إعدادات العرض
ಶುಕ್ರವಾರ ದೊಡ್ಡ ಅಶುದ್ಧಿ (ಜನಾಬತ್) ಗಾಗಿರುವ ಸ್ನಾನವನ್ನು ಮಾಡಿ ನಂತರ (ಮಸೀದಿಗೆ) ಹೊರಡುವವನು, ಒಂಟೆಯನ್ನು ಬಲಿ ನೀಡಿದವನಿಗೆ…
ಶುಕ್ರವಾರ ದೊಡ್ಡ ಅಶುದ್ಧಿ (ಜನಾಬತ್) ಗಾಗಿರುವ ಸ್ನಾನವನ್ನು ಮಾಡಿ ನಂತರ (ಮಸೀದಿಗೆ) ಹೊರಡುವವನು, ಒಂಟೆಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಶುಕ್ರವಾರ ದೊಡ್ಡ ಅಶುದ್ಧಿ (ಜನಾಬತ್) ಗಾಗಿರುವ ಸ್ನಾನವನ್ನು ಮಾಡಿ ನಂತರ (ಮಸೀದಿಗೆ) ಹೊರಡುವವನು, ಒಂಟೆಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ಎರಡನೇ ತಾಸಿನಲ್ಲಿ ಹೊರಡುವವನು ಹಸುವನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ಮೂರನೇ ತಾಸಿನಲ್ಲಿ ಹೊರಡುವವನು ಕೊಂಬುಗಳಿರುವ ಟಗರನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ನಾಲ್ಕನೇ ತಾಸಿನಲ್ಲಿ ಹೊರಡುವವನು ಕೋಳಿಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ಐದನೇ ತಾಸಿನಲ್ಲಿ ಹೊರಡುವವನು ಮೊಟ್ಟೆಯನ್ನು ಬಲಿ ನೀಡಿದವನಿಗೆ ಸಮಾನನಾಗುತ್ತಾನೆ. ನಂತರ, ಇಮಾಮರು ಹೊರ ಬಂದರೆ ದೇವದೂತರುಗಳು ಪ್ರವಚನವನ್ನು ಕೇಳಲು ಹಾಜರಾಗುತ್ತಾರೆ."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी ئۇيغۇرچە Hausa Português Kurdî සිංහල አማርኛ অসমীয়া Kiswahili Tiếng Việt ગુજરાતી Nederlands پښتو नेपाली മലയാളം Svenska ไทย Кыргызча Română Malagasy Српски తెలుగు ქართული Mooreالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಜುಮಾ ನಮಾಝಿಗಾಗಿ ಬೇಗನೇ ಹೊರಡುವುದರ ಶ್ರೇಷ್ಠತೆಯನ್ನು ತಿಳಿಸುತ್ತಿದ್ದಾರೆ. ಈ ತ್ವರೆಯು ಸೂರ್ಯೋದಯದಿಂದ ತೊಡಗಿ ಇಮಾಮರು ಪ್ರವಚನ ನೀಡುವುದಕ್ಕಾಗಿ ಹೊರಬರುವ ತನಕ ಇದೆ. ಇದು ಐದು ತಾಸುಗಳನ್ನು ಹೊಂದಿದ್ದು, ಸೂರ್ಯೋದಯ ಮತ್ತು ಇಮಾಮರು ಪ್ರವಚನ ನೀಡುವುದಕ್ಕಾಗಿ ಪ್ರವಚನ ಪೀಠವನ್ನು ಏರುವುದರ ನಡುವಿನ ಸಮಯಕ್ಕೆ ಅನುಗುಣವಾಗಿ ಐದು ಭಾಗಗಳಾಗಿ ವಿಂಗಡಿಸಲಾಗಿದೆ. ಒಂದು: ಒಬ್ಬ ವ್ಯಕ್ತಿ ದೊಡ್ಡ ಅಶುದ್ಧಿಗಾಗಿ ಸ್ನಾನ ಮಾಡುವಂತೆ ಸ್ನಾನ ಮಾಡಿ, ನಂತರ ಮೊದಲ ತಾಸಿನಲ್ಲಿ ಜುಮಾ ಮಸೀದಿಗೆ ಹೊರಟರೆ, ಅವನು ಒಂಟೆಯನ್ನು ದಾನ ಮಾಡಿದವನಿಗೆ ಸಮಾನನಾಗುತ್ತಾನೆ. ಎರಡು: ಎರಡನೇ ತಾಸಿನಲ್ಲಿ ಹೊರಡುವವನು ಹಸುವನ್ನು ದಾನ ಮಾಡಿದವನಿಗೆ ಸಮಾನನಾಗುತ್ತಾನೆ. ಮೂರು: ಮೂರನೇ ತಾಸಿನಲ್ಲಿ ಹೊರಡುವವನು ಕೊಂಬುಗಳಿರುವ ಟಗರನ್ನು ದಾನ ಮಾಡಿದವನಿಗೆ ಸಮಾನನಾಗುತ್ತಾನೆ. ನಾಲ್ಕು: ನಾಲ್ಕನೇ ತಾಸಿನಲ್ಲಿ ಹೊರಡುವವನು ಕೋಳಿಯನ್ನು ದಾನ ಮಾಡಿದವನಿಗೆ ಸಮಾನನಾಗುತ್ತಾನೆ. ಐದು: ಐದನೇ ತಾಸಿನಲ್ಲಿ ಹೊರಡುವವನು ಮೊಟ್ಟೆಯನ್ನು ದಾನ ಮಾಡಿದವನಿಗೆ ಸಮಾನನಾಗುತ್ತಾನೆ. ಇಮಾಮರು ಪ್ರವಚನ ನೀಡಲು ಹೊರಟು ಬಂದರೆ, ಮಸೀದಿಯ ಬಾಗಿಲುಗಳಲ್ಲಿ ಕುಳಿತು ಜನರು ಮಸೀದಿಗೆ ಬರುವುದನ್ನು ಅವರ ಸಮಯಗಳಿಗೆ ಅನುಗುಣವಾಗಿ ದಾಖಲಿಸುತ್ತಿದ್ದ ದೇವದೂತರುಗಳು ಅದನ್ನು ನಿಲ್ಲಿಸಿ ಉಪದೇಶ ಮತ್ತು ಪ್ರವಚನವನ್ನು ಕೇಳಲು ಹಾಜರಾಗುತ್ತಾರೆ.فوائد الحديث
ಶುಕ್ರವಾರ ಸ್ನಾನ ಮಾಡುವುದನ್ನು ಪ್ರೋತ್ಸಾಹಿಸಲಾಗಿದೆ. ಅದು ನಮಾಝಿಗೆ ಹೊರಡುವ ಮೊದಲು ಆಗಿರಬೇಕು.
ದಿನದ ಪ್ರಾರಂಭದಲ್ಲೇ ಜುಮಾ ನಮಾಝ್‌ಗಾಗಿ ತ್ವರೆ ಮಾಡುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ.
ಒಳಿತಿನ ಕರ್ಮಗಳನ್ನು ಮಾಡಲು ತ್ವರೆ ಮಾಡುವುದನ್ನು ಪ್ರೋತ್ಸಾಹಿಸಲಾಗಿದೆ.
ದೇವದೂತರುಗಳು ಜುಮಾ ನಮಾಝ್‌ನಲ್ಲಿ ಪಾಲ್ಗೊಳ್ಳುತ್ತಾರೆ ಮತ್ತು ಪ್ರವಚನಕ್ಕೆ ಕಿವಿಗೊಡುತ್ತಾರೆಂದು ತಿಳಿಸಲಾಗಿದೆ.
ದೇವದೂತರುಗಳು ಮಸೀದಿಗಳ ಬಾಗಿಲುಗಳಲ್ಲಿ ನಿಂತು, ಜುಮಾ ನಮಾಝಿಗೆ ಮೊದಲು ಆಗಮಿಸುವವರನ್ನು ಮೊದಲು ಎಂಬ ರೀತಿಯಲ್ಲಿ ದಾಖಲಿಸುತ್ತಾರೆ.
ಇಬ್ನ್ ರಜಬ್ ಹೇಳಿದರು: "ಶುಕ್ರವಾರದ ಅಪೇಕ್ಷಣೀಯ ಸ್ನಾನದ ಸಮಯವು ಮುಂಜಾನೆಯ ಉದಯದೊಂದಿಗೆ ಆರಂಭವಾಗಿ ಜುಮಾ ನಮಾಝಿಗೆ ಹೊರಡುವಾಗ ಕೊನೆಗೊಳ್ಳುತ್ತದೆ ಎಂಬುದಕ್ಕೆ "ಶುಕ್ರವಾರ ಸ್ನಾನ ಮಾಡಿ, ನಂತರ ಹೊರಡುವವನು" ಎಂಬ ಮಾತು ಪುರಾವೆಯಾಗಿದೆ."