇಳುತ್ತಿದ್ದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹವಾದ ಬೇರೆ ದೇವರಿಲ್ಲ, ಅವನು ಪರಮ ಶ್ರೇಷ್ಠನು ಮತ್ತು ಸಹನಶೀಲನು. ಅಲ್ಲಾಹನ ಹೊರತು ಆರಾಧನೆಗೆ ಅರ್ಹವಾದ ಬೇರೆ ದೇವರಿಲ್ಲ, ಅವನು ಭವ್ಯ ಸಿಂಹಾಸನದ ಒಡೆಯನು. ಅಲ್ಲಾಹನ ಹೊರತು ಆರಾಧನೆಗೆ ಅರ್ಹವಾದ ಬೇರೆ ದೇವರಿಲ್ಲ, ಅವನು ಆಕಾಶಗಳ ಒಡೆಯನು, ಭೂಮಿಯ ಒಡೆಯನು ಮತ್ತು ಉದಾತ್ತ ಅರ್ಶ್ (ಸಿಂಹಾಸನ) ನ ಒಡೆಯನು
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಪ್ರವಾದಿಯು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಕಷ್ಟದ ಸಮಯದಲ್ಲಿ ಹೀಗೆ ಹೇಳುತ್ತಿದ್ದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹವಾದ ಬೇರೆ ದೇವರಿಲ್ಲ, ಅವನು ಪರಮ ಶ್ರೇಷ್ಠನು ಮತ್ತು ಸಹನಶೀಲನು. ಅಲ್ಲಾಹನ ಹೊರತು ಆರಾಧನೆಗೆ ಅರ್ಹವಾದ ಬೇರೆ ದೇವರಿಲ್ಲ, ಅವನು ಭವ್ಯ ಸಿಂಹಾಸನದ ಒಡೆಯನು. ಅಲ್ಲಾಹನ ಹೊರತು ಆರಾಧನೆಗೆ ಅರ್ಹವಾದ ಬೇರೆ ದೇವರಿಲ್ಲ, ಅವನು ಆಕಾಶಗಳ ಒಡೆಯನು, ಭೂಮಿಯ ಒಡೆಯನು ಮತ್ತು ಉದಾತ್ತ ಅರ್ಶ್ (ಸಿಂಹಾಸನ) ನ ಒಡೆಯನು."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी සිංහල Kurdî Português Kiswahili অসমীয়া Tiếng Việt ગુજરાતી Hausa Nederlands മലയാളം Română Magyar ქართული Mooreالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತೀವ್ರ ಸಂಕಟ ಮತ್ತು ದುಃಖದ ಸಮಯದಲ್ಲಿ ಹೀಗೆ ಹೇಳುತ್ತಿದ್ದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹವಾದ ಬೇರೆ ದೇವರಿಲ್ಲ." ಅಂದರೆ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ನೈಜ ದೇವರು ಯಾರೂ ಇಲ್ಲ. "ಪರಮ ಶ್ರೇಷ್ಠನು" ಅಂದರೆ ಗೌರವ ಮತ್ತು ಸ್ಥಾನದಲ್ಲಿ. ಹಾಗೆಯೇ ಅವನ ಸಾರ, ಗುಣಲಕ್ಷಣಗಳು ಮತ್ತು ಕ್ರಿಯೆಗಳಲ್ಲೂ ಅವನು ಪರಮ ಶ್ರೇಷ್ಠನಾಗಿದ್ದಾನೆ. "ಸಹನಶೀಲನು" ಅಂದರೆ ಪಾಪಿಗೆ ಶಿಕ್ಷೆ ನೀಡಲು ಆತುರಪಡದವನು. ಬದಲಿಗೆ, ಅವನು ಅದನ್ನು ವಿಳಂಬ ಮಾಡುತ್ತಾನೆ. ಕೆಲವೊಮ್ಮೆ ಶಿಕ್ಷಿಸುವ ಸಾಮರ್ಥ್ಯವಿದ್ದೂ ಸಹ ಅವನು ಆತನನ್ನು ಕ್ಷಮಿಸಬಹುದು. ಏಕೆಂದರೆ ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. "ಅಲ್ಲಾಹನ ಹೊರತು ಆರಾಧನೆಗೆ ಅರ್ಹವಾದ ಬೇರೆ ದೇವರಿಲ್ಲ, ಅವನು ಭವ್ಯ ಸಿಂಹಾಸನದ ಒಡೆಯನು." ಅಂದರೆ ಭವ್ಯ ಸಿಂಹಾಸನದ ಸೃಷ್ಟಿಕರ್ತನು. "ಅಲ್ಲಾಹನ ಹೊರತು ಆರಾಧನೆಗೆ ಅರ್ಹವಾದ ಬೇರೆ ದೇವರಿಲ್ಲ, ಅವನು ಆಕಾಶಗಳ ಮತ್ತು ಭೂಮಿಯ ಒಡೆಯನು." ಅಂದರೆ, ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತನು ಹಾಗೂ ಅವುಗಳಲ್ಲಿರುವ ಎಲ್ಲಾ ವಸ್ತುಗಳ ಮಾಲೀಕನು, ವ್ಯವಸ್ಥಾಪಕನು ಮತ್ತು ಅದರಲ್ಲಿರುವ ಎಲ್ಲವನ್ನೂ ತಾನು ಬಯಸಿದ ರೀತಿಯಲ್ಲಿ ನಿಯಂತ್ರಿಸುವವನು. "ಅವನು ಉದಾತ್ತ ಸಿಂಹಾಸನದ ಒಡೆಯನು." ಅಂದರೆ ಉದಾತ್ತ ಸಿಂಹಾಸನದ ಸೃಷ್ಟಿಕರ್ತನು.فوائد الحديث
ವಿಪತ್ತುಗಳು ಮತ್ತು ಕಷ್ಟಗಳು ಬಂದಾಗ ಪ್ರಾರ್ಥನೆಯ ಮೂಲಕ ಅಲ್ಲಾಹನ ಕಡೆಗೆ ತಿರುಗುವುದು ಕಡ್ಡಾಯವಾಗಿದೆ.
