ಓ ಅಲ್ಲಾಹ್, ನಿನಗೆ ನಾನು ಶರಣಾಗಿದ್ದೇನೆ, ನಿನ್ನಲ್ಲಿ ವಿಶ್ವಾಸವಿಟ್ಟಿದ್ದೇನೆ, ನಿನ್ನ ಮೇಲೆ ಭರವಸೆ ಇಟ್ಟಿದ್ದೇನೆ, ನಿನ್ನ ಕಡೆಗೆ…

ಓ ಅಲ್ಲಾಹ್, ನಿನಗೆ ನಾನು ಶರಣಾಗಿದ್ದೇನೆ, ನಿನ್ನಲ್ಲಿ ವಿಶ್ವಾಸವಿಟ್ಟಿದ್ದೇನೆ, ನಿನ್ನ ಮೇಲೆ ಭರವಸೆ ಇಟ್ಟಿದ್ದೇನೆ, ನಿನ್ನ ಕಡೆಗೆ ತಿರುಗಿದ್ದೇನೆ, ನಿನ್ನ ಸಹಾಯದಿಂದ ವಾದಿಸಿದ್ದೇನೆ. ಓ ಅಲ್ಲಾಹ್, ನೀನು ನನ್ನನ್ನು ದಾರಿತಪ್ಪಿಸದಂತೆ ನಿನ್ನ ಘನತೆಯಿಂದ ನಾನು ನಿನ್ನಲ್ಲಿ ಅಭಯ ಬೇಡುತ್ತೇನೆ. ನಿನ್ನ ಹೊರತು ಆರಾಧನೆಗೆ ಅರ್ಹರಾದ ಬೇರೆ ಯಾವುದೇ ಆರಾಧ್ಯನಿಲ್ಲ. ನೀನು ಶಾಶ್ವತವಾಗಿ ಜೀವಂತವಿರುವವನು, ಎಂದಿಗೂ ಸಾಯದವನು. ಜಿನ್ನ್‌ಗಳು ಮತ್ತು ಮನುಷ್ಯರು ಸಾಯುತ್ತಾರೆ

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಿದ್ದರು: "ಓ ಅಲ್ಲಾಹ್, ನಿನಗೆ ನಾನು ಶರಣಾಗಿದ್ದೇನೆ, ನಿನ್ನಲ್ಲಿ ವಿಶ್ವಾಸವಿಟ್ಟಿದ್ದೇನೆ, ನಿನ್ನ ಮೇಲೆ ಭರವಸೆ ಇಟ್ಟಿದ್ದೇನೆ, ನಿನ್ನ ಕಡೆಗೆ ತಿರುಗಿದ್ದೇನೆ, ನಿನ್ನ ಸಹಾಯದಿಂದ ವಾದಿಸಿದ್ದೇನೆ. ಓ ಅಲ್ಲಾಹ್, ನೀನು ನನ್ನನ್ನು ದಾರಿತಪ್ಪಿಸದಂತೆ ನಿನ್ನ ಘನತೆಯಿಂದ ನಾನು ನಿನ್ನಲ್ಲಿ ಅಭಯ ಬೇಡುತ್ತೇನೆ. ನಿನ್ನ ಹೊರತು ಆರಾಧನೆಗೆ ಅರ್ಹರಾದ ಬೇರೆ ಯಾವುದೇ ಆರಾಧ್ಯನಿಲ್ಲ. ನೀನು ಶಾಶ್ವತವಾಗಿ ಜೀವಂತವಿರುವವನು, ಎಂದಿಗೂ ಸಾಯದವನು. ಜಿನ್ನ್‌ಗಳು ಮತ್ತು ಮನುಷ್ಯರು ಸಾಯುತ್ತಾರೆ."

[صحيح] [متفق عليه وهذا لفظ مسلم ورواه البخاري مختصرًا]

