ಅದರ ನೀರು ಶುದ್ಧವಾಗಿದೆ ಮತ್ತು ಅದರ ಶವವು ಧರ್ಮಸಮ್ಮತವಾಗಿದೆ

ಅದರ ನೀರು ಶುದ್ಧವಾಗಿದೆ ಮತ್ತು ಅದರ ಶವವು ಧರ್ಮಸಮ್ಮತವಾಗಿದೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಬ್ಬ ವ್ಯಕ್ತಿ ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಾವು ಕಡಲಿನಲ್ಲಿ ಪ್ರಯಾಣ ಮಾಡುವವರು. ನಾವು ನಮ್ಮೊಂದಿಗೆ ಸ್ವಲ್ಪ ನೀರನ್ನು ಒಯ್ಯುತ್ತೇವೆ. ಆ ನೀರಿನಿಂದ ನಾವು ವುದೂ ನಿರ್ವಹಿಸಿದರೆ ನಮಗೆ ಕುಡಿಯಲು ನೀರು ಇರುವುದಿಲ್ಲ. ನಾವು ಸಮುದ್ರದ ನೀರಿನಿಂದ ವುದೂ ಮಾಡಬಹುದೇ?" ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅದರ ನೀರು ಶುದ್ಧವಾಗಿದೆ ಮತ್ತು ಅದರ ಶವವು ಧರ್ಮಸಮ್ಮತವಾಗಿದೆ."

[صحيح]

الشرح

ಒಬ್ಬ ವ್ಯಕ್ತಿ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: ನಾವು ಮೀನುಗಾರಿಕೆ, ವ್ಯಾಪಾರ ಅಥವಾ ಇತರ ಉದ್ದೇಶಗಳಿಗಾಗಿ ನಾವೆಯಲ್ಲಿ ಪ್ರಯಾಣ ಮಾಡುತ್ತೇವೆ. ನಾವು ನಮ್ಮೊಂದಿಗೆ ಕುಡಿಯಲು ಯೋಗ್ಯವಾದ ಸ್ವಲ್ಪ ನೀರನ್ನು ಒಯ್ಯುತ್ತೇವೆ. ನಾವು ಕುಡಿಯುವ ನೀರನ್ನು ವುದೂ ಮತ್ತು ಸ್ನಾನಕ್ಕಾಗಿ ಬಳಸಿದರೆ ನಮಗೆ ಕುಡಿಯಲು ನೀರು ದೊರೆಯುವುದಿಲ್ಲ. ಆದ್ದರಿಂದ ನಾವು ಸಮುದ್ರದ ನೀರಿನಿಂದ ವುದೂ ನಿರ್ವಹಿಸಬಹುದೇ? ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮುದ್ರದ ನೀರಿನ ಬಗ್ಗೆ ಹೀಗೆ ಹೇಳಿದರು: ಅದರ ನೀರು ಸ್ವಯಂ ಶುದ್ಧವಾಗಿದ್ದು ಇತರ ವಸ್ತುಗಳನ್ನೂ ಶುದ್ಧೀಕರಿಸುತ್ತದೆ. ಅದರಿಂದ ವುದೂ ಮತ್ತು ಸ್ನಾನ ಮಾಡಬಹುದು. ಅದರಿಂದ ಉತ್ಪಾದನೆಯಾಗುವ ಮೀನು ಮುಂತಾದವುಗಳನ್ನು ಸೇವಿಸುವುದು ಧರ್ಮಸಮ್ಮತವಾಗಿದೆ. ಅದು ಅದನ್ನು ಹಿಡಿಯುವುದಕ್ಕೆ ಮೊದಲೇ ಸತ್ತು ಸಮುದ್ರದಲ್ಲಿ ತೇಲುತ್ತಿದ್ದರೂ ಸಹ.

فوائد الحديث

ಸಮುದ್ರ ಪ್ರಾಣಿಗಳ ಶವಗಳು ಧರ್ಮಸಮ್ಮತವಾಗಿವೆ. ಸಮುದ್ರದ ಶವಗಳು ಎಂದರೆ, ಸಮುದ್ರದ ನೀರಿನಲ್ಲಿ ಮಾತ್ರ ಬದುಕುವ ಪ್ರಾಣಿಗಳ ಶವಗಳು.

ಪೂರ್ಣ ಪ್ರಯೋಜನ ಉಂಟಾಗುವುದಕ್ಕಾಗಿ ಪ್ರಶ್ನಿಸುವವನು ಪ್ರಶ್ನಿಸಿದ ವಿಷಯಕ್ಕಿಂತಲೂ ಹೆಚ್ಚು ಉತ್ತರ ನೀಡಬಹುದು.

ಶುದ್ಧ ವಸ್ತುವಿನ ಸ್ಪರ್ಶದಿಂದ ನೀರಿನ ರುಚಿ, ಬಣ್ಣ ಅಥವಾ ಪರಿಮಳ ಬದಲಾದರೂ ನೀರು ಅದರ ನಿಜಸ್ವರೂಪದಲ್ಲಿ ಉಳಿದಿರುವ ತನಕ ಅದರ ಶುದ್ಧತೆಯನ್ನು ಕಾಪಾಡಿಕೊಳ್ಳುತ್ತದೆ. ಅದರ ಉಪ್ಪು, ಬಿಸಿ, ಅಥವಾ ತಂಪು ಎಷ್ಟೇ ತೀವ್ರವಾಗಿದ್ದರೂ ಸಹ.

ಸಮುದ್ರದ ನೀರು ದೊಡ್ಡ ಅಶುದ್ಧಿ ಮತ್ತು ಸಣ್ಣ ಅಶುದ್ಧಿಯನ್ನು ನಿವಾರಿಸುತ್ತದೆ. ದೇಹ, ಬಟ್ಟೆ ಮುಂತಾದ ಶುದ್ಧ ವಸ್ತುವಿಗೆ ಅಂಟಿಕೊಂಡ ಮಾಲಿನ್ಯವನ್ನು ಅದು ನಿವಾರಿಸುತ್ತದೆ

التصنيفات

Rulings of Water