ಓ ಅಲ್ಲಾಹ್! ಇಹಲೋಕದಲ್ಲೂ, ಪರಲೋಕದಲ್ಲೂ ನಾನು ನಿನ್ನಲ್ಲಿ ಸೌಖ್ಯವನ್ನು ಬೇಡುತ್ತೇನೆ

ಓ ಅಲ್ಲಾಹ್! ಇಹಲೋಕದಲ್ಲೂ, ಪರಲೋಕದಲ್ಲೂ ನಾನು ನಿನ್ನಲ್ಲಿ ಸೌಖ್ಯವನ್ನು ಬೇಡುತ್ತೇನೆ

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬೆಳಗಾಗುವಾಗ ಮತ್ತು ಸಂಜೆಯಾಗುವಾಗ ಈ ಪ್ರಾರ್ಥನೆಗಳನ್ನು ಪಠಿಸದೆ ಬಿಟ್ಟುಬಿಡುತ್ತಿರಲಿಲ್ಲ: "ಓ ಅಲ್ಲಾಹ್! ಇಹಲೋಕದಲ್ಲೂ, ಪರಲೋಕದಲ್ಲೂ ನಾನು ನಿನ್ನಲ್ಲಿ ಸೌಖ್ಯವನ್ನು ಬೇಡುತ್ತೇನೆ. ಓ ಅಲ್ಲಾಹ್! ನನ್ನ ಧರ್ಮದಲ್ಲಿ, ಇಹಲೋಕದಲ್ಲಿ, ಕುಟುಂಬದಲ್ಲಿ ಮತ್ತು ಸಂಪತ್ತಿನಲ್ಲಿ ಕ್ಷಮೆ ಮತ್ತು ಸೌಖ್ಯವನ್ನು ಬೇಡುತ್ತೇನೆ. ಓ ಅಲ್ಲಾಹ್! ನನ್ನ ಕುಂದು-ಕೊರತೆಗಳನ್ನು ಮುಚ್ಚಿಡು ಮತ್ತು ನನ್ನ ಭಯವನ್ನು ನಿವಾರಿಸು. ಓ ಅಲ್ಲಾಹ್! ನನ್ನ ಮುಂಭಾಗದಿಂದ, ನನ್ನ ಹಿಂಭಾಗದಿಂದ, ನನ್ನ ಬಲಭಾಗದಿಂದ, ನನ್ನ ಎಡಭಾಗದಿಂದ, ನನ್ನ ಮೇಲ್ಭಾಗದಿಂದ ನನ್ನನ್ನು ರಕ್ಷಿಸು. ನನ್ನ ಕೆಳಭಾಗದಿಂದ ನನ್ನನ್ನು ಹತ್ಯೆಗೈಯಲಾಗುವುದರಿಂದ ನಾನು ನಿನ್ನ ಮಹಾತ್ಮೆಯ ಮೂಲಕ ನಿನ್ನಲ್ಲಿ ರಕ್ಷೆ ಬೇಡುತ್ತೇನೆ."

[صحيح] [رواه أبو داود والنسائي وابن ماجه وأحمد]

