ಅಲ್ಲಾಹು ನಿಷೇಧಿಸಿರುವ ಈ ಹೊಲಸು ಕಾರ್ಯದಿಂದ ದೂರವಿರಿ. ಯಾರು (ಅದರಲ್ಲಿ) ತೊಡಗುತ್ತಾನೋ (ಯಾರಿಂದ ಅದು ಸಂಭವಿಸುತ್ತದೆಯೋ), ಅವನು…

ಅಲ್ಲಾಹು ನಿಷೇಧಿಸಿರುವ ಈ ಹೊಲಸು ಕಾರ್ಯದಿಂದ ದೂರವಿರಿ. ಯಾರು (ಅದರಲ್ಲಿ) ತೊಡಗುತ್ತಾನೋ (ಯಾರಿಂದ ಅದು ಸಂಭವಿಸುತ್ತದೆಯೋ), ಅವನು ಅಲ್ಲಾಹುವಿನ ಮರೆಯಲ್ಲಿ ತನ್ನನ್ನು ತಾನು ಮರೆಮಾಡಿಕೊಳ್ಳಲಿ ಮತ್ತು ಅಲ್ಲಾಹುವಿನಲ್ಲಿ ಪಶ್ಚಾತ್ತಾಪ ಪಡಲಿ. ಏಕೆಂದರೆ, ಯಾರು ನಮಗೆ ತನ್ನ ಪುಟವನ್ನು ತೆರೆದು ತೋರಿಸುತ್ತಾನೋ (ಅಂದರೆ, ತನ್ನ ಪಾಪವನ್ನು ಬಹಿರಂಗಪಡಿಸುತ್ತಾನೋ), ನಾವು ಅವನ ಮೇಲೆ ಅಲ್ಲಾಹುವಿನ ಗ್ರಂಥದಲ್ಲಿರುವ ಶಿಕ್ಷೆಯನ್ನು ಜಾರಿಗೊಳಿಸುತ್ತೇವೆ

ಅಬ್ದುಲ್ಲಾ ಇಬ್ನ್ ಉಮರ್ (ರ) ರಿಂದ ವರದಿ: ಅಲ್ಲಾಹುವಿನ ಸಂದೇಶವಾಹಕ ಸಲ್ಲಲ್ಲಾಹು ಅಲೈಹಿ ವಸಲ್ಲಂ ರು ಅಲ್-ಅಸ್ಲಮೀ ಗೋತ್ರದ ಒಬ್ಬರನ್ನು ಕಲ್ಲೆಸೆದು ಶಿಕ್ಷಿಸಿದ ನಂತರ ಎದ್ದುನಿಂತು ಹೇಳಿದರು: "ಅಲ್ಲಾಹು ನಿಷೇಧಿಸಿರುವ ಈ ಹೊಲಸು ಕಾರ್ಯದಿಂದ ದೂರವಿರಿ. ಯಾರು (ಅದರಲ್ಲಿ) ತೊಡಗುತ್ತಾನೋ (ಯಾರಿಂದ ಅದು ಸಂಭವಿಸುತ್ತದೆಯೋ), ಅವನು ಅಲ್ಲಾಹುವಿನ ಮರೆಯಲ್ಲಿ ತನ್ನನ್ನು ತಾನು ಮರೆಮಾಡಿಕೊಳ್ಳಲಿ ಮತ್ತು ಅಲ್ಲಾಹುವಿನಲ್ಲಿ ಪಶ್ಚಾತ್ತಾಪ ಪಡಲಿ. ಏಕೆಂದರೆ, ಯಾರು ನಮಗೆ ತನ್ನ ಪುಟವನ್ನು ತೆರೆದು ತೋರಿಸುತ್ತಾನೋ (ಅಂದರೆ, ತನ್ನ ಪಾಪವನ್ನು ಬಹಿರಂಗಪಡಿಸುತ್ತಾನೋ), ನಾವು ಅವನ ಮೇಲೆ ಅಲ್ಲಾಹುವಿನ ಗ್ರಂಥದಲ್ಲಿರುವ ಶಿಕ್ಷೆಯನ್ನು ಜಾರಿಗೊಳಿಸುತ್ತೇವೆ".

