Rulings of Water

Rulings of Water

1- ಒಬ್ಬ ವ್ಯಕ್ತಿ ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಾವು ಕಡಲಿನಲ್ಲಿ ಪ್ರಯಾಣ ಮಾಡುವವರು. ನಾವು ನಮ್ಮೊಂದಿಗೆ ಸ್ವಲ್ಪ ನೀರನ್ನು ಒಯ್ಯುತ್ತೇವೆ. ಆ ನೀರಿನಿಂದ ನಾವು ವುದೂ ನಿರ್ವಹಿಸಿದರೆ ನಮಗೆ ಕುಡಿಯಲು ನೀರು ಇರುವುದಿಲ್ಲ. ನಾವು ಸಮುದ್ರದ ನೀರಿನಿಂದ ವುದೂ ಮಾಡಬಹುದೇ?" ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: @"ಅದರ ನೀರು ಶುದ್ಧವಾಗಿದೆ ಮತ್ತು ಅದರ ಶವವು ಧರ್ಮಸಮ್ಮತವಾಗಿದೆ."