ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) "ಅಲ್ಲಾಹನ ಸಹಾಯ ಮತ್ತು ವಿಜಯ ಬಂದಾಗ." [ಸೂರ ನಸ್ರ್: 1] ಎಂಬ ವಚನವು…

ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) "ಅಲ್ಲಾಹನ ಸಹಾಯ ಮತ್ತು ವಿಜಯ ಬಂದಾಗ." [ಸೂರ ನಸ್ರ್: 1] ಎಂಬ ವಚನವು ಅವತೀರ್ಣವಾದ ಬಳಿಕ ಅವರು ಯಾವುದೇ ನಮಾಝ್ ಮಾಡಿದರೂ ಅದರಲ್ಲಿ "ಸುಬ್‌ಹಾನಕ ರಬ್ಬನಾ ವಬಿಹಮ್ದಿಕ್, ಅಲ್ಲಾಹುಮ್ಮಗ್‌ಫಿರ್ ಲೀ (ನಮ್ಮ ಪರಿಪಾಲಕನೇ, ನೀನು ಪರಮ ಪವಿತ್ರನು. ಸ್ತುತಿಗಳೆಲ್ಲವೂ ನಿನಗೆ ಸಲ್ಲುತ್ತದೆ. ಓ ಅಲ್ಲಾಹ್, ನನ್ನನ್ನು ಕ್ಷಮಿಸು) ಎಂದು ಹೇಳದೇ ಇರುತ್ತಿರಲಿಲ್ಲ

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) "ಅಲ್ಲಾಹನ ಸಹಾಯ ಮತ್ತು ವಿಜಯ ಬಂದಾಗ." [ಸೂರ ನಸ್ರ್: 1] ಎಂಬ ವಚನವು ಅವತೀರ್ಣವಾದ ಬಳಿಕ ಅವರು ಯಾವುದೇ ನಮಾಝ್ ಮಾಡಿದರೂ ಅದರಲ್ಲಿ "ಸುಬ್‌ಹಾನಕ ರಬ್ಬನಾ ವಬಿಹಮ್ದಿಕ್, ಅಲ್ಲಾಹುಮ್ಮಗ್‌ಫಿರ್ ಲೀ (ನಮ್ಮ ಪರಿಪಾಲಕನೇ, ನೀನು ಪರಮ ಪವಿತ್ರನು. ಸ್ತುತಿಗಳೆಲ್ಲವೂ ನಿನಗೆ ಸಲ್ಲುತ್ತದೆ. ಓ ಅಲ್ಲಾಹ್, ನನ್ನನ್ನು ಕ್ಷಮಿಸು) ಎಂದು ಹೇಳದೇ ಇರುತ್ತಿರಲಿಲ್ಲ."

[صحيح] [متفق عليه]

الشرح

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ತಿಳಿಸುವುದೇನೆಂದರೆ, ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) "ಅಲ್ಲಾಹನ ಸಹಾಯ ಮತ್ತು ವಿಜಯ ಬಂದಾಗ." ಎಂಬ ವಚನವು ಅವತೀರ್ಣವಾದ ನಂತರ, ಅವರು ಕುರ್‌ಆನ್‌ನಲ್ಲಿರುವ ಆಜ್ಞೆಯನ್ನು ಪಾಲಿಸಿದರು ಮತ್ತು "ಆದ್ದರಿಂದ ನೀವು ನಿಮ್ಮ ಪರಿಪಾಲಕನ ಸ್ತುತಿಯೊಂದಿಗೆ ಅವನ ಪವಿತ್ರತೆಯನ್ನು ವೈಭವೀಕರಿಸಿರಿ, ಮತ್ತು ಅವನಲ್ಲಿ ಕ್ಷಮೆಯನ್ನು ಬೇಡಿರಿ." ಎಂಬ ಅಲ್ಲಾಹನ ಆಜ್ಞೆಯನ್ನು ಪಾಲಿಸಲು ತ್ವರೆ ಮಾಡಿದರು. ಆದ್ದರಿಂದ, ಅವರು ನಮಾಝ್ ಮಾಡುವಾಗ ರುಕೂ (ಬಾಗುವುದು) ಮತ್ತು ಸುಜೂದ್ (ಸಾಷ್ಟಾಂಗ ನಮಸ್ಕಾರ) ಮಾಡಿದರೆ ಅದರಲ್ಲಿ ಹೆಚ್ಚುಹೆಚ್ಚಾಗಿ ಈ ಪ್ರಾರ್ಥನೆಯನ್ನು ಹೇಳುತ್ತಿದ್ದರು: "ಸುಬ್‌ಹಾನಕ" (ನೀನು ಪರಮ ಪವಿತ್ರನು). ಅಂದರೆ ನೀನು ಎಲ್ಲಾ ನ್ಯೂನತೆಗಳಿಂದ ಮತ್ತು ನಿನಗೆ ಹೊಂದಿಕೊಳ್ಳದ ಎಲ್ಲಾ ಕೊರತೆಗಳಿಂದ ಮುಕ್ತನಾಗಿರುವೆ. "ಅಲ್ಲಾಹುಮ್ಮ ರಬ್ಬನಾ ವಬಿಹಮ್ದಿಕ" (ಓ ಅಲ್ಲಾಹ್ ನಮ್ಮ ಪರಿಪಾಲಕನೇ, ಸ್ತುತಿಗಳೆಲ್ಲವೂ ನಿನಗೆ ಸಲ್ಲುತ್ತದೆ). ಅಂದರೆ ನಿನ್ನ ಸಾರ, ಗುಣಲಕ್ಷಣಗಳು ಮತ್ತು ಕ್ರಿಯೆಗಳು ಸಂಪೂರ್ಣವಾಗಿರುವುದರಿಂದ ಸ್ತುತಿಗಳೆಲ್ಲವೂ ನಿನಗೆ ಸಲ್ಲುತ್ತದೆ. "ಅಲ್ಲಾಹುಮ್ಮಗ್‌ಫಿರ್ ಲೀ" (ಓ ಅಲ್ಲಾಹ್, ನನ್ನನ್ನು ಕ್ಷಮಿಸು). ಅಂದರೆ ನನ್ನ ಪಾಪವನ್ನು ಅಳಿಸಿ ಮತ್ತು ಅವುಗಳನ್ನು ಕಡೆಗಣಿಸು.