[صحيح]

الشرح

ಇಬ್ನ್ ಉಮರ್ (ರ) ಅವರು ತಿಳಿಸುವುದೇನೆಂದರೆ, ಪ್ರವಾದಿಯವರು (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಮಾಇಝ್ ಇಬ್ನ್ ಮಾಲಿಕ್ ಅಲ್-ಅಸ್ಲಮೀ (ರ) ರವರ ಮೇಲೆ ವ್ಯಭಿಚಾರದ 'ಹದ್ದ್' (ಶರೀಅತ್ ನಿರ್ಧರಿಸಿದ ದಂಡನೆ) ಯಾಗಿ ಕಲ್ಲೆಸೆದು ಶಿಕ್ಷಿಸಿದ ನಂತರ ಎದ್ದುನಿಂತು, ಜನರಿಗೆ ಪ್ರವಚನ ನೀಡುತ್ತಾ ಹೇಳಿದರು: ಅಲ್ಲಾಹು ನಿಷೇಧಿಸಿರುವ ಈ ಹೊಲಸಿನಿಂದ ಮತ್ತು ತಿರಸ್ಕಾರಾರ್ಹ ಹಾಗೂ ಅಸಹ್ಯಕರವಾದ ಪಾಪಗಳಿಂದ ದೂರವಿರಿ. ಯಾರು ಅವುಗಳಲ್ಲಿ ಯಾವುದನ್ನಾದರೂ ಮಾಡಿಬಿಡುತ್ತಾನೋ, ಅವನ ಮೇಲೆ ಎರಡು ವಿಷಯಗಳು ಕಡ್ಡಾಯವಾಗುತ್ತವೆ: ಮೊದಲನೆಯದು: ಅಲ್ಲಾಹು ಅವನನ್ನು ಮರೆಮಾಚಿರುವುದರಿಂದ ಅವನು ತನ್ನನ್ನು ತಾನು ಮರೆಮಾಡಿಕೊಳ್ಳಬೇಕು ಮತ್ತು ತನ್ನ ಪಾಪದ ಬಗ್ಗೆ (ಇತರರಿಗೆ) ತಿಳಿಸಬಾರದು. ಎರಡನೆಯದು: ಅವನು ಅಲ್ಲಾಹುವಿನಲ್ಲಿ ಪಶ್ಚಾತ್ತಾಪ ಪಡಲು ತ್ವರೆ ಮಾಡಬೇಕು ಮತ್ತು ಆ ಪಾಪವನ್ನು ಪುನಃ ಮಾಡಬಾರದು. ಯಾರ ಪಾಪವು ನಮಗೆ ಬಹಿರಂಗವಾಗುತ್ತದೆಯೋ, ನಾವು ಆ ಪಾಪಕ್ಕಾಗಿ ಅಲ್ಲಾಹುವಿನ ಗ್ರಂಥದಲ್ಲಿ ಉಲ್ಲೇಖಿಸಲಾದ 'ಹದ್ದ್' ಅನ್ನು ಅವನ ಮೇಲೆ ಜಾರಿಗೊಳಿಸುತ್ತೇವೆ.

فوائد الحديث

ಪಾಪ ಮಾಡಿದ ದಾಸನು ತನ್ನನ್ನು ತಾನು ಮರೆಮಾಡಿಕೊಳ್ಳಲು, ಮತ್ತು ತನಗೂ ತನ್ನ ರಬ್‌ಗೂ (ಅಲ್ಲಾಹುವಿಗೂ) ನಡುವೆ ಪಾಪಕ್ಕಾಗಿ ಪಶ್ಚಾತ್ತಾಪ ಪಡಲು ಪ್ರೋತ್ಸಾಹಿಸಲಾಗಿದೆ.

'ಹದ್ದ್' ಶಿಕ್ಷೆಗಳ ಪಾಪಗಳು ಆಡಳಿತಗಾರರನ್ನು ತಲುಪಿದರೆ, 'ಹದ್ದ್' ಅನ್ನು ಜಾರಿಗೊಳಿಸುವುದು ಅನಿವಾರ್ಯವಾಗುತ್ತದೆ.

ಪಾಪಗಳಿಂದ ದೂರವಿರುವುದು, ಮತ್ತು ಅವುಗಳಿಂದ ಪಶ್ಚಾತ್ತಾಪ ಪಡುವುದು ಕಡ್ಡಾಯವಾಗಿದೆ.

التصنيفات

Repentance