الشرح

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬೆಳಗಾಗುವಾಗ ಮತ್ತು ಸಂಜೆಯಾಗುವಾಗ ಈ ಪ್ರಾರ್ಥನೆಗಳನ್ನು ಪ್ರಾರ್ಥಿಸದೆ ಬಿಟ್ಟುಬಿಡುತ್ತಿರಲಿಲ್ಲ: "ಓ ಅಲ್ಲಾಹ್! ನಾನು ನಿನ್ನಲ್ಲಿ ಸೌಖ್ಯವನ್ನು ಬೇಡುತ್ತೇನೆ" ಅಂದರೆ, ರೋಗಗಳಿಂದ, ದುರಂತಗಳಿಂದ, ಭೌತಿಕ ವಿಪತ್ತುಗಳಿಂದ, ಮೋಹಗಳಿಂದ ಮತ್ತು ಧಾರ್ಮಿಕ ಪರೀಕ್ಷೆಗಳಿಂದ ರಕ್ಷೆ ಬೇಡುತ್ತೇನೆ. "ಇಹಲೋಕದಲ್ಲೂ, ಪರಲೋಕದಲ್ಲೂ " ಅಂದರೆ ಈ ಲೋಕದಲ್ಲಿ ಮತ್ತು ನಂತರದ ಲೋಕದಲ್ಲಿ. "ಓ ಅಲ್ಲಾಹ್! ನಾನು ನಿನ್ನಲ್ಲಿ ಕ್ಷಮೆಯನ್ನು ಬೇಡುತ್ತೇನೆ" ಅಂದರೆ ಪಾಪಗಳನ್ನು ಅಳಿಸುವಂತೆ ಮತ್ತು ನಿರ್ಲಕ್ಷಿಸುವಂತೆ ಬೇಡುತ್ತೇನೆ. "ಮತ್ತು ಸೌಖ್ಯವನ್ನು" ಅಂದರೆ ನ್ಯೂನತೆಗಳಿಂದ ಮುಕ್ತಿಯನ್ನು ಬೇಡುತ್ತೇನೆ. "ನನ್ನ ಧರ್ಮದಲ್ಲಿ" ಅಂದರೆ ಶಿರ್ಕ್, ಬಿದ್‌ಅತ್ ಮತ್ತು ಪಾಪಗಳಿಂದ, "ಮತ್ತು ಇಹಲೋಕದಲ್ಲಿ" ಅಂದರೆ ವಿಪತ್ತುಗಳು, ತೊಂದರೆಗಳು ಮತ್ತು ಕೆಡುಕುಗಳಿಂದ, "ಕುಟುಂಬದಲ್ಲಿ" ಅಂದರೆ ಪತ್ನಿಯರು, ಮಕ್ಕಳು ಮತ್ತು ಸಂಬಂಧಿಕರು, "ಸಂಪತ್ತಿನಲ್ಲಿ" ಅಂದರೆ ನನ್ನ ಆಸ್ತಿ ಮತ್ತು ಉದ್ಯೋಗದಲ್ಲಿ. "ಓ ಅಲ್ಲಾಹ್! ನನ್ನ ಕುಂದು-ಕೊರತೆಗಳನ್ನು ಮುಚ್ಚಿಡು" ಅಂದರೆ ನನ್ನಲ್ಲಿರುವ ನ್ಯೂನತೆಗಳು, ಕೊರತೆಗಳು ಮತ್ತು ಅಪೂರ್ಣತೆಗಳನ್ನು ಮುಚ್ಚಿಡು ಹಾಗೂ ನನ್ನ ಪಾಪಗಳನ್ನು ಅಳಿಸು. "ನನ್ನ ಭಯವನ್ನು ನಿವಾರಿಸು" ಅಂದರೆ ನನ್ನ ದಿಗಿಲು ಮತ್ತು ಆತಂಕವನ್ನು. "ಓ ಅಲ್ಲಾಹ್! ನನ್ನನ್ನು ರಕ್ಷಿಸು" ಅಂದರೆ ನನಗೆ ತೊಂದರೆ ನೀಡುವ ಮತ್ತು ಹಾನಿ ಮಾಡುವ ವಿಪತ್ತುಗಳಿಂದ ನನ್ನನ್ನು ರಕ್ಷಿಸು. "ನನ್ನ ಮುಂಭಾಗದಿಂದ, ನನ್ನ ಹಿಂಭಾಗದಿಂದ, ನನ್ನ ಬಲಭಾಗದಿಂದ, ನನ್ನ ಎಡಭಾಗದಿಂದ, ನನ್ನ ಮೇಲ್ಭಾಗದಿಂದ" ಅಂದರೆ ಎಲ್ಲಾ ದಿಕ್ಕುಗಳಿಂದಲೂ ನನ್ನನ್ನು ರಕ್ಷಿಸು. ಏಕೆಂದರೆ, ವಿಪತ್ತುಗಳು ಮತ್ತು ಅಪಾಯಗಳು ಮನುಷ್ಯನನ್ನು ಈ ದಿಕ್ಕುಗಳ ಪೈಕಿ ಯಾವುದಾದರೂ ಒಂದರಿಂದ ಎರಗುತ್ತದೆ. "ನನ್ನನ್ನು ಹತ್ಯೆಗೈಯಲಾಗುವುದರಿಂದ ನಾನು ನಿನ್ನ ಮಹಾತ್ಮೆಯ ಮೂಲಕ ನಿನ್ನಲ್ಲಿ ರಕ್ಷೆ ಬೇಡುತ್ತೇನೆ." ಅಂದರೆ ನನ್ನನ್ನು ಅನಿರೀಕ್ಷಿತವಾಗಿ ಶಿಕ್ಷಿಸಲಾಗುವುದರಿಂದ ಮತ್ತು ಆಕಸ್ಮಿಕವಾಗಿ ನಾಶ ಮಾಡಲಾಗುವುದರಿಂದ. "ನನ್ನ ಕೆಳಭಾಗದಿಂದ" ಅಂದರೆ ಭೂಮಿ ನನ್ನನ್ನು ನುಂಗುವಂತೆ ಮಾಡಿ ನನ್ನನ್ನು ನಾಶಗೊಳಿಸಲಾಗುವುದರಿಂದ ನಾನು ರಕ್ಷೆ ಬೇಡುತ್ತೇನೆ.

