إعدادات العرض
ಮುಸಲ್ಮಾನನನ್ನು ನಿಂದಿಸುವುದು ಅವಿಧೇಯತೆಯಾಗಿದೆ ಮತ್ತು ಅವನೊಡನೆ ಹೋರಾಡುವುದು ಸತ್ಯನಿಷೇಧವಾಗಿದೆ
ಮುಸಲ್ಮಾನನನ್ನು ನಿಂದಿಸುವುದು ಅವಿಧೇಯತೆಯಾಗಿದೆ ಮತ್ತು ಅವನೊಡನೆ ಹೋರಾಡುವುದು ಸತ್ಯನಿಷೇಧವಾಗಿದೆ
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮುಸಲ್ಮಾನನನ್ನು ನಿಂದಿಸುವುದು ಅವಿಧೇಯತೆಯಾಗಿದೆ ಮತ್ತು ಅವನೊಡನೆ ಹೋರಾಡುವುದು ಸತ್ಯನಿಷೇಧವಾಗಿದೆ."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी Hausa Kurdî Português සිංහල Nederlands অসমীয়া Tiếng Việt Kiswahili ગુજરાતી پښتو Oromoo አማርኛ ไทย Română മലയാളം Deutsch नेपाली Кыргызча ქართული Moore Magyar తెలుగు Svenska Македонскиالشرح
ಮುಸಲ್ಮಾನನನ್ನು ನಿಂದಿಸುವುದನ್ನು ಮತ್ತು ಹಳಿಯುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ. ಅದು ಫುಸೂಕ್ ಆಗಿದೆ. ಅಂದರೆ, ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಸರಿಸುವುದರಿಂದ ಹೊರಹೋಗುವುದು. ಅದೇ ರೀತಿ, ಒಬ್ಬ ಮುಸಲ್ಮಾನನು ತನ್ನ ಮುಸಲ್ಮಾನ ಸಹೋದರನನ್ನು ಕೊಲೆ ಮಾಡುವುದು ಸತ್ಯನಿಷೇಧದ ಕೃತ್ಯಗಳಲ್ಲಿ ಒಳಪಡುತ್ತದೆ. ಆದರೆ ಅದು ಸಣ್ಣ ಸತ್ಯನಿಷೇಧವಾಗಿದೆ.فوائد الحديث
ಮುಸಲ್ಮಾನನ ಘನತೆ ಮತ್ತು ಜೀವಕ್ಕೆ ಗೌರವ ನೀಡುವುದು ಕಡ್ಡಾಯವಾಗಿದೆ.
ಮುಸಲ್ಮಾನನನ್ನು ಅನ್ಯಾಯವಾಗಿ ನಿಂದಿಸುವವನ ಸ್ಥಿತಿಯು ಭಯಾನಕವಾಗಿದೆ. ಅನ್ಯಾಯವಾಗಿ ನಿಂದಿಸುವವನು ಫಾಸಿಕ್ (ಅವಿಧೇಯ) ಆಗುತ್ತಾನೆ.
ಮುಸಲ್ಮಾನನನ್ನು ನಿಂದಿಸುವುದು ಮತ್ತು ಅವನೊಡನೆ ಹೋರಾಡುವುದು ಸತ್ಯವಿಶ್ವಾಸವನ್ನು ದುರ್ಬಲಗೊಳಿಸುತ್ತದೆ ಮತ್ತು ಕುಂಠಿತಗೊಳಿಸುತ್ತದೆ.
ಕೆಲವು ಕರ್ಮಗಳು ಇಸ್ಲಾಂ ಧರ್ಮದಿಂದ ಹೊರಹೋಗುವಂತಹ ರೀತಿಯಲ್ಲಿರುವ ದೊಡ್ಡ ಸತ್ಯನಿಷೇಧಕ್ಕೆ (ಕುಫ್ರ್ ಅಕ್ಬರ್) ತಲುಪದಿದ್ದರೂ ಅವುಗಳನ್ನು ಸತ್ಯನಿಷೇಧ (ಕುಫ್ರ್) ಎಂದು ಕರೆಯಲಾಗಿದೆ.
ಇಲ್ಲಿ ಹೇಳಿರುವ ಸತ್ಯನಿಷೇಧ (ಕುಫ್ರ್) ಸಣ್ಣ ಸತ್ಯನಿಷೇಧವಾಗಿದೆ. ಅಹ್ಲುಸ್ಸುನ್ನದ ವಿದ್ವಾಂಸರ ಒಮ್ಮತಾಭಿಪ್ರಾಯದ ಪ್ರಕಾರ ಇದನ್ನು ಮಾಡಿದವರು ಇಸ್ಲಾಂ ಧರ್ಮದಿಂದ ಹೊರಹೋಗುವುದಿಲ್ಲ. ಏಕೆಂದರೆ, ಸತ್ಯವಿಶ್ವಾಸಿಗಳು ಪರಸ್ಪರ ಹೋರಾಡಿದರೂ, ಜಗಳವಾಡಿದರೂ ಅಲ್ಲಾಹು ಅವರನ್ನು ಸತ್ಯವಿಶ್ವಾಸಿಗಳೆಂದು ಕರೆದಿದ್ದಾನೆ. ಅಲ್ಲಾಹು ಹೇಳುತ್ತಾನೆ: "ಸತ್ಯವಿಶ್ವಾಸಿಗಳಲ್ಲಿ ಸೇರಿದ ಎರಡು ಬಣಗಳು ಪರಸ್ಪರ ಹೋರಾಡಿದರೆ ಅವರ ಮಧ್ಯೆ ಸಂಧಾನ ಮಾಡಿರಿ." ಎಂಬಲ್ಲಿಂದ "ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ಸಹೋದರರಾಗಿದ್ದಾರೆ." ಎಂಬಲ್ಲಿಯ ತನಕ.