ಹಸನ್ ಮತ್ತು ಹುಸೈನ್ ಸ್ವರ್ಗದ ಯುವಕರ ಮುಖಂಡರಾಗಿದ್ದಾರೆ

ಹಸನ್ ಮತ್ತು ಹುಸೈನ್ ಸ್ವರ್ಗದ ಯುವಕರ ಮುಖಂಡರಾಗಿದ್ದಾರೆ

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹಸನ್ ಮತ್ತು ಹುಸೈನ್ ಸ್ವರ್ಗದ ಯುವಕರ ಮುಖಂಡರಾಗಿದ್ದಾರೆ."

[صحيح] [رواه الترمذي وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಅವರ ಇಬ್ಬರು ಮೊಮ್ಮಕ್ಕಳಾದ ಹಸನ್ ಮತ್ತು ಹುಸೈನ್ (ಇವರು ಅಲಿ ಬಿನ್ ಅಬೂತಾಲಿಬ್ ಮತ್ತು ಫಾತಿಮ ಬಿಂತ್ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಮಕ್ಕಳು) (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ) ಯೌವ್ವನದಲ್ಲಿ ನಿಧನರಾಗಿ ಸ್ವರ್ಗವನ್ನು ಪ್ರವೇಶಿಸಿದವರ ಮುಖಂಡರು ಮತ್ತು ಶ್ರೇಷ್ಠರಾಗಿದ್ದಾರೆ. ಅಥವಾ ಅವರು ಪ್ರವಾದಿಗಳು ಮತ್ತು ಖುಲಫಾಉರ್‍ರಾಶಿದೀನ್ ಗಳನ್ನು ಹೊರತುಪಡಿಸಿ ಉಳಿದ ಸ್ವರ್ಗದ ಯುವಕರಿಗೆ ಮುಖಂಡರಾಗಿದ್ದಾರೆ.

فوائد الحديث

ಇದರಲ್ಲಿ ಹಸನ್ ಮತ್ತು ಹುಸೈನ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಗೆ ಸ್ಪಷ್ಟವಾದ ಶ್ರೇಷ್ಠತೆಯಿದೆಯೆಂದು ತಿಳಿಸಲಾಗಿದೆ.

ಈ ಹದೀಸಿನ ವಿವರಣೆಯಲ್ಲಿ ವಿದ್ವಾಂಸರು ಹೀಗೆ ಹೇಳಿದ್ದಾರೆ: ಈ ಹದೀಸನ್ನು ಹೇಳಲಾದ ಸಮಯದಲ್ಲಿ, ಅವರಿಬ್ಬರು ಈ ಕಾಲದ ಯುವಕರಾದ ಸ್ವರ್ಗದ ಯುವಕರಿಗೆ ಮುಖಂಡರಾಗಿದ್ದಾರೆ. ಅಥವಾ ಪ್ರವಾದಿಗಳು ಮತ್ತು ಖಲೀಫರುಗಳಂತೆ ಮೊತ್ತವಾಗಿ ಶ್ರೇಷ್ಠತೆಯಿದೆಯೆಂದು ಸಾಬೀತಾಗದವರಿಗಿಂತ ಶ್ರೇಷ್ಠರಾಗಿದ್ದಾರೆ. ಅಥವಾ ಅವರು ಸದ್ಗುಣ, ಔದಾರ್ಯ, ಶೌರ್ಯ ಮುಂತಾದ ಯೌವ್ವನ ಮತ್ತು ಧೈರ್ಯದ ಗುಣಲಕ್ಷಣಗಳನ್ನು ಹೊಂದಿರುವವರ ಮುಖಂಡರಾಗಿದ್ದಾರೆ. ಈ ಹದೀಸ್ ಯೌವ್ವನದ ವಯಸ್ಸನ್ನು ಉದ್ದೇಶಿಸಿಲ್ಲ. ಏಕೆಂದರೆ ಹಸನ್ ಮತ್ತು ಹುಸೈನ್ ನಿಧನರಾಗುವಾಗ ವಯಸ್ಕರಾಗಿದ್ದರು.

التصنيفات

Merit of the Prophet's Family