ನಾನು ಕೇಳಿದೆ: "ಓ ಅಲ್ಲಾಹುವಿನ ಸಂದೇಶವಾಹಕರೇ, ನಾನು ಯಾರಿಗೆ ಹೆಚ್ಚು ಒಳಿತು ಮಾಡಬೇಕು?" ಅವರು ಉತ್ತರಿಸಿದರು: "ನಿಮ್ಮ ತಾಯಿಗೆ, ನಂತರ…

ನಾನು ಕೇಳಿದೆ: "ಓ ಅಲ್ಲಾಹುವಿನ ಸಂದೇಶವಾಹಕರೇ, ನಾನು ಯಾರಿಗೆ ಹೆಚ್ಚು ಒಳಿತು ಮಾಡಬೇಕು?" ಅವರು ಉತ್ತರಿಸಿದರು: "ನಿಮ್ಮ ತಾಯಿಗೆ, ನಂತರ ನಿಮ್ಮ ತಾಯಿಗೆ, ನಂತರ ನಿಮ್ಮ ತಾಯಿಗೆ, ನಂತರ ನಿಮ್ಮ ತಂದೆಗೆ, ನಂತರ ಹತ್ತಿರದ ಸಂಬಂಧಿಗಳಿಗೆ, ನಂತರ ಅವರ ನಂತರದ ಹತ್ತಿರದ ಸಂಬಂಧಿಗಳಿಗೆ

ಬಹ್‌ಝ್ ಬಿನ್ ಹಕೀಮ್ ತಮ್ಮ ತಂದೆಯ ಮೂಲಕ ತಾತನಿಂದ ವರದಿ. ಅವರು ಹೇಳಿದರು: ನಾನು ಕೇಳಿದೆ: "ಓ ಅಲ್ಲಾಹುವಿನ ಸಂದೇಶವಾಹಕರೇ, ನಾನು ಯಾರಿಗೆ ಹೆಚ್ಚು ಒಳಿತು ಮಾಡಬೇಕು?" ಅವರು ಉತ್ತರಿಸಿದರು: "ನಿಮ್ಮ ತಾಯಿಗೆ, ನಂತರ ನಿಮ್ಮ ತಾಯಿಗೆ, ನಂತರ ನಿಮ್ಮ ತಾಯಿಗೆ, ನಂತರ ನಿಮ್ಮ ತಂದೆಗೆ, ನಂತರ ಹತ್ತಿರದ ಸಂಬಂಧಿಗಳಿಗೆ, ನಂತರ ಅವರ ನಂತರದ ಹತ್ತಿರದ ಸಂಬಂಧಿಗಳಿಗೆ."

[حسن] [رواه أبو داود والترمذي وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಒಳಿತು ಮಾಡಲು, ಉಪಕಾರ ಮಾಡಲು, ಉತ್ತಮವಾಗಿ ವರ್ತಿಸಲು, ಉತ್ತಮ ಸಹವಾಸ ಮಾಡಲು ಮತ್ತು ಸಂಬಂಧವನ್ನು ಕಾಪಾಡಿಕೊಳ್ಳಲು ಹೆಚ್ಚು ಅರ್ಹರಾಗಿರುವುದು ತಾಯಿ. ಅವರು ಬೇರೆಯವರಿಗಿಂತಲೂ ಹೆಚ್ಚು ತಾಯಿಯ ಹಕ್ಕಿದೆ ಎಂದು ಮೂರು ಬಾರಿ ಪುನರಾವರ್ತಿಸುವ ಮೂಲಕ ಒತ್ತಿ ಹೇಳಿದರು. ಯಾವುದೇ ವಿನಾಯಿತಿ ಇಲ್ಲದಿದ್ದರೆ ಇತರ ಎಲ್ಲಾ ಜನರಿಗಿಂತಲೂ ಆಕೆ ಶ್ರೇಷ್ಠಳೆಂದು ಅವರು ವಿವರಿಸಿದ್ದಾರೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಒಳಿತು ಮಾಡುವುದರಲ್ಲಿ ಆಕೆಯ ನಂತರ ಯಾರು ಬರುತ್ತಾರೆ ಎಂಬುದನ್ನು ವಿವರಿಸುತ್ತಾ ಹೇಳಿದರು: ನಂತರ ತಂದೆ, ನಂತರ ರಕ್ತ ಸಂಬಂಧಿಗಳಲ್ಲಿ ಹತ್ತಿರದವರು, ನಂತರ ರಕ್ತ ಸಂಬಂಧಿಗಳಲ್ಲಿ ಅವರ ನಂತರದವರು. ಯಾರು ಹತ್ತಿರವಾಗಿದ್ದಾರೋ ಅವರು ದೂರದವರಿಗಿಂತ ಸಂಬಂಧವನ್ನು ಕಾಪಾಡಿಕೊಳ್ಳಲು ಹೆಚ್ಚು ಅರ್ಹರಾಗಿದ್ದಾರೆ.

فوائد الحديث

ಈ ಹದೀಸ್‌ನಲ್ಲಿ ತಾಯಿಗೆ ಮೊದಲ ಸ್ಥಾನ, ನಂತರ ತಂದೆಗೆ, ನಂತರ ಹತ್ತಿರದ ಸಂಬಂಧಿಗಳಿಗೆ, ನಂತರ ಸಂಬಂಧದಲ್ಲಿ ಹತ್ತಿರವಾಗಿರುವುದಕ್ಕೆ ಅನುಗುಣವಾಗಿ ಸ್ಥಾನ ನೀಡಲಾಗಿದೆ.

ತಂದೆತಾಯಿಯರ ಸ್ಥಾನವನ್ನು ಮತ್ತು ವಿಶೇಷವಾಗಿ ತಾಯಿಯ ಸ್ಥಾನವನ್ನು ವಿವರಿಸಲಾಗಿದೆ.

ಈ ಹದೀಸ್‌ನಲ್ಲಿ ತಾಯಿಗೆ ಒಳಿತು ಮಾಡಬೇಕೆಂದು ಮೂರು ಬಾರಿ ಪುನರಾವರ್ತಿಸಿ ಹೇಳಲಾಗಿದೆ. ಏಕೆಂದರೆ ಆಕೆ ತನ್ನ ಮಕ್ಕಳ ಮೇಲೆ ಅಪಾರವಾದ ಶ್ರೇಷ್ಠತೆಯನ್ನು ಹೊಂದಿದ್ದಾಳೆ. ಹಾಗೆಯೇ ಆಕೆ ಗರ್ಭಧಾರಣೆಯ ತೊಂದರೆಗಳು, ಶ್ರಮ ಮತ್ತು ಕಷ್ಟಗಳನ್ನು ಬಹಳಷ್ಟು ಸಹಿಸಿಕೊಳ್ಳುತ್ತಾಳೆ. ನಂತರ ಹೆರಿಗೆ ಮತ್ತು ಸ್ತನಪಾನದ ಕಷ್ಟಗಳನ್ನು ಅನುಭವಿಸುತ್ತಾಳೆ. ಇದನ್ನು ತಾಯಿ ಮಾತ್ರ ಅನುಭವಿಸುತ್ತಾಳೆ. ನಂತರ ಮಕ್ಕಳ ಪಾಲನೆ ಪೋಷಣೆಯಲ್ಲಿ ತಂದೆ ಆಕೆಯೊಂದಿಗೆ ಸೇರಿಕೊಳ್ಳುತ್ತಾನೆ.

التصنيفات

Merits of Being Dutiful to One's Parents