ಯಾರು ಮರಣದ ಸಮಯವು ಇನ್ನೂ ಬಂದಿರದ ರೋಗಿಯನ್ನು ಸಂದರ್ಶಿಸಿ, ಅವನ ಬಳಿ ಏಳು ಬಾರಿ: 'ಮಹಾ ಅರ್ಶಿನ ಒಡೆಯನಾದ ಮಹೋನ್ನತನಾದ ಅಲ್ಲಾಹನಲ್ಲಿ…

ಯಾರು ಮರಣದ ಸಮಯವು ಇನ್ನೂ ಬಂದಿರದ ರೋಗಿಯನ್ನು ಸಂದರ್ಶಿಸಿ, ಅವನ ಬಳಿ ಏಳು ಬಾರಿ: 'ಮಹಾ ಅರ್ಶಿನ ಒಡೆಯನಾದ ಮಹೋನ್ನತನಾದ ಅಲ್ಲಾಹನಲ್ಲಿ ಅವನು ನಿನ್ನನ್ನು ಗುಣಪಡಿಸಬೇಕೆಂದು ನಾನು ಕೇಳುತ್ತೇನೆ' ಎಂದು ಹೇಳಿದರೆ, ಅಲ್ಲಾಹು ಅವನನ್ನು ಆ ಕಾಯಿಲೆಯಿಂದ ಗುಣಪಡಿಸದೆ ಇರಲಾರ

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಮರಣದ ಸಮಯವು ಇನ್ನೂ ಬಂದಿರದ ರೋಗಿಯನ್ನು ಸಂದರ್ಶಿಸಿ, ಅವನ ಬಳಿ ಏಳು ಬಾರಿ: 'ಮಹಾ ಅರ್ಶಿನ ಒಡೆಯನಾದ ಮಹೋನ್ನತನಾದ ಅಲ್ಲಾಹನಲ್ಲಿ ಅವನು ನಿನ್ನನ್ನು ಗುಣಪಡಿಸಬೇಕೆಂದು ನಾನು ಕೇಳುತ್ತೇನೆ' ಎಂದು ಹೇಳಿದರೆ, ಅಲ್ಲಾಹು ಅವನನ್ನು ಆ ಕಾಯಿಲೆಯಿಂದ ಗುಣಪಡಿಸದೆ ಇರಲಾರ."

[صحيح] [رواه أبو داود والترمذي وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಮರಣದ ಸಮಯ ಸಮೀಪಿಸದ ರೋಗದಿಂದ ಬಳಲುತ್ತಿರುವ ಒಬ್ಬ ಮುಸ್ಲಿಮನನ್ನು ಇನ್ನೊಬ್ಬ ಮುಸ್ಲಿಮನು ಸಂದರ್ಶಿಸಿ, ನಂತರ ಹೀಗೆ ಪ್ರಾರ್ಥಿಸಿದರೆ: "ಮಹೋನ್ನತನಾದ ಅಲ್ಲಾಹನಲ್ಲಿ ನಾನು ಕೇಳುತ್ತೇನೆ". ಅಂದರೆ ಅವನ ಸಾರ, ಗುಣಲಕ್ಷಣಗಳು ಮತ್ತು ಕ್ರಿಯೆಗಳನ್ನು ಮುಂದಿಟ್ಟು ಕೇಳುತ್ತೇನೆ. "ಮಹಾ ಅರ್ಶಿನ ಒಡೆಯನೊಂದಿಗೆ ಅವನು ನಿನ್ನನ್ನು ಗುಣಪಡಿಸಲೆಂದು". ಇದನ್ನು ಏಳು ಬಾರಿ ಪುನರಾವರ್ತಿಸಿದರೆ, ಅಲ್ಲಾಹನು ಅವನನ್ನು ಆ ಕಾಯಿಲೆಯಿಂದ ಗುಣಪಡಿಸದೆ ಇರಲಾರ.

فوائد الحديث

ಈ ಪ್ರಾರ್ಥನೆಯಿಂದ ರೋಗಿಗಾಗಿ ಪ್ರಾರ್ಥಿಸುವುದು ಮತ್ತು ಅದನ್ನು ಏಳು ಬಾರಿ ಪುನರಾವರ್ತಿಸುವುದು ಅಪೇಕ್ಷಣೀಯವಾಗಿದೆ.

ಸತ್ಯವಂತಿಕೆ ಮತ್ತು ಒಳಿತಿನ ಉದ್ದೇಶದಿಂದ ಯಾರ ಬಳಿ ಈ ಪ್ರಾರ್ಥನೆಯನ್ನು ಪಠಿಸಲಾಗುತ್ತದೆಯೋ ಅವರಿಗೆ ಅಲ್ಲಾಹನ ಅನುಮತಿಯಿಂದ ಗುಣಮುಖವಾಗುವುದು ಖಂಡಿತ.

ಈ ಪ್ರಾರ್ಥನೆಯನ್ನು ರಹಸ್ಯವಾಗಿ ಮತ್ತು ಬಹಿರಂಗವಾಗಿ ಪಠಿಸಬಹುದು. ಎರಡೂ ಅನುಮತಿಸಲಾಗಿದೆ. ಆದರೆ ರೋಗಿಗೆ ಕೇಳಿಸುವಂತೆ ಪಠಿಸುವುದು ಉತ್ತಮ ಮತ್ತು ಶ್ರೇಷ್ಠವಾಗಿದೆ. ಏಕೆಂದರೆ ಅದರಿಂದ ರೋಗಿಗೆ ಸಂತೋಷವನ್ನುಂಟು ಮಾಡಿದಂತೆ ಆಗುತ್ತದೆ.

التصنيفات

Ruqyah (Healing and Protective Supplications)