ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ಸ್ಥಿತಿಗಳಲ್ಲೂ ಅಲ್ಲಾಹನನ್ನು ಸ್ಮರಿಸುತ್ತಿದ್ದರು

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ಸ್ಥಿತಿಗಳಲ್ಲೂ ಅಲ್ಲಾಹನನ್ನು ಸ್ಮರಿಸುತ್ತಿದ್ದರು

ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ಸ್ಥಿತಿಗಳಲ್ಲೂ ಅಲ್ಲಾಹನನ್ನು ಸ್ಮರಿಸುತ್ತಿದ್ದರು."

[صحيح] [رواه مسلم]

الشرح

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ಹೇಳುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನನ್ನು ಸ್ಮರಿಸಲು ಅತೀವ ಉತ್ಸಾಹ ತೋರುತ್ತಿದ್ದರು. ಅವರು ಎಲ್ಲಾ ಸಮಯ, ಸ್ಥಳ ಮತ್ತು ಸ್ಥಿತಿಗಳಲ್ಲಿ ಅಲ್ಲಾಹನನ್ನು ಸ್ಮರಿಸುತ್ತಿದ್ದರು.

فوائد الحديث

ಅಲ್ಲಾಹನನ್ನು ಸ್ಮರಿಸಲು ಚಿಕ್ಕ ಅಶುದ್ಧಿ ಅಥವಾ ದೊಡ್ಡ ಅಶುದ್ಧಿಯಿಂದ ಶುದ್ದಿಯಾಗಬೇಕೆಂಬ ಷರತ್ತು ಇಲ್ಲವೆಂದು ಈ ಹದೀಸ್ ತಿಳಿಸುತ್ತದೆ.

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸದಾ ಅಲ್ಲಾಹನನ್ನು ಸ್ಮರಿಸುತ್ತಿದ್ದರೆಂದು ಈ ಹದೀಸ್ ತಿಳಿಸುತ್ತದೆ.

ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಕರಿಸಿ ಎಲ್ಲಾ ಸ್ಥಿತಿಗಳನ್ನೂ ಅಲ್ಲಾಹನನ್ನು ಸ್ಮರಿಸುವುದನ್ನು ಹೆಚ್ಚಿಸಲು ಈ ಹದೀಸ್ ಪ್ರೋತ್ಸಾಹಿಸುತ್ತದೆ. ಆದರೆ ಮಲಮೂತ್ರ ವಿಸರ್ಜನೆ ಮುಂತಾದ ಅಲ್ಲಾಹನನ್ನು ಸ್ಮರಿಸಬಾರದ ಸ್ಥಿತಿಗಳ ಹೊರತು.

التصنيفات

Rulings of the Qur'an and Codices