ಒಬ್ಬ ಮುಸ್ಲಿಂ ದಾಸನು - ಅಥವಾ ಸತ್ಯವಿಶ್ವಾಸಿಯು - ವುಝೂ (ಶುದ್ಧೀಕರಣ) ಮಾಡಿ, ತನ್ನ ಮುಖವನ್ನು ತೊಳೆದಾಗ, ಅವನು ತನ್ನ ಕಣ್ಣುಗಳಿಂದ…

ಒಬ್ಬ ಮುಸ್ಲಿಂ ದಾಸನು - ಅಥವಾ ಸತ್ಯವಿಶ್ವಾಸಿಯು - ವುಝೂ (ಶುದ್ಧೀಕರಣ) ಮಾಡಿ, ತನ್ನ ಮುಖವನ್ನು ತೊಳೆದಾಗ, ಅವನು ತನ್ನ ಕಣ್ಣುಗಳಿಂದ ನೋಡಿದ ಪ್ರತಿಯೊಂದು ಕಿರಿಯ ಪಾಪವು ನೀರಿನೊಂದಿಗೆ - ಅಥವಾ ನೀರಿನ ಕೊನೆಯ ಹನಿಯೊಂದಿಗೆ - ಅವನ ಮುಖದಿಂದ ಹೊರಬರುತ್ತದೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ಮುಸ್ಲಿಂ ದಾಸನು - ಅಥವಾ ಸತ್ಯವಿಶ್ವಾಸಿಯು - ವುಝೂ (ಶುದ್ಧೀಕರಣ) ಮಾಡಿ, ತನ್ನ ಮುಖವನ್ನು ತೊಳೆದಾಗ, ಅವನು ತನ್ನ ಕಣ್ಣುಗಳಿಂದ ನೋಡಿದ ಪ್ರತಿಯೊಂದು ಕಿರಿಯ ಪಾಪವು ನೀರಿನೊಂದಿಗೆ - ಅಥವಾ ನೀರಿನ ಕೊನೆಯ ಹನಿಯೊಂದಿಗೆ - ಅವನ ಮುಖದಿಂದ ಹೊರಬರುತ್ತದೆ. ಅವನು ತನ್ನ ಕೈಗಳನ್ನು ತೊಳೆದಾಗ, ಅವನ ಕೈಗಳಿಂದ ಮಾಡಿದ ಪ್ರತಿಯೊಂದು ಕಿರಿಯ ಪಾಪವು ನೀರಿನೊಂದಿಗೆ - ಅಥವಾ ನೀರಿನ ಕೊನೆಯ ಹನಿಯೊಂದಿಗೆ - ಅವನ ಕೈಗಳಿಂದ ಹೊರಬರುತ್ತದೆ. ಅವನು ತನ್ನ ಕಾಲುಗಳನ್ನು ತೊಳೆದಾಗ, ಅವನ ಕಾಲುಗಳಿಂದ ನಡೆದ ಪ್ರತಿಯೊಂದು ಕಿರಿಯ ಪಾಪವು ನೀರಿನೊಂದಿಗೆ - ಅಥವಾ ನೀರಿನ ಕೊನೆಯ ಹನಿಯೊಂದಿಗೆ - ಅವನ ಕಾಲುಗಳಿಂದ ಹೊರಬರುತ್ತದೆ. ಎಷ್ಟರವರೆಗೆಂದರೆ ಅವನು ಪಾಪಗಳಿಂದ ಶುದ್ಧನಾಗಿ ಹೊರಬರುವವರೆಗೆ."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಒಬ್ಬ ಮುಸ್ಲಿಂ ಅಥವಾ ಸತ್ಯವಿಶ್ವಾಸಿ ವುಝೂ ಮಾಡಿದಾಗ ಮತ್ತು ವುಝೂವಿನ ನಡುವೆ ತನ್ನ ಮುಖವನ್ನು ತೊಳೆದಾಗ, ಅವನು ತನ್ನ ಕಣ್ಣುಗಳಿಂದ ನೋಡಿದ ಪ್ರತಿಯೊಂದು ಕಿರಿಯ ಪಾಪವು ಕೆಳಗೆ ಬೀಳುವ ನೀರಿನೊಂದಿಗೆ ಅಥವಾ ನೀರಿನ ಕೊನೆಯ ಹನಿಯೊಂದಿಗೆ ಅವನ ಮುಖದಿಂದ ಹೊರಬರುತ್ತದೆ. ಅವನು ತನ್ನ ಕೈಗಳನ್ನು ತೊಳೆದಾಗ, ಅವನ ಕೈಗಳಿಂದ ಮಾಡಿದ ಪ್ರತಿಯೊಂದು ಕಿರಿಯ ಪಾಪವು ಆ ನೀರಿನೊಂದಿಗೆ ಅಥವಾ ನೀರಿನ ಕೊನೆಯ ಹನಿಯೊಂದಿಗೆ ಅವನ ಕೈಗಳಿಂದ ಹೊರಬರುತ್ತದೆ. ಅವನು ತನ್ನ ಕಾಲುಗಳನ್ನು ತೊಳೆದಾಗ, ಅವನ ಕಾಲುಗಳಿಂದ ನಡೆದ ಪ್ರತಿಯೊಂದು ಕಿರಿಯ ಪಾಪವು ಆ ನೀರಿನೊಂದಿಗೆ ಅಥವಾ ನೀರಿನ ಕೊನೆಯ ಹನಿಯೊಂದಿಗೆ ಅವನ ಕಾಲುಗಳಿಂದ ಹೊರಬರುತ್ತದೆ. ಎಲ್ಲಿಯವರೆಗೆಂದರೆ ವುಝೂ ಮುಗಿದ ನಂತರ ಅವನು ಕಿರಿಯ ಪಾಪಗಳಿಂದ ಶುದ್ಧನಾಗಿ ಬಿಡುತ್ತಾನೆ.