الشرح

ಇದು ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಿರ್ವಹಿಸುತ್ತಿದ್ದ ಒಂದು ಪ್ರಾರ್ಥನೆಯಾಗಿದೆ: "ಓ ಅಲ್ಲಾಹ್, ನಿನಗೆ ನಾನು ಶರಣಾಗಿದ್ದೇನೆ" ಅಂದರೆ ವಿಧೇಯನಾಗಿದ್ದೇನೆ. "ನಿನ್ನಲ್ಲಿ ವಿಶ್ವಾಸವಿಟ್ಟಿದ್ದೇನೆ" ಅಂದರೆ ನಾನು ನಿನ್ನನ್ನು ನಂಬಿದ್ದೇನೆ ಮತ್ತು ಒಪ್ಪಿಕೊಂಡಿದ್ದೇನೆ. "ನಿನ್ನ ಮೇಲೆ ಭರವಸೆ ಇಟ್ಟಿದ್ದೇನೆ" ಅಂದರೆ ನಾನು ಎಲ್ಲವನ್ನೂ ನಿನಗೆ ಒಪ್ಪಿಸಿದ್ದೇನೆ ಮತ್ತು ನಿನ್ನನ್ನು ಅವಲಂಬಿಸಿದ್ದೇನೆ. "ನಿನ್ನ ಕಡೆಗೆ ತಿರುಗಿದ್ದೇನೆ" ಅಂದರೆ ನಾನು ಮರಳಿದ್ದೇನೆ ಮತ್ತು ನಿನ್ನ ಕಡೆಗೆ ಗಮನ ಹರಿಸಿದ್ದೇನೆ. "ನಿನ್ನ ಸಹಾಯದಿಂದ ವಾದಿಸಿದ್ದೇನೆ" ಅಂದರೆ ನಾನು ನಿನ್ನ ಶತ್ರುಗಳೊಂದಿಗೆ ವಾದಿಸಿದ್ದೇನೆ. "ಓ ಅಲ್ಲಾಹ್, ನಾನು ನಿನ್ನಲ್ಲಿ ಅಭಯ ಬೇಡುತ್ತೇನೆ" ಅಂದರೆ ನಾನು ನಿನ್ನಲ್ಲಿ ಆಶ್ರಯ ಪಡೆಯುತ್ತೇನೆ. "ನಿನ್ನ ಘನತೆಯಿಂದ" ಅಂದರೆ ನಿನ್ನ ರಕ್ಷಣೆ ಮತ್ತು ಪ್ರಾಬಲ್ಯದಿಂದ. "ನಿನ್ನ ಹೊರತು ಆರಾಧನೆಗೆ ಅರ್ಹರಾದ ಬೇರೆ ಯಾವುದೇ ಆರಾಧ್ಯನಿಲ್ಲ" ಅಂದರೆ ನಿನ್ನ ಹೊರತು ಬೇರೆ ಯಾವುದೇ ನಿಜವಾದ ಆರಾಧ್ಯನಿಲ್ಲ. "ನೀನು ನನ್ನನ್ನು ದಾರಿತಪ್ಪಿಸದಂತೆ" ಅಂದರೆ ನಿನ್ನ ಸನ್ಮಾರ್ಗದಿಂದ ಮತ್ತು ನಿನ್ನ ತೃಪ್ತಿಗೆ ತಲುಪಿಸುವ ಯಶಸ್ಸಿನಿಂದ ನೀನು ನನ್ನನ್ನು ದೂರ ಮಾಡದಂತೆ. "ನೀನು ಶಾಶ್ವತವಾಗಿ ಜೀವಂತವಿರುವವನು, ಎಂದಿಗೂ ಸಾಯದವನು" ಅಂದರೆ ನೀನು ಎಂದಿಗೂ ನಾಶವಾಗುವುದಿಲ್ಲ, "ಜಿನ್ನ್‌ಗಳು ಮತ್ತು ಮನುಷ್ಯರು ಸಾಯುತ್ತಾರೆ."

فوائد الحديث

ಯಾವುದೇ ಬೇಡಿಕೆಯನ್ನು ಕೇಳುವ ಮೊದಲು ಸ್ತುತಿ ಪ್ರಶಂಸೆಗಳನ್ನು ಸಲ್ಲಿಸುವುದು ನಿಯಮವಾಗಿದೆ.

ಅಲ್ಲಾಹುವಿನ ಮೇಲೆ ಮಾತ್ರ ಭರವಸೆ ಇಡುವುದು ಮತ್ತು ಅವನಿಂದ ಮಾತ್ರ ರಕ್ಷಣೆ ಬೇಡುವುದು ಕಡ್ಡಾಯವಾಗಿದೆ. ಏಕೆಂದರೆ ಅವನು ಪರಿಪೂರ್ಣ ಗುಣಗಳನ್ನು ಹೊಂದಿದವನು. ಅವನು ಮಾತ್ರವೇ ಅವಲಂಬಿಸಬೇಕಾದವನು. ಸೃಷ್ಟಿಗಳೆಲ್ಲರೂ ಅಶಕ್ತರು ಮತ್ತು ಸಾವಿಗೆ ಶರಣಾಗುವವರಾಗಿದ್ದಾರೆ. ಆದ್ದರಿಂದ ಅವರು ಯಾರೂ ಅವಲಂಬಿಸಲು ಅರ್ಹರಲ್ಲ.

ಸತ್ಯವಾದ ವಿಶ್ವಾಸ ಮತ್ತು ಪರಮೋಚ್ಛ ದೃಢನಂಬಿಕೆಯನ್ನು ವ್ಯಕ್ತಪಡಿಸುವ ಈ ಸಮಗ್ರ ಮತ್ತು ಪರಿಣಾಮಕಾರಿ ಪದಗಳನ್ನು ಹೊಂದಿರುವ ಪ್ರಾರ್ಥನೆಗಳನ್ನು ಪ್ರಾರ್ಥಿಸುವ ಮೂಲಕ ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಅನುಕರಿಸಬೇಕೆಂದು ತಿಳಿಸಲಾಗಿದೆ.

ಅಲ್ಲಾಮ ಸಿಂದೀ ಹೇಳುತ್ತಾರೆ: "ಹದೀಸಿನಲ್ಲಿರುವ "ನೀನು ಶಾಶ್ವತವಾಗಿ ಜೀವಂತವಿರುವವನು" ಎಂಬುದರ ಅರ್ಥ: ಅಭಯ ಬೇಡಲು ಅರ್ಹನಾಗಿರುವವನು ನೀನು ಮಾತ್ರ. ನಿನ್ನ ಹೊರತು ಯಾರೂ ಅದಕ್ಕೆ ಅರ್ಹರಲ್ಲ."

التصنيفات

Prophetic Guidance on Remembering Allah, Reported Supplications