إعدادات العرض
ಖಂಡಿತವಾಗಿಯೂ ಮುಂದೆ ಫಿತ್ನಾಗಳು (ಪರೀಕ್ಷೆಗಳು) ಸಂಭವಿಸಲಿವೆ. ತಿಳಿಯಿರಿ! ನಂತರ ಒಂದು ಫಿತ್ನಾ ಬರುತ್ತದೆ. ಅದರಲ್ಲಿ ಕುಳಿತವನು…
ಖಂಡಿತವಾಗಿಯೂ ಮುಂದೆ ಫಿತ್ನಾಗಳು (ಪರೀಕ್ಷೆಗಳು) ಸಂಭವಿಸಲಿವೆ. ತಿಳಿಯಿರಿ! ನಂತರ ಒಂದು ಫಿತ್ನಾ ಬರುತ್ತದೆ. ಅದರಲ್ಲಿ ಕುಳಿತವನು ಅದರಲ್ಲಿ ನಡೆಯುವವನಿಗಿಂತ ಉತ್ತಮನು, ಮತ್ತು ಅದರಲ್ಲಿ ನಡೆಯುವವನು ಅದರ ಕಡೆಗೆ ಓಡುವವನಿಗಿಂತ ಉತ್ತಮನು
ಉಸ್ಮಾನ್ ಅಶ್ಶಹ್ಹಾಮ್ ರಿಂದ ವರದಿ: ಅವರು ಹೇಳಿದರು: ನಾನು ಮತ್ತು ಫರ್ಕದ್ ಸಬಖಿ ರವರು ಮುಸ್ಲಿಂ ಬಿನ್ ಅಬೂ ಬಕ್ರ ರವರ ಬಳಿಗೆ ಹೋದೆವು. ಅವರು ತಮ್ಮ ಜಮೀನಿನಲ್ಲಿದ್ದರು. ನಾವು ಅವರ ಬಳಿ ಪ್ರವೇಶಿಸಿ ಕೇಳಿದೆವು: ನಿಮ್ಮ ತಂದೆಯವರು ಫಿತ್ನದ (ಪರೀಕ್ಷೆ) ಬಗ್ಗೆ ಹದೀಸ್ ಹೇಳುವುದನ್ನು ನೀವು ಕೇಳಿದ್ದೀರಾ? ಅವರು ಹೇಳಿದರು: ಹೌದು, ಅಬೂ ಬಕ್ರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹದೀಸ್ ಹೇಳುವುದನ್ನು ನಾನು ಕೇಳಿದ್ದೇನೆ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಮುಂದೆ ಫಿತ್ನಾಗಳು (ಪರೀಕ್ಷೆಗಳು) ಸಂಭವಿಸಲಿವೆ. ತಿಳಿಯಿರಿ! ನಂತರ ಒಂದು ಫಿತ್ನಾ ಬರುತ್ತದೆ. ಅದರಲ್ಲಿ ಕುಳಿತವನು ಅದರಲ್ಲಿ ನಡೆಯುವವನಿಗಿಂತ ಉತ್ತಮನು, ಮತ್ತು ಅದರಲ್ಲಿ ನಡೆಯುವವನು ಅದರ ಕಡೆಗೆ ಓಡುವವನಿಗಿಂತ ಉತ್ತಮನು. ತಿಳಿಯಿರಿ! ಅದು ಬಂದಾಗ ಅಥವಾ ಸಂಭವಿಸಿದಾಗ, ಯಾರ ಬಳಿ ಒಂಟೆಗಳಿವೆಯೋ ಅವರು ತಮ್ಮ ಒಂಟೆಗಳೊಂದಿಗೆ ಸೇರಿಕೊಳ್ಳಲಿ, ಯಾರ ಬಳಿ ಕುರಿಗಳಿವೆಯೋ ಅವರು ತಮ್ಮ ಕುರಿಗಳೊಂದಿಗೆ ಸೇರಿಕೊಳ್ಳಲಿ, ಮತ್ತು ಯಾರ ಬಳಿ ಭೂಮಿ ಇದೆಯೋ ಅವರು ತಮ್ಮ ಭೂಮಿಯೊಂದಿಗೆ ಸೇರಿಕೊಳ್ಳಲಿ". ವರದಿಗಾರ ಹೇಳಿದರು: ಆಗ ಒಬ್ಬ ವ್ಯಕ್ತಿ ಕೇಳಿದರು: "ಓ ಅಲ್ಲಾಹುವಿನ ಸಂದೇಶವಾಹಕರೇ, ಯಾರ ಬಳಿ ಒಂಟೆಗಳು, ಕುರಿಗಳು ಮತ್ತು ಭೂಮಿಯು ಇಲ್ಲವೋ ಅವರ ಬಗ್ಗೆ ನೀವೇನು ಹೇಳುತ್ತೀರಿ?". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನು ತನ್ನ ಖಡ್ಗವನ್ನು ತೆಗೆದುಕೊಂಡು ಅದರ ಅಂಚನ್ನು ಕಲ್ಲಿನಿಂದ ಜಜ್ಜಲಿ, ನಂತರ ಸಾಧ್ಯವಾದರೆ ತಪ್ಪಿಸಿಕೊಳ್ಳಲಿ. ಓ ಅಲ್ಲಾಹ್ , ನಾನು ತಲುಪಿಸಿದ್ದೇನೆಯೇ? ಓ ಅಲ್ಲಾಹ್, ನಾನು ತಲುಪಿಸಿದ್ದೇನೆಯೇ? ಓ ಅಲ್ಲಾಹ್ , ನಾನು ತಲುಪಿಸಿದ್ದೇನೆಯೇ?". ವರದಿಗಾರ ಹೇಳಿದರು: ಆಗ ಒಬ್ಬ ವ್ಯಕ್ತಿ ಕೇಳಿದರು: "ಓ ಅಲ್ಲಾಹುವಿನ ಸಂದೇಶವಾಹಕರೇ, ನನ್ನನ್ನು ಒತ್ತಾಯಪೂರ್ವಕವಾಗಿ ಎರಡು ಗುಂಪುಗಳ ಪೈಕಿ ಒಂದಕ್ಕೆ ಅಥವಾ ಎರಡು ಪಕ್ಷಗಳ ಪೈಕಿ ಒಂದಕ್ಕೆ ಕರೆದೊಯ್ಯಲಾಗಿ, ಒಬ್ಬ ವ್ಯಕ್ತಿ ತನ್ನ ಖಡ್ಗದಿಂದ ನನಗೆ ಹೊಡೆದರೆ, ಅಥವಾ ಒಂದು ಬಾಣ ಬಂದು ನನ್ನನ್ನು ಕೊಂದರೆ (ನನ್ನ ಗತಿಯೇನು?)". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನು (ಕೊಲೆಗಾರ) ತನ್ನ ಪಾಪ ಮತ್ತು ನಿನ್ನ ಪಾಪದೊಂದಿಗೆ ಮರಳುತ್ತಾನೆ, ಮತ್ತು ಅವನು ನರಕವಾಸಿಗಳಲ್ಲಿ ಒಬ್ಬನಾಗುತ್ತಾನೆ".
