ಒಬ್ಬ ಘೋಷಕನು ಘೋಷಿಸುವನು: ನೀವು ಸದಾ ಆರೋಗ್ಯವಂತರಾಗಿರುವಿರಿ. ನೀವೆಂದೂ ರೋಗಿಗಳಾಗುವುದಿಲ್ಲ. ನೀವು ಸದಾ ಜೀವಂತವಾಗಿರುವಿರಿ.…

ಒಬ್ಬ ಘೋಷಕನು ಘೋಷಿಸುವನು: ನೀವು ಸದಾ ಆರೋಗ್ಯವಂತರಾಗಿರುವಿರಿ. ನೀವೆಂದೂ ರೋಗಿಗಳಾಗುವುದಿಲ್ಲ. ನೀವು ಸದಾ ಜೀವಂತವಾಗಿರುವಿರಿ. ನೀವೆಂದೂ ಮರಣಹೊಂದುವುದಿಲ್ಲ. ನೀವು ಸದಾ ಯುವಕರಾಗಿರುವಿರಿ. ನೀವೆಂದೂ ವೃದ್ಧರಾಗುವುದಿಲ್ಲ. ನೀವು ಸದಾ ಸುಖಭೋಗಿಗಳಾಗುವಿರಿ. ನೀವೆಂದೂ ನೋವು ಅನುಭವಿಸುವುದಿಲ್ಲ

ಅಬೂ ಸಈದ್ ಖುದ್ರಿ ಮತ್ತು ಅಬೂ ಹುರೈರ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ಘೋಷಕನು ಘೋಷಿಸುವನು: ನೀವು ಸದಾ ಆರೋಗ್ಯವಂತರಾಗಿರುವಿರಿ. ನೀವೆಂದೂ ರೋಗಿಗಳಾಗುವುದಿಲ್ಲ. ನೀವು ಸದಾ ಜೀವಂತವಾಗಿರುವಿರಿ. ನೀವೆಂದೂ ಮರಣಹೊಂದುವುದಿಲ್ಲ. ನೀವು ಸದಾ ಯುವಕರಾಗಿರುವಿರಿ. ನೀವೆಂದೂ ವೃದ್ಧರಾಗುವುದಿಲ್ಲ. ನೀವು ಸದಾ ಸುಖಭೋಗಿಗಳಾಗುವಿರಿ. ನೀವೆಂದೂ ನೋವು ಅನುಭವಿಸುವುದಿಲ್ಲ. ಇದೇ ಅಲ್ಲಾಹನ ಈ ವಚನದ ಅರ್ಥ: "ಆಗ ಅವರೊಡನೆ ಹೇಳಲಾಗುವುದು: ನೀವು ಮಾಡಿದ ಕರ್ಮಗಳಿಗೆ ಪ್ರತಿಫಲವಾಗಿ ಈ ಸ್ವರ್ಗವನ್ನು ನೀವು ಉತ್ತರಾಧಿಕಾರವಾಗಿ ಪಡೆದಿರುವಿರಿ." [ಅಅ್‌ರಾಫ್:43]

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸ್ವರ್ಗವಾಸಿಗಳು ಸ್ವರ್ಗದಲ್ಲಿ ಹಾಯಾಗಿರುವಾಗ ಒಬ್ಬ ಘೋಷಕನು ಅವರನ್ನು ಕರೆದು ಹೇಳುವನು: "ನೀವು ಸ್ವರ್ಗದಲ್ಲಿ ಸದಾ ಆರೋಗ್ಯವಂತರಾಗಿರುವಿರಿ ಮತ್ತು ನಿಮಗೆ ಒಂದು ಚಿಕ್ಕ ಕಾಯಿಲೆ ಕೂಡ ಉಂಟಾಗುವುದಿಲ್ಲ. ನೀವು ಇಲ್ಲಿ ಸದಾ ಜೀವಂತವಾಗಿರುವಿರಿ. ನೀವೆಂದೂ ಇಲ್ಲಿ ಮರಣಹೊಂದುವುದಿಲ್ಲ. ಅದು ಚಿಕ್ಕ ಮರಣವೆಂದು ಕರೆಯಲಾಗುವ ನಿದ್ರೆಯಾಗಿದ್ದರೂ ಸಹ. ನೀವು ಇಲ್ಲಿ ಸದಾ ಯುವಕರಾಗಿರುವಿರಿ. ನೀವೆಂದೂ ಇಲ್ಲಿ ಮುದುಕರಾಗುವುದಿಲ್ಲ. ನೀವು ಇಲ್ಲಿ ಸದಾ ಸುಖಭೋಗಿಗಳಾಗುವಿರಿ. ನೀವೆಂದೂ ದುಃಖಿಸುವುದಿಲ್ಲ ಮತ್ತು ನೋವು ಅನುಭವಿಸುವುದಿಲ್ಲ. ಇದೇ ಅಲ್ಲಾಹನ ಈ ವಚನದ ಅರ್ಥ: "ಆಗ ಅವರೊಡನೆ ಹೇಳಲಾಗುವುದು: ನೀವು ಮಾಡಿದ ಕರ್ಮಗಳಿಗೆ ಪ್ರತಿಫಲವಾಗಿ ಈ ಸ್ವರ್ಗವನ್ನು ನೀವು ಉತ್ತರಾಧಿಕಾರವಾಗಿ ಪಡೆದಿರುವಿರಿ." [ಅಅ್‌ರಾಫ್:43]

فوائد الحديث

ಮನುಷ್ಯನು ಎಷ್ಟೇ ದೊಡ್ಡ ಸುಖಭೋಗದಲ್ಲಿದ್ದರೂ ಸಹ ಅವನ ಜೀವನದ ಸುಖವನ್ನು ಹಾಳು ಮಾಡುವ ನಾಲ್ಕು ಪ್ರಮುಖ ವಿಷಯಗಳಿವೆ: ಅನಾರೋಗ್ಯ, ಮರಣ, ವೃದ್ಧಾಪ್ಯ ಮತ್ತು ವೈರಿಗಳು, ಬಡತನ, ಯುದ್ಧ ಮುಂತಾದವುಗಳನ್ನು ಹೆದರಿ ಅವನಿಗೆ ಉಂಟಾಗುವ ಸಂಕಟ ಮತ್ತು ವ್ಯಥೆ. ಸ್ವರ್ಗವಾಸಿಗಳು ಇವೆಲ್ಲದರಿಂದಲೂ ಮುಕ್ತರಾಗಿದ್ದಾರೆ. ಆದ್ದರಿಂದ ಸ್ವರ್ಗವಾಸಿಗಳು ಪೂರ್ಣರೂಪದ ಸುಖವನ್ನು ಪಡೆಯುತ್ತಾರೆ.

ಸ್ವರ್ಗದ ಸುಖಭೋಗಗಳು ಇಹಲೋಕದ ಸುಖಭೋಗಗಳಿಗಿಂತ ಭಿನ್ನವಾಗಿದೆ. ಏಕೆಂದರೆ, ಸ್ವರ್ಗದ ಸುಖಗಳಿಗೆ ಭಯವಿಲ್ಲ. ಆದರೆ ಇಹಲೋಕದ ಸುಖ ಶಾಶ್ವತವಾಗಿರುವುದಿಲ್ಲ. ನೋವು ಮತ್ತು ಕಾಯಿಲೆಗಳು ಅದಕ್ಕೆ ಅಡ್ಡಿಯಾಗುತ್ತವೆ.

ಸ್ವರ್ಗದ ಸುಖಭೋಗಗಳಿಗೆ ತಲುಪಲು ಸಹಾಯ ಮಾಡುವ ಸತ್ಕರ್ಮಗಳನ್ನು ನಿರ್ವಹಿಸಲು ಪ್ರೋತ್ಸಾಹಿಸಲಾಗಿದೆ.

التصنيفات

Descriptions of Paradise and Hell