إعدادات العرض
ನಿಮ್ಮಲ್ಲಿ ಯಾರು ತನ್ನ ದೇಹದಲ್ಲಿ ಆರೋಗ್ಯಪೂರ್ಣನಾಗಿ, ತನ್ನ ವಾಸಸ್ಥಳದಲ್ಲಿ ಸುರಕ್ಷಿತನಾಗಿ, ಮತ್ತು ತನ್ನ ಬಳಿ ಅಂದಿನ ದಿನದ…
ನಿಮ್ಮಲ್ಲಿ ಯಾರು ತನ್ನ ದೇಹದಲ್ಲಿ ಆರೋಗ್ಯಪೂರ್ಣನಾಗಿ, ತನ್ನ ವಾಸಸ್ಥಳದಲ್ಲಿ ಸುರಕ್ಷಿತನಾಗಿ, ಮತ್ತು ತನ್ನ ಬಳಿ ಅಂದಿನ ದಿನದ ಆಹಾರವನ್ನು ಹೊಂದಿದವನಾಗಿ ಬೆಳಿಗ್ಗೆ ಏಳುತ್ತಾನೋ (ದಿನವನ್ನು ಆರಂಭಿಸುತ್ತಾನೋ), ಅವನಿಗಾಗಿ ಇಡೀ ಪ್ರಪಂಚವನ್ನೇ ಸಂಗ್ರಹಿಸಿಕೊಟ್ಟಂತಿದೆ
ಉಬೈದುಲ್ಲಾ ಬಿನ್ ಮಿಹ್ಸನ್ ಅಲ್-ಅನ್ಸಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲಿ ಯಾರು ತನ್ನ ದೇಹದಲ್ಲಿ ಆರೋಗ್ಯಪೂರ್ಣನಾಗಿ, ತನ್ನ ವಾಸಸ್ಥಳದಲ್ಲಿ ಸುರಕ್ಷಿತನಾಗಿ, ಮತ್ತು ತನ್ನ ಬಳಿ ಅಂದಿನ ದಿನದ ಆಹಾರವನ್ನು ಹೊಂದಿದವನಾಗಿ ಬೆಳಿಗ್ಗೆ ಏಳುತ್ತಾನೋ (ದಿನವನ್ನು ಆರಂಭಿಸುತ್ತಾನೋ), ಅವನಿಗಾಗಿ ಇಡೀ ಪ್ರಪಂಚವನ್ನೇ ಸಂಗ್ರಹಿಸಿಕೊಟ್ಟಂತಿದೆ."
[حسن] [رواه الترمذي وابن ماجه]
الترجمة
العربية বাংলা Bosanski English Español فارسی Français Indonesia Русский Tagalog Türkçe اردو 中文 हिन्दी සිංහල ئۇيغۇرچە Hausa Kurdî Tiếng Việt অসমীয়া Nederlands Kiswahili ગુજરાતી Magyar ქართული Română Português ไทย తెలుగు मराठी دری አማርኛ Malagasy Македонски ភាសាខ្មែរ Українська ਪੰਜਾਬੀ Wolof پښتو Moore Svenska മലയാളം தமிழ்الشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಓ ಮುಸ್ಲಿಮರೇ, ನಿಮ್ಮಲ್ಲಿ ಯಾರು ತಮ್ಮ ದೇಹದಲ್ಲಿ ಆರೋಗ್ಯದಿಂದ ಮತ್ತು ರೋಗರುಜಿನಗಳಿಂದ ಮುಕ್ತರಾಗಿ, ತಮ್ಮ ಆತ್ಮ, ಕುಟುಂಬ, ಅವಲಂಬಿತರು ಮತ್ತು ಮಾರ್ಗದಲ್ಲಿ ಭಯವಿಲ್ಲದೆ ಸುರಕ್ಷಿತರಾಗಿ, ಮತ್ತು ತಮ್ಮ ಬಳಿ ಅಂದಿನ ದಿನಕ್ಕೆ ಸಾಕಾಗುವಷ್ಟು ಹಲಾಲ್ (ಧರ್ಮಸಮ್ಮತ) ಆಹಾರವನ್ನು ಹೊಂದಿದವರಾಗಿ ಬೆಳಿಗ್ಗೆ ಏಳುತ್ತಾರೋ; ಅವನಿಗಾಗಿ ಇಡೀ ಪ್ರಪಂಚವನ್ನೇ ಒಟ್ಟುಗೂಡಿಸಿದಂತಿದೆ.فوائد الحديث
ಮನುಷ್ಯನಿಗೆ ಆರೋಗ್ಯ, ಭದ್ರತೆ ಮತ್ತು ಆಹಾರದ ಜರೂರತ್ತಿನ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ.
ದಾಸನು ಈ ಅನುಗ್ರಹಗಳಿಗಾಗಿ ಅಲ್ಲಾಹುವಿಗೆ ಸ್ತುತಿ ಸಲ್ಲಿಸಬೇಕು ಮತ್ತು ಕೃತಜ್ಞನಾಗಿರಬೇಕು.
ಸಂತೃಪ್ತಿ ಮತ್ತು ಇಹಲೋಕದ ಬಗ್ಗೆ ವಿರಕ್ತಿಯನ್ನು (ಝುಹ್ದ್) ಹೊಂದಲು ಪ್ರೋತ್ಸಾಹಿಸಲಾಗಿದೆ.
التصنيفات
ದೇವಭಯೆ ಮತ್ತು ಧರ್ಮನಿಷ್ಠೆ