الترجمة
العربية Tiếng Việt অসমীয়া Nederlands Indonesia Kiswahili Hausa සිංහල English ગુજરાતી Magyar ქართული Română Русский Português ไทย తెలుగు मराठी دری Türkçe አማርኛ বাংলা Kurdî Malagasy Македонски Tagalog ភាសាខ្មែរ Українська ਪੰਜਾਬੀ پښتو Moore Wolof हिन्दी മലയാളം Svenska Bosanski தமிழ் Српски 中文 မြန်မာالشرح
ಉಸ್ಮಾನ್ ಶಹ್ಹಾಮ್ ಮತ್ತು ಫರ್ಕದ್ ಸಬಖಿ ರವರು ಶ್ರೇಷ್ಠ ಸಹಾಬಿವರ್ಯರಾದ ಅಬೂ ಬಕ್ರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಮಗ ಮುಸ್ಲಿಂ ರೊಂದಿಗೆ ಕೇಳಿದರು: ಮುಸ್ಲಿಮರ ನಡುವೆ ನಡೆಯುವ ಫಿತ್ನಾಗಳು ಮತ್ತು ಯುದ್ಧಗಳ ಬಗ್ಗೆ ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಿಮ್ಮ ತಂದೆ ಹದೀಸ್ ಹೇಳಿದ್ದನ್ನು ನೀವು ಕೇಳಿದ್ದೀರಾ? ಅವರು ಹೌದು ಎಂದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಮರಣದ ನಂತರ ಫಿತ್ನಾಗಳು ಸಂಭವಿಸಲಿವೆ ಎಂದು ತಿಳಿಸಿದರು. ಈ ಫಿತ್ನಾಗಳು ನಡೆಯುವಾಗ, ಅದರ ಬಗ್ಗೆ ಗಮನಹರಿಸದೆ ಕುಳಿತಿರುವನು, ಅದರಲ್ಲಿ ಭಾಗವಹಿಸದೆ ಮತ್ತು ಅದನ್ನು ಹುಡುಕದೆ ನಡೆಯುವವನಿಗಿಂತ ಉತ್ತಮನು. ಅದರಲ್ಲಿ ನಡೆಯುವವನು, ಅದನ್ನು ಹುಡುಕುತ್ತಾ ಮತ್ತು ಅದರಲ್ಲಿ ಭಾಗವಹಿಸುತ್ತಾ ಅದರ ಕಡೆಗೆ ವೇಗವಾಗಿ ಧಾವಿಸುವವನಿಗಿಂತ ಉತ್ತಮನು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಿರ್ದೇಶನ ನೀಡುವುದೇನೆಂದರೆ, ಯಾರ ಕಾಲದಲ್ಲಿ ಫಿತ್ನಾ ಬರುತ್ತದೆಯೋ ಅಥವಾ ಸಂಭವಿಸುತ್ತದೆಯೋ ಅವರಿಗೆ ಯಾವುದಾದರೂ ಆಶ್ರಯ ಸಿಕ್ಕರೆ ಅದರಲ್ಲಿ ಆಶ್ರಯ ಪಡೆಯಲಿ. ಯಾರ ಬಳಿ ಮೇಯುವ ಒಂಟೆಗಳಿವೆಯೋ ಅವರು ತಮ್ಮ ಒಂಟೆಗಳೊಂದಿಗೆ ಸೇರಿಕೊಳ್ಳಲಿ. ಯಾರ ಬಳಿ ಮೇಯುವ ಕುರಿಗಳಿವೆಯೋ ಅವರು ತಮ್ಮ ಕುರಿಗಳೊಂದಿಗೆ ಸೇರಿಕೊಳ್ಳಲಿ. ಯಾರ ಬಳಿ ಭೂಮಿ ಮತ್ತು ತೋಟವಿದೆಯೋ ಅವರು ತಮ್ಮ ಭೂಮಿಯೊಂದಿಗೆ ಸೇರಿಕೊಳ್ಳಲಿ. ಆಗ ಒಬ್ಬ ವ್ಯಕ್ತಿ ಕೇಳಿದರು: ಓ ಅಲ್ಲಾಹುವಿನ ಸಂದೇಶವಾಹಕರೇ, ಒಂಟೆ, ಕುರಿ ಅಥವಾ ಭೂಮಿಯ ಆಶ್ರಯವಿಲ್ಲದವರ ಬಗ್ಗೆ ನೀವೇನು ಹೇಳುತ್ತೀರಿ? ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಅವನು ತನ್ನ ಆಯುಧವನ್ನು ತೆಗೆದುಕೊಂಡು ಅದನ್ನು ಜಜ್ಜಿ ಉಪಯೋಗಕ್ಕೆ ಬರದಂತೆ ಮಾಡಲಿ. ನಂತರ ಸಾಧ್ಯವಾದರೆ ತಾನು ಮತ್ತು ತನ್ನ ಮಕ್ಕಳೊಂದಿಗೆ ತಪ್ಪಿಸಿಕೊಳ್ಳಲಿ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮೂರು ಬಾರಿ ಸಾಕ್ಷಿಯಾಗಿಸಿದರು: ಓ ಅಲ್ಲಾಹ್ , ನಾನು ತಲುಪಿಸಿದ್ದೇನೆಯೇ? ಓ ಅಲ್ಲಾಹ್ , ನಾನು ತಲುಪಿಸಿದ್ದೇನೆಯೇ? ಓ ಅಲ್ಲಾಹ್ , ನಾನು ತಲುಪಿಸಿದ್ದೇನೆಯೇ? ಆಗ ಒಬ್ಬ ವ್ಯಕ್ತಿ ಕೇಳಿದರು: ಓ ಅಲ್ಲಾಹುವಿನ ಸಂದೇಶವಾಹಕರೇ, ನನ್ನನ್ನು ಎರಡು ಗುಂಪುಗಳಲ್ಲಿ ಒಂದರೊಂದಿಗೆ ಅಥವಾ ಎರಡು ಪಕ್ಷಗಳಲ್ಲಿ ಒಂದರೊಂದಿಗೆ ಸೇರಿಕೊಳ್ಳಲು ಒತ್ತಾಯಪಡಿಸಲಾಗಿ, ಒಬ್ಬ ವ್ಯಕ್ತಿಯು ತನ್ನ ಖಡ್ಗದಿಂದ ನನಗೆ ಹೊಡೆದರೆ, ಅಥವಾ ಒಂದು ಬಾಣ ಬಂದು ನನ್ನನ್ನು ಕೊಂದರೆ (ನನ್ನ ಗತಿಯೇನು)? ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಅವನು (ಕೊಲೆಗಾರ) ತನ್ನ ಪಾಪ ಮತ್ತು ಕೊಲೆಯಾದವನ ಪಾಪದೊಂದಿಗೆ ಮರಳುತ್ತಾನೆ, ಮತ್ತು ಅವನು (ಪುನರುತ್ಥಾನ) ದಿನದಂದು ನರಕವಾಸಿಗಳಲ್ಲಿ ಒಬ್ಬನಾಗುತ್ತಾನೆ.فوائد الحديث
ಫಿತ್ನಗಳ ಬಗ್ಗೆ ಎಚ್ಚರಿಸಲು, ಜನರು ಅವುಗಳಿಗೆ ಸಿದ್ಧರಾಗಲು, ಅವುಗಳಲ್ಲಿ ಭಾಗವಹಿಸದಿರಲು, ಮತ್ತು ಅಲ್ಲಾಹುವಿನಲ್ಲಿ ಅವುಗಳ ಕೆಡುಕಿನಿಂದ ತಾಳ್ಮೆ ಮತ್ತು ರಕ್ಷಣೆಯನ್ನು ಬೇಡಲು ಅವುಗಳು ಸಂಭವಿಸುವುದರ ಬಗ್ಗೆ ತಿಳಿಸಲಾಗಿದೆ.
ಇಮಾಮ್ ನವವಿ ಹೇಳುತ್ತಾರೆ: "(ಅದರಲ್ಲಿ) ಕುಳಿತವನು ನಿಂತವನಿಗಿಂತ ಉತ್ತಮನು" ಎಂಬಲ್ಲಿಂದ ಕೊನೆಯವರೆಗಿನ ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮಾತಿನ ಅರ್ಥವು, ಅದರ ಗಂಭೀರ ಅಪಾಯವನ್ನು ವಿವರಿಸುವುದು, ಮತ್ತು ಅದನ್ನು ತಪ್ಪಿಸಲು, ಅದರಿಂದ ಒಡಿ ಪಲಾಯನ ಮಾಡಲು ಪ್ರೋತ್ಸಾಹಿಸುವುದಾಗಿದೆ. ಅದರ ಕೆಡುಕು ಮತ್ತು ಪರೀಕ್ಷೆಯು ಅದಕ್ಕೆ ತಳಕುಹಾಕಿಕೊಂಡಿರುವಷ್ಟರ ಮಟ್ಟಿಗೆ ಇರುತ್ತದೆ."