ಸಂಕಷ್ಟದ ಸಮಯದಲ್ಲಿ ಈ ಧಿಕ್ರ್ (ಅಲ್ಲಾಹನ ಸ್ಮರಣೆ) ಪಠಿಸುವುದು ಅಪೇಕ್ಷಣೀಯವಾಗಿದೆ.
ಸರ್ವಶಕ್ತನಾದ ಅಲ್ಲಾಹು ಆರೂಢನಾಗಿರುವ ಅವನ ಸಿಂಹಾಸನವು ಎಲ್ಲಾ ಸೃಷ್ಟಿಗಳ ಮೇಲ್ಭಾಗದಲ್ಲಿದೆ, ಎಲ್ಲಾ ಸೃಷ್ಟಿಗಳಿಗಿಂತಲೂ ದೊಡ್ಡದು ಮತ್ತು ಮಹತ್ವವುಳ್ಳದ್ದಾಗಿದೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ಭವ್ಯ ಮತ್ತು ಉದಾತ್ತ ಎಂದು ವರ್ಣಿಸಿದ್ದಾರೆ.
ಆಕಾಶಗಳು ಮತ್ತು ಭೂಮಿಯನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದೇಕೆಂದರೆ ಅವು ನಮಗೆ ಗೋಚರಿಸುವ ಅತಿದೊಡ್ಡ ಸೃಷ್ಟಿಗಳಾಗಿವೆ.
ತೀಬಿ ಹೇಳಿದರು: "ಸಂಕಷ್ಟವನ್ನು ನಿವಾರಿಸಲು ಸೂಕ್ತವಾಗುವಂತೆ ಅವರು ಈ ಸ್ತುತಿಯನ್ನು "ರಬ್ಬ್" ಎಂದು ಉಲ್ಲೇಖಿಸುವುದರ ಮೂಲಕ ಪ್ರಾರಂಭಿಸಿದರು. ಏಕೆಂದರೆ ಅದು ದೈವಿಕ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ. ಇದರಲ್ಲಿ "ತಹ್ಲೀಲ್" (ಲಾಇಲಾಹ ಇಲ್ಲಲ್ಲಾಹ್) ಇದೆ. ಇದು ಏಕದೇವವಿಶ್ವಾಸವನ್ನು ಒಳಗೊಂಡಿದೆ, ಮತ್ತು ಇದು ಎಲ್ಲಾ ಉನ್ನತ ಮಹಿಮೆಗಳ ಅಡಿಪಾಯವಾಗಿದೆ. ಹಾಗೆಯೇ ಇದು ಸಂಪೂರ್ಣ ಸಾಮರ್ಥ್ಯವನ್ನು ಸೂಚಿಸುವ "ಅಝಮತ್" ಮತ್ತು ಜ್ಞಾನವನ್ನು ಸೂಚಿಸುವ "ಹಿಲ್ಮ್" ಎಂಬ ಗುಣಗಳನ್ನು ಹೊಂದಿದೆ. ಏಕೆಂದರೆ ಅಜ್ಞಾನಿಯಿಂದ ವಿವೇಕ ಅಥವಾ ಉದಾರತೆಯನ್ನು ನಿರೀಕ್ಷಿಸಲಾಗುವುದಿಲ್ಲ, ಅವು ಉದಾತ್ತ ಗುಣಲಕ್ಷಣಗಳ ಮೂಲವಾಗಿದೆ."
التصنيفات
Hard Times Dhikr