فوائد الحديث

ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಕರಿಸಿ ಈ ಪ್ರಾರ್ಥನೆಯನ್ನು ದಿನನಿತ್ಯ ಪಠಿಸಬೇಕಾಗಿದೆ.

ಧರ್ಮದ ವಿಷಯದಲ್ಲಿ ಅಲ್ಲಾಹನಲ್ಲಿ ಸೌಖ್ಯ ಬೇಡಬೇಕೆಂದು ಮನುಷ್ಯನಿಗೆ ಆಜ್ಞಾಪಿಸಲಾಗಿರುವಂತೆ, ಇಹಲೋಕದ ವಿಷಯದಲ್ಲೂ ಸೌಖ್ಯವನ್ನು ಬೇಡಬೇಕೆಂದು ಆಜ್ಞಾಪಿಸಲಾಗಿದೆ.

ತೀಬಿ ಹೇಳಿದರು: "ಎಲ್ಲಾ ಆರು ದಿಕ್ಕುಗಳನ್ನೂ ಉಲ್ಲೇಖಿಸಲಾಗಿದೆ. ಏಕೆಂದರೆ ವಿಪತ್ತು ಈ ಎಲ್ಲಾ ದಿಕ್ಕುಗಳಿಂದಲೂ ಬರುತ್ತದೆ. ಕೆಳಭಾಗದ ದಿಕ್ಕನ್ನು ಉತ್ಪ್ರೇಕ್ಷೆ ಮಾಡಿರುವುದು ಏಕೆಂದರೆ ವಿಪತ್ತುಗಳ ಭೀಕರತೆಯು ಅಲ್ಲಿಂದಲೇ ಆಗಿರುತ್ತದೆ.

ದಿಕ್ರ್ ಹೇಳಬೇಕಾದ ಶ್ರೇಷ್ಠ ಸಮಯ: ಬೆಳಗ್ಗೆ ಮುಂಜಾನೆಯ ಉದಯದಿಂದ ತೊಡಗಿ ಸೂರ್ಯೋದಯದ ತನಕ ಮತ್ತು ಅಸರ್ ನಮಾಝಿನ ನಂತರ ಸೂರ್ಯಾಸ್ತದ ತನಕ. ಅದರ ನಂತರ ಹೇಳಿದರೆ, ಅಂದರೆ ಪೂರ್ವಾಹ್ನದ ಸಮಯದಲ್ಲಿ ಹೇಳಿದರೂ ಸಾಕಾಗುತ್ತದೆ. ಅದೇ ರೀತಿ, ಮಧ್ಯಾಹ್ನದ ನಂತರ ಹೇಳಿದರೂ ಸಾಕಾಗುತ್ತದೆ. ಮಗ್ರಿಬ್ ನಮಾಝಿನ ನಂತರ ಹೇಳಿದರೂ ಸಾಕಾಗುತ್ತದೆ. ಇದು ದಿಕ್ರ್ ಹೇಳುವ ಸಮಯವಾಗಿದೆ.

ಒಂದು ದಿಕ್ರನ್ನು ರಾತ್ರಿಯ ನಿರ್ದಿಷ್ಟ ಸಮಯದಲ್ಲಿ ಹೇಳಬೇಕೆಂದು ಪುರಾವೆಯು ಸೂಚಿಸಿದ್ದರೆ, ಉದಾಹರಣೆಗೆ, ಸೂರ ಬಖರದ ಕೊನೆಯ ಎರಡು ವಚನಗಳನ್ನು ಪಠಿಸುವುದು, ಇದು ಸೂರ್ಯಾಸ್ತದ ನಂತರ ರಾತ್ರಿಯ ಸಮಯದಲ್ಲಾಗಿರತಕ್ಕದ್ದು.

التصنيفات

Reported Supplications