ಇಮಾಮ್ ನವವಿ ಹೇಳುತ್ತಾರೆ: "ಅಲ್ಲಿ ಭಾಗವಹಿಸಲು ಬಲವಂತಪಡಿಸಲಾದವನಿಂದ ಪಾಪವನ್ನು ತೆಗೆದುಹಾಕಲಾಗಿದೆ. ಆದರೆ, ಬಲವಂತಕ್ಕೆ ಒಳಗಾಗಿ ಕೂಡ ಕೊಲೆ ಮಾಡುವುದನ್ನು ಅನುಮತಿಸಲಾಗುವುದಿಲ್ಲ. ಬದಲಿಗೆ, ವಿದ್ವಾಂಸರ ಒಮ್ಮತಾಭಿಪ್ರಾಯದ ಪ್ರಕಾರ, ಒಬ್ಬ ಬಲವಂತಕ್ಕೊಳಗಾದವನು ಆ ಕಾರ್ಯವನ್ನು ಮಾಡಲು ಆಜ್ಞಾಪಿಸಲಾಗಿ ಅವನು ಅದನ್ನು ಮಾಡಿದರೆ ಪಾಪಿಯಾಗುತ್ತಾನೆ."
ಇಬ್ನ್ ಹಜರ್ ಹೇಳುತ್ತಾರೆ: "ಇತರರು ಹೇಳುತ್ತಾರೆ: ಒಂದು ಗುಂಪು ಇಮಾಮ(ಆಡಳಿತಗಾರ)ನ ವಿರುದ್ಧ ದಂಗೆ ಎದ್ದು, ತಮ್ಮ ಮೇಲಿರುವ ಕಡ್ಡಾಯ ಕರ್ತವ್ಯವನ್ನು ನಿಷೇಧಿಸಿ ಯುದ್ಧವನ್ನು ಘೋಷಿಸಿದರೆ, ಅವರ ವಿರುದ್ಧ ಹೋರಾಡುವುದು ಕಡ್ಡಾಯವಾಗಿದೆ. ಹಾಗೆಯೇ, ಎರಡು ಗುಂಪುಗಳು ಪರಸ್ಪರ ಹೋರಾಡಿದರೆ, ತಪ್ಪು ಮಾಡಿದವರನ್ನು ತಡೆಯುವುದು ಮತ್ತು ಸರಿ ಇರುವವರಿಗೆ ಸಹಾಯ ಮಾಡುವುದು ಪ್ರತಿಯೊಬ್ಬ ಸಮರ್ಥ ವ್ಯಕ್ತಿಯ ಮೇಲೆ ಕಡ್ಡಾಯವಾಗಿದೆ. ಇದು ಬಹುಪಾಲು ವಿದ್ವಾಂಸರ ಅಭಿಪ್ರಾಯವಾಗಿದೆ. ಇತರರು ವಿಭಜಿಸಿ ಹೀಗೆ ಹೇಳಿದ್ದಾರೆ: ಮುಸ್ಲಿಮರ ಎರಡು ಗುಂಪುಗಳ ನಡುವೆ ಯಾವುದೇ (ಕಾನೂನುಬದ್ಧ) ಇಮಾಮ್ ಇಲ್ಲದಿರುವಾಗ ನಡೆಯುವ ಪ್ರತಿಯೊಂದು ಯುದ್ಧವೂ ನಿಷಿದ್ಧವಾಗಿದೆ. ಈ ಅಧ್ಯಾಯದಲ್ಲಿರುವ ಮತ್ತು ಇತರ ಹದೀಸ್‌ಗಳು ಅದಕ್ಕೆ ಅನ್ವಯಿಸುತ್ತವೆ."
