ಸಮಯವು ತ್ವರಿತವಾಗಿ ಹಾದುಹೋಗುವ ತನಕ ಅಂತ್ಯಸಮಯವು ಸಂಭವಿಸುವುದಿಲ್ಲ

ಸಮಯವು ತ್ವರಿತವಾಗಿ ಹಾದುಹೋಗುವ ತನಕ ಅಂತ್ಯಸಮಯವು ಸಂಭವಿಸುವುದಿಲ್ಲ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸಮಯವು ತ್ವರಿತವಾಗಿ ಹಾದುಹೋಗುವ ತನಕ ಅಂತ್ಯಸಮಯವು ಸಂಭವಿಸುವುದಿಲ್ಲ. ಆಗ ಒಂದು ವರ್ಷವು ಒಂದು ತಿಂಗಳಂತೆ, ಒಂದು ತಿಂಗಳು ಒಂದು ವಾರದಂತೆ, ಒಂದು ವಾರವು ಒಂದು ದಿನದಂತೆ, ಒಂದು ದಿನವು ಒಂದು ತಾಸಿನಂತೆ, ಮತ್ತು ಒಂದು ತಾಸು ಖರ್ಜೂರ ಮರದ ಎಲೆಯು ಉರಿಯುವಂತೆ ಇರುತ್ತದೆ."

[صحيح] [رواه أحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸಮಯವು ತ್ವರಿತವಾಗಿ ಕಳೆದುಹೋಗುವುದು ಅಂತ್ಯಸಮಯದ ಒಂದು ಚಿಹ್ನೆಯಾಗಿದೆ. ಆಗ ಒಂದು ವರ್ಷವು ಒಂದು ತಿಂಗಳಷ್ಟು ಬೇಗನೆ ಹಾದುಹೋಗುತ್ತದೆ. ಒಂದು ತಿಂಗಳು ಒಂದು ವಾರದಷ್ಟು ಬೇಗನೆ ಹಾದುಹೋಗುತ್ತದೆ. ಒಂದು ವಾರವು ಒಂದು ದಿನದಷ್ಟು ಬೇಗನೆ ಹಾದುಹೋಗುತ್ತದೆ. ಒಂದು ದಿನವು ಒಂದು ತಾಸಿನಷ್ಟು ಬೇಗನೆ ಹಾದುಹೋಗುತ್ತದೆ. ಒಂದು ತಾಸು ಖರ್ಜೂರದ ಎಲೆಯು ಉರಿಯುವಂತೆ ಅತ್ಯಂತ ಕ್ಷಿಪ್ರವಾಗಿ ಹಾದುಹೋಗುತ್ತದೆ.

فوائد الحديث

ಸಮಯದಲ್ಲಿ ಬರಕತ್ (ಸಮೃದ್ಧಿ) ಇಲ್ಲದಾಗುವುದು ಅಥವಾ ಸಮಯದ ವೇಗವು ಹೆಚ್ಚಾಗುವುದು ಅಂತ್ಯಸಮಯದ ಚಿಹ್ನೆಗಳಲ್ಲಿ ಒಂದಾಗಿದೆ.

التصنيفات

The Barzakh Life (After death Period)