فوائد الحديث

ವುಝೂವನ್ನು ಸರಿಯಾಗಿ ನಿರ್ವಹಿಸುವುದರ ಶ್ರೇಷ್ಠತೆಯನ್ನು ಮತ್ತು ಅದು ಪಾಪಗಳನ್ನು ಕ್ಷಮಿಸುತ್ತದೆ ಎಂಬುದನ್ನು ತಿಳಿಸಲಾಗಿದೆ.

ಪ್ರತಿಫಲ ಮತ್ತು ಪುಣ್ಯವನ್ನು ಉಲ್ಲೇಖಿಸುವ ಮೂಲಕ ಜನರನ್ನು ಸತ್ಕರ್ಮಗಳಿಗೆ ಮತ್ತು ಆರಾಧನೆಗೆ ಪ್ರೋತ್ಸಾಹಿಸುವುದು ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಚರ್ಯೆಯಾಗಿದೆ.

ಮನುಷ್ಯನ ಪ್ರತಿಯೊಂದು ಅಂಗವು ಕೆಲವು ಪಾಪಗಳನ್ನು ಮಾಡುತ್ತವೆ. ಆದ್ದರಿಂದ ಪಾಪಗಳು ಅವುಗಳನ್ನು ಮಾಡಿದ ಪ್ರತಿಯೊಂದು ಅಂಗವನ್ನು ಹಿಂಬಾಲಿಸುತ್ತವೆ ಮತ್ತು ತೌಬಾ (ಪಶ್ಚಾತ್ತಾಪ) ಮಾಡಿದಾಗ ಪ್ರತಿಯೊಂದು ಅಂಗದಿಂದ ಹೊರಬರುತ್ತವೆ.

ವುಝೂವಿನಲ್ಲಿ ಭೌತಿಕ ಶುದ್ಧೀಕರಣವಿದೆ. ಇದು ವುಝೂವಿನ ಅಂಗಗಳನ್ನು ತೊಳೆದಾಗ ಸಂಭವಿಸುತ್ತದೆ. ಹಾಗೆಯೇ ಅಂಗಗಳಿಂದ ಮಾಡಿದ ಪಾಪಗಳನ್ನು ನಿವಾರಿಸುವ ಆಧ್ಯಾತ್ಮಿಕ ಶುದ್ಧೀಕರಣವಿದೆ.

التصنيفات

Ablution, Merits of Organs' Acts