إعدادات العرض
ನಿಶ್ಚಯವಾಗಿಯೂ ರಾತ್ರಿ ಮತ್ತು ಹಗಲು ತಲುಪುವ ಎಲ್ಲಾ ಸ್ಥಳಗಳಿಗೂ ಈ ವಿಷಯವು ತಲುಪಲಿದೆ. ಅಲ್ಲಾಹು ಪಟ್ಟಣದಲ್ಲಿ ಅಥವಾ…
ನಿಶ್ಚಯವಾಗಿಯೂ ರಾತ್ರಿ ಮತ್ತು ಹಗಲು ತಲುಪುವ ಎಲ್ಲಾ ಸ್ಥಳಗಳಿಗೂ ಈ ವಿಷಯವು ತಲುಪಲಿದೆ. ಅಲ್ಲಾಹು ಪಟ್ಟಣದಲ್ಲಿ ಅಥವಾ ಮರುಭೂಮಿಯಲ್ಲಿರುವ ಯಾವುದೇ ಮನೆಗೂ ಈ ಧರ್ಮವು ಪ್ರವೇಶವಾಗುವಂತೆ ಮಾಡದೆ ಬಿಡಲಾರ
ತಮೀಮುದ್ದಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನಿಶ್ಚಯವಾಗಿಯೂ ರಾತ್ರಿ ಮತ್ತು ಹಗಲು ತಲುಪುವ ಎಲ್ಲಾ ಸ್ಥಳಗಳಿಗೂ ಈ ವಿಷಯವು ತಲುಪಲಿದೆ. ಅಲ್ಲಾಹು ಪಟ್ಟಣದಲ್ಲಿ ಅಥವಾ ಮರುಭೂಮಿಯಲ್ಲಿರುವ ಯಾವುದೇ ಮನೆಗೂ ಈ ಧರ್ಮವು ಪ್ರವೇಶವಾಗುವಂತೆ ಮಾಡದೆ ಬಿಡಲಾರ. ಅದು ಗೌರವಾನ್ವಿತರಿಗೆ ಗೌರವವನ್ನು ಅಥವಾ ಅವಮಾನಿತರಿಗೆ ಅವಮಾನವನ್ನು ತರಲಿದೆ. ಅದು ಅಲ್ಲಾಹು ಇಸ್ಲಾಂ ಧರ್ಮದ ಮೂಲಕ ನೀಡುವ ಗೌರವ ಮತ್ತು ಸತ್ಯನಿಷೇಧದ ಮೂಲಕ ನೀಡುವ ಅವಮಾನವಾಗಿದೆ." ತಮೀಮುದ್ದಾರಿ ಹೇಳುತ್ತಿದ್ದರು: ನಾನು ಅದನ್ನು ನನ್ನ ಕುಟುಂಬದವರಲ್ಲೇ ಗುರುತಿಸಿದ್ದೇನೆ. ಅವರಲ್ಲಿ ಇಸ್ಲಾಂ ಸ್ವೀಕರಿಸಿದವರೆಲ್ಲರಿಗೂ ಒಳಿತು, ಘನತೆ ಮತ್ತು ಗೌರವಗಳು ಉಂಟಾಗಿವೆ. ಅವರಲ್ಲಿ ಸತ್ಯನಿಷೇಧಿಗಳಾದ ಎಲ್ಲರಿಗೂ ಅವಮಾನ, ತಿರಸ್ಕಾರ ಮತ್ತು ತೆರಿಗೆ ಉಂಟಾಗಿವೆ.