ಇಮಾಮ್ ನವವಿ ಹೇಳುತ್ತಾರೆ: "ಫಿತ್ನದ ಸಂದರ್ಭದಲ್ಲಿ ಹೋರಾಡುವುದರ ಬಗ್ಗೆ ವಿದ್ವಾಂಸರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಂದು ಗುಂಪು ಹೇಳುತ್ತದೆ: ಮುಸ್ಲಿಮರ ನಡುವಿನ ಫಿತ್ನದ ಯುದ್ಧಗಳಲ್ಲಿ ಹೋರಾಡಬಾರದು. ಅವರು ಅವನ ಮನೆಗೆ ನುಗ್ಗಿ ಅವನನ್ನು ಕೊಲ್ಲಲು ಪ್ರಯತ್ನಿಸಿದರೂ ಸಹ, ಆತ್ಮರಕ್ಷಣೆ ಮಾಡಲು ಅವನಿಗೆ ಅನುಮತಿಯಿಲ್ಲ. ಏಕೆಂದರೆ ದಾಳಿಕೋರನು ತಅವೀಲ್ (ತನ್ನದೇ ಆದ ವ್ಯಾಖ್ಯಾನವನ್ನು) ಹೊಂದಿರುತ್ತಾನೆ. ಇದು ಸಹಾಬಿವರ್ಯರಾದ ಅಬೂ ಬಕ್ರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಮತ್ತು ಇತರರ ಅಭಿಪ್ರಾಯವಾಗಿದೆ. ಇಬ್ನ್ ಉಮರ್, ಇಮ್ರಾನ್ ಇಬ್ನ್ ಹುಸೈನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಮತ್ತು ಇತರರು ಹೇಳುತ್ತಾರೆ: ಅದರಲ್ಲಿ ಪ್ರವೇಶಿಸಬಾರದು. ಆದರೆ ಆತ್ಮರಕ್ಷಣೆ ಮಾಡಲು ಉದ್ದೇಶಿಸಿದರೆ (ಅದು ಅನುಮತಿಸಲಾಗಿದೆ). ಈ ಎರಡೂ ಅಭಿಪ್ರಾಯಗಳು ಇಸ್ಲಾಮಿನ ಎಲ್ಲಾ ಫಿತ್ನಗಳಲ್ಲಿ ಭಾಗವಹಿಸದಿರುವುದನ್ನು ಒಪ್ಪುತ್ತವೆ. ಬಹುಪಾಲು ಸಹಾಬಿಗಳು, ತಾಬಿಈನ್ ಮತ್ತು ಹೆಚ್ಚಿನ ಇಸ್ಲಾಮೀ ವಿದ್ವಾಂಸರು ಹೇಳುತ್ತಾರೆ: ಫಿತ್ನಗಳ ಸಂದರ್ಭದಲ್ಲಿ ಸರಿ ಇರುವವರಿಗೆ ಸಹಾಯ ಮಾಡುವುದು ಮತ್ತು ದಂಗೆಕೋರರ ವಿರುದ್ಧ ಹೋರಾಟದಲ್ಲಿ ಅವರೊಂದಿಗೆ ನಿಲ್ಲುವುದು ಕಡ್ಡಾಯವಾಗಿದೆ. ಅಲ್ಲಾಹು ಹೇಳುತ್ತಾನೆ: "ದಂಗೆ ಏಳುವ ಗುಂಪಿನ ವಿರುದ್ಧ ಹೋರಾಡಿರಿ, ಅವರು ಅಲ್ಲಾಹುವಿನ ಆದೇಶದ ಕಡೆಗೆ ಮರಳುವವರೆಗೆ..." ಇದುವೇ ಸರಿಯಾದ ಅಭಿಪ್ರಾಯ. (ಹೊರಗುಳಿಯಲು ಹೇಳುವ) ಹದೀಸ್‌ಗಳು ಯಾರು ಸರಿ ಎಂದು ಸ್ಪಷ್ಟವಾಗಿ ತಿಳಿಯದವರಿಗೆ ಅನ್ವಯಿಸುತ್ತದೆ. ಅಥವಾ ಯಾವುದೇ ಒಂದು ಗುಂಪಿಗೂ (ನ್ಯಾಯಸಮ್ಮತ) ತಅವೀಲ್ (ವ್ಯಾಖ್ಯಾನ) ಇಲ್ಲದ ಎರಡು ಅಕ್ರಮಿ ಗುಂಪುಗಳಿಗೆ ಅನ್ವಯಿಸುತ್ತದೆ.
التصنيفات
ಇಮಾಮ್ ವಿರುದ್ಧ ದಂಗೆ(ವಿದ್ರೋಹ)