فوائد الحديث

ರುಕೂ ಮತ್ತು ಸುಜೂದ್‌ನಲ್ಲಿ ಈ ಪ್ರಾರ್ಥನೆಯನ್ನು ಹೆಚ್ಚಿಸುವುದು ಅಪೇಕ್ಷಣೀಯವಾಗಿದೆ.

ಜೀವನದ ಕೊನೆಯ ಕಾಲದಲ್ಲಿ ಕ್ಷಮೆಯಾಚನೆ ಮಾಡುವುದರಲ್ಲಿರುವ ಒಂದು ಸೂಚನೆಯೇನೆಂದರೆ, ಅದೇ ರೀತಿ ಆರಾಧನಾ ಕರ್ಮಗಳನ್ನು - ವಿಶೇಷವಾಗಿ ನಮಾಝನ್ನು - ಅವುಗಳಲ್ಲಿ ಸಂಭವಿಸಬಹುದಾದ ನ್ಯೂನತೆಗಳನ್ನು ಸರಿಪಡಿಸಲು ಕ್ಷಮೆಯಾಚನೆಯ ಮೂಲಕ ಮುಕ್ತಾಯಗೊಳಿಸಬೇಕೆಂದಾಗಿದೆ.

ಪ್ರಾರ್ಥನೆಗಳ ಸ್ವೀಕಾರಕ್ಕಾಗಿ ಅಲ್ಲಾಹನ ಕಡೆಗೆ ಮಧ್ಯವರ್ತಿಯಾಗಿ ಮಾಡಬಹುದಾದ ಅತ್ಯುತ್ತಮ ವಸ್ತುವೆಂದರೆ, ಅವನ ಸ್ತುತಿಗಳನ್ನು ಮತ್ತು ಮಹಿಮೆಗಳನ್ನು ಹೇಳುವುದು ಹಾಗೂ ಅವನನ್ನು ಎಲ್ಲಾ ರೀತಿಯ ಕುಂದುಕೊರತೆಗಳು ಮತ್ತು ನ್ಯೂನತೆಗಳಿಂದ ಮುಕ್ತನೆಂದು ಘೋಷಿಸುವುದು.

ಕ್ಷಮೆಯಾಚನೆಯನ್ನು ಮತ್ತು ಎಲ್ಲಾ ಸಮಯಗಳಲ್ಲೂ ಕ್ಷಮೆಯಾಚಿಸುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದಾಸ್ಯತ್ವದ ಸಂಪೂರ್ಣತೆ ಮತ್ತು ಅಲ್ಲಾಹನ ಆಜ್ಞೆಗಳನ್ನು ಪಾಲಿಸಲು ಅವರು ತೋರುತ್ತಿದ್ದ ಮುತುವರ್ಜಿಯನ್ನು ತಿಳಿಸಲಾಗಿದೆ.

التصنيفات

Dhikr (Invocation) during Prayer