الترجمة
العربية বাংলা Bosanski English Español فارسی Français Bahasa Indonesia Türkçe اردو हिन्दी Tagalog 中文 Kurdî Português Русский دری অসমীয়া Tiếng Việt አማርኛ Svenska ไทย Yorùbá Кыргызча Kiswahili ગુજરાતી Hausa नेपाली Română മലയാളം Nederlands Oromoo සිංහල پښتو తెలుగు Soomaali Kinyarwanda Malagasy Српски Mooreالشرح
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಈ ಧರ್ಮವು ಭೂಮಿಯ ಎಲ್ಲಾ ಭಾಗಗಳಿಗೂ ತಲುಪಲಿದೆ. ಎಲ್ಲಿಗೆಲ್ಲಾ ರಾತ್ರಿ ಮತ್ತು ಹಗಲು ತಲುಪುತ್ತದೋ ಅಲ್ಲಿಗೆಲ್ಲಾ ಈ ಧರ್ಮವು ತಲುಪಲಿದೆ. ಅಲ್ಲಾಹು ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ, ಅಡವಿಗಳಲ್ಲಿ ಅಥವಾ ಮರುಭೂಮಿಗಳಲ್ಲಿರುವ ಯಾವುದೇ ಒಂದು ಮನೆಯನ್ನೂ, ಅದಕ್ಕೆ ಈ ಧರ್ಮವನ್ನು ಪ್ರವೇಶ ಮಾಡಿಸದೆ ಬಿಡಲಾರ. ಯಾರು ಈ ಧರ್ಮವನ್ನು ಸ್ವೀಕರಿಸಿ ಇದರಲ್ಲಿ ವಿಶ್ವಾಸವಿಡುತ್ತಾರೋ ಅವರು ಇಸ್ಲಾಮಿನ ಗೌರವದ ಮೂಲಕ ಗೌರವಾನ್ವಿತರಾಗುತ್ತಾರೆ. ಯಾರು ಇದನ್ನು ತಿರಸ್ಕರಿಸಿ ಇದನ್ನು ನಿಷೇಧಿಸುತ್ತಾರೋ ಅವರು ಅವಮಾನಿತರು ಮತ್ತು ತಿರಸ್ಕಾರಯೋಗ್ಯರಾಗುತ್ತಾರೆ. ನಂತರ ಸಹಾಬಿವರ್ಯರಾದ ತಮೀಮುದ್ದಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದ ಈ ವಿಷಯವನ್ನು ಅವರು ವಿಶೇಷವಾಗಿ ತಮ್ಮ ಕುಟುಂಬದವರಲ್ಲೇ ಗುರುತಿಸಿದ್ದಾರೆ. ಏಕೆಂದರೆ, ಅವರಲ್ಲಿ ಇಸ್ಲಾಂ ಸ್ವೀಕರಿಸಿದವರೆಲ್ಲರೂ ಘನತೆ-ಗೌರವಗಳನ್ನು ಪಡೆದಿದ್ದಾರೆ. ಅವರಲ್ಲಿ ನಿಷೇಧಿಸಿದವರೆಲ್ಲರೂ ತಮ್ಮ ಸಂಪತ್ತಿನಿಂದ ಮುಸ್ಲಿಮರಿಗೆ ತೆರಿಗೆ ಪಾವತಿ ಮಾಡಬೇಕಾಗಿ ಬಂದಿರುವುದರ ಹೊರತಾಗಿಯೂ ಅವಮಾನ ಮತ್ತು ತಿರಸ್ಕಾರವನ್ನು ಪಡೆದಿದ್ದಾರೆ.فوائد الحديث
ಮುಸಲ್ಮಾನರಿಗೆ ಅವರ ಧರ್ಮವು ಭೂಮಿಯ ಎಲ್ಲಾ ಭಾಗಗಳಿಗೂ ಹರಡಲಿದೆಯೆಂದು ಸುವಾರ್ತೆ ನೀಡಲಾಗಿದೆ.
ಗೌರವವಿರುವುದು ಇಸ್ಲಾಂ ಮತ್ತು ಮುಸ್ಲಿಮರಿಗೆ. ಅವಮಾನವಿರುವುದು ಸತ್ಯನಿಷೇಧ ಮತ್ತು ಸತ್ಯನಿಷೇಧಿಗಳಿಗೆ.
ಇದರಲ್ಲಿ ಪ್ರವಾದಿತ್ವದ ಪುರಾವೆ ಮತ್ತು ಅದರ ಒಂದು ಚಿಹ್ನೆಯಿದೆ. ಅದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದಂತೆಯೇ ಅದು ಸಂಭವಿಸಿದೆ.
التصنيفات
Portents of the Hour