ನೀರು ಎರಡು ಕುಲ್ಲತ್‌ನಷ್ಟಿದ್ದರೆ ಅದು ಮಾಲಿನ್ಯವನ್ನು ವಹಿಸುವುದಿಲ್ಲ

ನೀರು ಎರಡು ಕುಲ್ಲತ್‌ನಷ್ಟಿದ್ದರೆ ಅದು ಮಾಲಿನ್ಯವನ್ನು ವಹಿಸುವುದಿಲ್ಲ

ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾಣಿಗಳು ಮತ್ತು ವನ್ಯಮೃಗಗಳು ಸರದಿಯಾಗಿ ಬಂದು ಕುಡಿಯುವ ನೀರಿನ ಬಗ್ಗೆ ಕೇಳಲಾದಾಗ, ಅವರು ಹೇಳಿದರು: "ನೀರು ಎರಡು ಕುಲ್ಲತ್‌ನಷ್ಟಿದ್ದರೆ ಅದು ಮಾಲಿನ್ಯವನ್ನು ವಹಿಸುವುದಿಲ್ಲ."

[صحيح]

الشرح

ಪ್ರಾಣಿಗಳು, ವನ್ಯಮೃಗಗಳು ಮುಂತಾದವುಗಳು ಸಾಮಾನ್ಯವಾಗಿ ಕುಡಿಯುವ ನೀರಿನ ಶುದ್ಧತೆಯ ಬಗ್ಗೆ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಲಾಯಿತು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದ್ದೇನೆಂದರೆ, ನೀರಿನ ಪ್ರಮಾಣವು ಎರಡು ದೊಡ್ಡ ಮಡಕೆಗಳಷ್ಟಿದ್ದರೆ, ಅಂದರೆ ಸುಮಾರು 210 ಲೀಟರ್ ನೀರಿದ್ದರೆ, ಅದು ಹೆಚ್ಚು ಪ್ರಮಾಣದಲ್ಲಿರುವ ನೀರಾಗಿದ್ದು ಅದು ಅಶುದ್ಧವಾಗುವುದಿಲ್ಲ. ಆದರೆ ಅದರ ಬಣ್ಣ, ರುಚಿ ಮತ್ತು ಪರಿಮಳ ಎಂಬ ಅದರ ಮೂರು ಗುಣಗಳಲ್ಲಿ ಯಾವುದಾದರೂ ಒಂದು ಬದಲಾದರೆ ಅದು ಅಶುದ್ಧವಾಗುತ್ತದೆ.

فوائد الحديث

ನೀರಿನ ಮೂರು ಗುಣಗಳಾದ ಬಣ್ಣ, ರುಚಿ ಮತ್ತು ಪರಿಮಳದಲ್ಲಿ ಯಾವುದಾದರೂ ಒಂದು ಬದಲಾದರೆ ನೀರು ಅಶುದ್ಧವಾಗುತ್ತದೆ. ಈ ಹದೀಸ್ ಒಂದು ಸಾಮಾನ್ಯ ತತ್ವವನ್ನು ವಿವರಿಸುತ್ತದೆಯೇ ಹೊರತು ನಿರ್ದಿಷ್ಟ ತತ್ವವನ್ನಲ್ಲ.

ಅಶುದ್ಧ ವಸ್ತು ನೀರನ್ನು ಬದಲಾಯಿಸಿದರೆ ನೀರು ಅಶುದ್ಧವಾಗುತ್ತದೆ ಎಂಬ ವಿಷಯದಲ್ಲಿ ವಿದ್ವಾಂಸರಿಗೆ ಒಮ್ಮತವಿದೆ. ನೀರು ಕಡಿಮೆಯಾಗಿದ್ದರೂ ಹೆಚ್ಚಾಗಿದ್ದರೂ ಸಹ.

التصنيفات

Rulings of Water